Monday, December 2, 2024
Google search engine

Homeರಾಜ್ಯಸುದ್ದಿಜಾಲಚುಂಚನಕಟ್ಟೆ: ಕಾವೇರಿ ನದಿಯ ಧನುಷ್ಕೋಟಿ ಜಲಪಾತೋತ್ಸವ- 2024 ವರ್ಣ ರಂಜಿತಾ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಮಾರೋಪ

ಚುಂಚನಕಟ್ಟೆ: ಕಾವೇರಿ ನದಿಯ ಧನುಷ್ಕೋಟಿ ಜಲಪಾತೋತ್ಸವ- 2024 ವರ್ಣ ರಂಜಿತಾ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಮಾರೋಪ

ವರದಿ : ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆಯಲ್ಲಿ ಜಿಲ್ಲಾಡಳಿತ ಮತ್ತು ಪ್ರವಾಸೋಧ್ಯಮ ಇಲಾಖೆಯ ವತಿಯಿಂದ ನಡೆದ ಕಾವೇರಿ ನದಿಯ ಧನುಷ್ಕೋಟಿ ಜಲಪಾತೋತ್ಸವ- 2024 ವರ್ಣ ರಂಜಿತಾ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಭಾನುವಾರ ಸಮಾರೋಪಗೊಂಡಿತು.

ಮೊದಲಿಗೆ ಮೈಸೂರಿನ ರಶ್ಮಿ ಮತ್ತು ತಂಡದವರು ನಡೆಸಿ ಕೊಟ್ಟ ವಿವಿಧ ಜನಪದ ಹಾಡುಗಳ ಕಾರ್ಯಕ್ರಮಗಳು ನೆರದಿದ್ದವರ ಮನಸೂರೆ ಗೊಂಡಿತಲ್ಲದೇ ಇನ್ನು ಯು.ರಾಜೇಶ್ ತಂಡದವರು ಸಿ‌.ಅಶ್ವಥ್ ಅವರ ನೆನಪಿನ ಕನ್ನಡವೇ ಸತ್ಯ ಕನ್ನಡವೇ ಹೆಸರಿನಲ್ಲಿ ಅಶ್ವಥ್ ಅವರ ಕಂಠ ಸಿರಿಯಲ್ಲಿ ಮೂಡಿ ಬಂದಿದ್ದ ಹಾಡುಗಳನ್ನು ಹಾಡುವ ಮೂಲಕ ಮಂತ್ರ ಮುಗ್ದರನ್ನಾಗಿಸಿತು.

ಇನ್ನು ಕಾಂತ್ರಿ ಚಿತ್ರದ ಪುಷ್ಟವತಿ ಖ್ಯಾತಿಯ ನಿಮಿತಾ ರತ್ನಾಕರ್ ಮತ್ತು ಕಿರುತೆರೆಯ ಅಗ್ನಿ ಸಾಕ್ಷಿಯ ಪ್ರಿಯಾಂಕ ಅವರು ತಂಡದವರು ನಡೆಸಿ ಕೊಟ್ಟ ಸ್ಯಾಂಡಲ್ ವುಡ್ ನೈಟ್ಸ್ ಕಾರ್ಯಕ್ರಮದಲ್ಲಿ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಮೂವಿಯ ರಾ.ರಾ.ರುಕ್ಕಮ್ಮ ಮತ್ತು ದರ್ಶನ್ ಅಭಿನಯದ ಕ್ರಾಂತಿ ಚಿತ್ರದ ಪುಷ್ವವತಿ ಹಾಡಿನ ನೃತ್ಯ ನೋಡುಗರ ಹುಚ್ಚೆದ್ದು ಕುಣಿಯುವಂತೆ ಮಾಡಿತು.

