ವರದಿ ಎಡತರೆ ಮಹೇಶ್
ಎಚ್ ಡಿ ಕೋಟೆ : ವೀರನಹೊಸಹಳ್ಳಿ ಅರಣ್ಯ ವನ್ಯಜೀವಿ ವಲಯದಿಂದ ಎಚ್ ಡಿ ಕೋಟೆ ತಾಲೂಕು ಕೆ. ಎಡತೊರ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಎರಡು ದಿನ ಚಿಣ್ಣರ ವನದರ್ಶನ ಕಾರ್ಯಕ್ರಮ ಮಾಡಲಾಯಿತು.
ಪ್ರಮುಖವಾಗಿ ಚಿನ್ನರ ವನದರ್ಶನ ಕಾರ್ಯಕ್ರಮವನ್ನು ಅರಣ್ಯ ಇಲಾಖೆಯು ವ್ಯಾಪ್ತಿಗೆ ಬರುವ ಕಾಡಂಚಿನ ಗ್ರಾಮಗಳ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಆಯೋಜಿಸಲಾಗಿದ್ದು, ಮಕ್ಕಳಿಗೆ ಅರಣ್ಯ ಸಂಪನ್ಮೂಲ, ವೈವಿಧ್ಯತೆ, ಮಾನವ ವನ್ಯಜೀವಿ ಸಂಘರ್ಷ ಹಾಗೂ ಅರಣ್ಯ ಸಂರಕ್ಷಣೆ ಇತ್ಯಾದಿ ಇವುಗಳ ಬಗ್ಗೆ ಅರಿವು ಮೂಡಿಸುವ ಹಿತದೃಷ್ಟಿಯಿಂದ ಸದರಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದು ಅರಣ್ಯ ವಲಯ ಅಧಿಕಾರಿ ಆರ್ ಎಫ್ ಓ ಅಭಿಷೇಕ್ ತಿಳಿಸಿದರು.

ನಂತರ ಅರಣ್ಯ ಸಮುದಾಯ ಭವನದಲ್ಲಿ ಕಾರ್ಯಕ್ರಮ ನಡೆಯಿತು ಕಾರ್ಯಗಾರದಲ್ಲಿ ಹಲವಾರು ವಿಚಾರಗಳನ್ನ ನಮಗೆ ತಿಳಿಸಿಕೊಟ್ಟ ನಾವು ಶಾಲೆಯಲ್ಲಿ ಪ್ರಾಣಿಗಳ ಬಗ್ಗೆ ಹಾಗೂ ಗಿಡ ಮರ ಬೆಳೆಸುವುದರ ಬಗ್ಗೆ ಶಿಕ್ಷಕರು ತಿಳಿಸಿಕೊಡುತ್ತಿದ್ದರು ಅರಣ್ಯ ಲೇಖ ಅಧಿಕಾರಿಗಳು ಪ್ರಾಣಿಗಳ ಬಗ್ಗೆ ಪಕ್ಷಿಗಳ ಬಗ್ಗೆ ಅವುಗಳು ಯಾವ ರೀತಿ ಜೀವಿಸುತ್ತವೆ ರಾಣಿ ಪಕ್ಷಿಗಳ ನಡುವೆ ಸಂಬಂಧ ಹೇಗಿರುತ್ತದೆ ಮತ್ತು ಆನೆಗಳನ್ನು ಮಾಸ್ತಿಗುಡಿ ಅರಣ್ಯದಲ್ಲಿ ಆನೆಗಳನ್ನು ಪಳಗಿಸುವುದು ಹೇಗೆ ಮನುಷ್ಯರಿಗೂ ಪ್ರಾಣಿ ಪಕ್ಷಿಗಳು ಇರುವ ವ್ಯತ್ಯಾಸವೇನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯೊಂದಿಗೆ ಕಣ್ಣಿನಿಂದ ನಾವುಗಳು ವೀಕ್ಷಣೆ ಮಾಡಿ ನೈಜೇ ಸತ್ಯವನ್ನು ತಿಳಿದುಕೊಂಡೆವು ಅರಣಾಧಿಕಾರಿಗಳು ತಿಳಿಸಿಕೊಟ್ಟಿರುವ ಎಲ್ಲಾ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯುತ್ತೇವೆ ಎಂದು ಶಾಲಾ ಮಕ್ಕಳು ಹರ್ಷ ವ್ಯಕ್ತಪಡಿಸುತ್ತಾ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮತ್ತು ಸರಕಾರಕ್ಕೆ ಹಾಗೂ ಶಿಕ್ಷಕರಿಗೆ ಶಾಲಾ ಮಕ್ಕಳು ಅಭಿನಂದಿಸಿದರು.
ಈ ಕಾರ್ಯಕ್ರಮದಲ್ಲಿ RFO ಅಭಿಷೇಕ್ , DRFO ಸಚಿನ್ , ಸುನಿಲ್ , ಬೀಟ್ ಫಾರೆಸ್ಟ್ ವೆಂಕಟೇಶ್ ಶಾಲಾ ಶಿಕ್ಷಕರು ಅರಣ್ಯ ಅಧಿಕಾರಿಗಳು ಪಾಲ್ಗೊಂಡಿದ್ದರು