ಹುಣಸೂರು : ಮಕ್ಕಳ ಮನಸ್ಸು ಯಾವಾಗಲೂ ಮುಗ್ದ. ಸತ್ಯವನ್ನೇ ನುಡಿಯುವುದರಿಂದ ದೇವರ ಸಮಾನರಾಗಿದ್ದಾರೆ ಎಂದು ರೋಟರಿ ಸಂಸ್ಥೆ ಅಧ್ಯಕ್ಷ ಹೆಚ್.ಆರ್.ಕೃಷ್ಣಕುಮಾರ್ ತಿಳಿಸಿದರು.
ನಗರದ ರೋಟರಿ ಶಾಲೆ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆ, ಕನ್ನಡ ರಾಜ್ಯೋತ್ಸವ, ಹಾಗೂ ದೀಪೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಬಾಲ್ಯದಲ್ಲಿ ತಮ್ಮ ಮುಗ್ದತೆಯಿಂದಲೇ ಎಲ್ಲರನ್ನು ಆಕರ್ಷಿಸುವ ಪ್ರವೃತ್ತಿಯನ್ನು ಹೊಂದಿದ್ದು ಅವರಿಗೆ ಮಾತ್ರ ಹಾಲಿನಂತ ಮನಸ್ಸು ಇರಲು ಸಾಧ್ಯವೆಂದರು.
ರೊ.ರಾಜಶೇಖರ್ ಮಾಗನಾಡಿ, ಮಕ್ಕಳು ಜನ್ಮನೀಡಿದ ತಂದೆ, ತಾಯಿ, ವಿದ್ಯೆ ಕಲಿಸಿದ ಗುರುವನ್ನು ಮರೆಯಬಾರದು. ಆಗ ಮಾತ್ರ ಬದುಕಿನ ಯಶಸ್ವಿ ವ್ಯಕ್ತಿಯಾಗಿ ನಿಲ್ಲಲು ಸಾಧ್ಯವಾಗಿದ್ದು, ಉತ್ತಮ ವಿದ್ಯಾರ್ಥಿಯಾಗಿ ರೂಪುಗೊಳ್ಳಲು ಕಲಿಕೆಯನ್ನು ತಮ್ಮದಾಗಿಸಿಕೊಳ್ಳಿ ಎಂದರು.
ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ದೀಪ ಮಾತನಾಡಿ, ಆಂಗ್ಲ ಭಾಷೆಯ ಜತೆಗೆ. ಕನ್ನಡವನ್ನು ಹೆಚ್ಚು ಕಲಿಯುವ ಮೂಲಕ ಭಾಷಾ ಜ್ಞಾನವನ್ನು ಮೈಗೂಡಿಸಿಕೊಂಡು ಮುನ್ನಡೆಯಿರಿ. ನಿಮ್ಮ ಜೀವ ಹಸನಾಗಲಿದೆ ಎಂದರು.ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಹರೀಶ್ ಬಿ. ಎನ್.ಮಕ್ಕಳಿಗೆ ಹಿತವಚನದ ಮೂಲಕ ನಾಡು ಕಂಡ ಕವಿಗಳ ಮಹತ್ವನ್ನು ತಿಳಿಸಿಕೊಟ್ಟ ಅವರು, ಕಲೆ ಮತ್ತು ಸಂಸ್ಕತಿಯನ್ನು ಉಳಿಸಲು ಮತ್ತು ಕನ್ನಡ ಭಾಷೆಯನ್ನು ಬೆಳಸಲು ಪ್ರಾಥಮಿಕ ಹಂತದಿಂದಲೇ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕೆಂದರು.
ಶಿಕ್ಷಕ ಲೋಕೇಶ್ ಕನ್ನಡದ ಕುರಿತು ಒಂದು ಗೀತೆಯನ್ನು ರಚಿಸಿ, ಗಾಯನದ ಮೂಲಕ ಮಕ್ಕಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ, ಶಿಕ್ಷಕಿಯರಾದ ಕೃತಿಕಾ, ಶರ್ಮಿಳಾ, ಆಶಾ,ಫಾತಿಮಾ ರುಹಾರಾ, ಸುಭದ್ರ ಸಿಂಧು, ಶೃತಿ, ಸಮಿನಾ ಫರ್ವಿನ್, ಮಮತಾ ಕೆ.ಡಿ. ಷರೀಫ್ ಇದ್ದರು