ಚುಂಚನಕಟ್ಟೆಯಲ್ಲಿ ನಡೆದ ಜಲಪಾತೋತ್ಸವ ಕಾರ್ಯಕ್ರಮದಲ್ಲಿ ನಡೆದ ನೃತ್ಯ ಕಾರ್ಯ

ಇದರ ಜೊತೆಗೆ ಖ್ಯಾತ ಸಂಗೀತಾ ನಿರ್ದೇಶಕ ಮತ್ತು ಗಾಯಕರಾದ ಮಣಿಕಾಂತ್ ಕದ್ರಿ ಮತ್ತು ಹಂಸಿಕಾ ಅಯ್ಯರ್ ಅವರ ತಂಡದವರು ನಡೆಸಿ ಕೊಟ್ಟ ಸಂಗೀತಾ ಸಂಜೆ ರಸಮಂಜರಿ ಕಾರ್ಯಕ್ರಮದಲ್ಲಿ‌ ಮಣಿಕಾಂತ್ ಕದ್ರಿ ಅವರ ಸಂಗೀತಾ ಮತ್ತು ವಿವಿಧ ಹಾಡುಗಳ ಗಾಯನಕ್ಕೆ ನೆರೆದಿದ್ದ ಜನರು ಮನ ಸೋತರು.

ಕಾರ್ಯಕ್ರಮದಲ್ಲಿ ಶಾಸಕ ಡಿ.ರವಿಶಂಕರ್ ಮತ್ತು ಸುನೀತಾ ರವಿಶಂಕರ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಚುಂಚನಕಟ್ಟೆಯಲ್ಲಿ ನಡೆದ ಜಲಪಾತೋತ್ಸವ ಕಾರ್ಯಕ್ರಮವನ್ನು ಶಾಸಕ ಡಿ.ರವಿಶಂಕರ್ ಅವರು ತಮ್ಮ ಪತ್ನಿ ಸುನಿತಾ ಮತ್ತು ತಮ್ಮ ಕುಟುಂಬದೊಂದಿಗೆ ಜನರ ಮಧ್ಯ ಕುಳಿತು ವಿಕ್ಷಣೆ ಮಾಡಿದರು

ಈ ಸಂದರ್ಭದಲ್ಲಿ ಕಾಂಗ್ರೇಸ್ ಮುಖಂಡ ದೊಡ್ಡಸ್ವಾಮೇಗೌಡ, ತಾ.ಪಂ.ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಎಸಿ.ವಿಜಯಕುಮಾರ್, ತಹಸೀಲ್ದಾರ್ ಗಳಾದ ಜೆ.ಸುರೇಂದ್ರ ಮೂರ್ತಿ, ನರಗುಂದಾ, ತಾಲೂಕು ಆರೋಗ್ಯಧಿಕಾರಿ ಡಾ.ನಟರಾಜು, ಎಇಇ ಅರ್ಕೇಶ್ ಮೂರ್ತಿ , ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಉದಯಶಂಕರ್, ಪುರಸಭಾ ಸದಸ್ಯ ನಟರಾಜು, ಮುಖಂಡರಾದ ಹೊಸೂರು ಮಾದು, ಹೆಚ್.ಜೆ.ರಮೇಶ್, ಚಿಕ್ಕಕೊಪ್ಪಲು ಗಿರೀಶ್, ಸಿ.ಬಿ.ಸಂತೋಷ್, ಹೆಬ್ಬಾಳು ಸೋಮಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.

ಮುನ್ನಚ್ಚರಿಕೆಯ ಕ್ರಮವಾಗಿ‌ ಸಾಲಿಗ್ರಾಮ ವೃತ್ತ ನಿರೀಕ್ಷ ಕೃಷ್ಣರಾಜು, ಕೆ.ಆರ್.ನಗರ ಠಾಣೆಯ ವೃತ್ತ ನಿರೀಕ್ಷಕ ಶಿವಪ್ರಕಾಶ್ , ಪಿಎಸ್ ಐ ಚೇತನ್ ನೇತೃತ್ವದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.


RELATED ARTICLES
- Advertisment -
Google search engine

Most Popular