ಚಿತ್ರದುರ್ಗ: ಬೆಂಗಳೂರಲ್ಲಿ ಸೇವೆ ಸಲ್ಲಿಸುತ್ತಿದ್ದ ಚಿತ್ರದುರ್ಗ ಮೂಲಕ ಸಿಪಿಐ ಲಿಂಗರಾಜ್(39) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಈ ಹಿಂದೆ ಪಿಎಸ್’ಐ ಆಗಿ ಚಿತ್ರದುರ್ಗದಲ್ಲಿ ಸೇವೆ ಸಲ್ಲಿಸಿದ್ದರು.
ನಿನ್ನೆ ಬೆಂಗಳೂರಿಂದ ಚಿತ್ರದುರ್ಗ ನಗರಕ್ಕೆ ಆಗಮಿಸಿ, ಖಾಸಗಿ ಲಾಡ್ಜ್ (ನವೀನ್ ರೆಸಿಡೆನ್ಸಿ) ನಲ್ಲಿ ವಾಸ್ತವ್ಯ ಹೂಡಿದ್ದರು.
ಬೆಳಗ್ಗೆ ಎದೆನೋವು ಎಂದು ಬಸವೇಶ್ವರ ಆಸ್ಪತ್ರೆಗೆ ತೆರಳುವ ತೆರಳುವ ವೇಳೆ ಲಿಂಗರಾಜ್ ಸಾವನ್ನಪ್ಪಿದ್ದಾರೆ.
ಚಿತ್ರದುರ್ಗ ನಗರದ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.