ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಜನವರಿ 15 ರಂದು ನಡೆಯಲಿರುವ ಇತಿಹಾಸ ಪ್ರಸಿದ್ದ ಚುಂಚನಕಟ್ಟೆ ರಥೋತ್ಸವದ ಹಿನ್ನಲೆಯಲ್ಲಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ರಥವನ್ನು ಮಂಗಳವಾರ ಪರಿಶೀಲನೆ ನಡೆಸಿದರು.
ಶಾಸಕ ಡಿ.ರವಿಶಂಕರ್ ಅವರು ರಥೋತ್ಸವದ ಪೂರ್ವಭಾವಿ ಸಭೆಯಲ್ಲಿ ರಥದ ಗುಣಮಟ್ಟ ಪರಿಶೀಲನೆ ಮಾಡಿ ವರದಿ ನೀಡುವಂತೆ ಸೂಚಿಸಿದ್ದರು. ಈ ಹಿನ್ನಲೆಯಲ್ಲಿ ಕೆ.ಆರ್.ನಗರ ಲೋಕೋಪಯೋಗಿ ಇಲಾಖೆಯ ಎಇಇ ಸುಮಿತಾ ನೇತೃತ್ವದ ತಂಡ ರಥದ ಚಕ್ರಗಳನ್ನು ಪರಿಶೀಲನೆ ನಡೆಸಿದರು.
ಸುಮಾರು ಇನ್ನೂರು ಮೀಟರ್ ಉದ್ದ ರಥವನ್ನು ಕ್ರೇನ್ ಸಹಾಯದ ಮೂಲಕ ಪ್ರಾಯೋಗಿಕವಾಗಿ ಏಳೆದು ರಥದ ಚಕ್ರದ ಗುಣ ಮಟ್ಟವನ್ನು ಪರಿಶೀಲನೆ ನಡೆಸಿ ರಥ ಭದ್ರತೆ ಇರುವುದನ್ನು ಖಾತ್ರಿ ಪಡಿಸಲಾಯಿತು
ಈ ಸಂದರ್ಭದಲ್ಲಿ ಇಂಜಿನಿಯರ್ ದೇವರಾಜ್, ಉಪತಹಸೀಲ್ದಾರ್ ಕೆ.ಜೆ ಶರತ್, ಪಾರುಪತ್ತೆದಾರ್ ಯತಿರಾಜ್ , ರಥದ ಉಸ್ತುವಾರಿ ನೋಡಿಕೊಳ್ಳುವ ಕ್ಷೇತ್ರಪಾಲ, ಅನಿತ್ ಕುಮಾರ್, ರವಿ, ಚುಂಚನಕಟ್ಟೆ ಅನಂತ, ಹರೀಶ, ಚಂದ್ರ ನಾಯಕ ದೇವಾಲಯದ ಸಿಬ್ಬಂದಿಗಳು ಹಾಜರಿದ್ದರು.