ಕೆ.ಆರ್.ನಗರ: ಇತಿಹಾಸ ಪ್ರಸಿದ್ದ ಚುಂಚನಕಟ್ಟೆ ಜಾನುವಾರು ಜಾತ್ರೆ ಮತ್ತು ರಥೋತ್ಸವಕ್ಕೆ ಬರುವ ರೈತರು ಮತ್ತು ಭಕ್ತಾಧಿಗಳಿಗೆ ಯಾವುದೇ ಲೋಪ ಬಾರದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಜಾತ್ರೆಯ ಯಶಸ್ಸಿಗೆ ಶ್ರಮಿಸಲಾಗುತ್ತಿದೆ ಎಂದು ಶಾಸಕ ಡಿ.ರವಿಶಂಕರ್ ತಿಳಿಸಿದರು.
ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆಯಲ್ಲಿ ಸೋಮವಾರ ದಿಂದ ಆರಂಭವಾದ ಜಾನುವಾರು ಜಾತ್ರೆಯನ್ನು ಉದ್ಘಾಟಿಸಿ ನಂತರ ಮಾತನಾಡಿದ ಅವರು ಈ ಸಂಬಂದ ಈಗಾಲೇ ತಾವು ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸ ಕಳೆದ ಸಲ ಚರ್ಮಗಂಟು ರೋಗದಿಂದ ದನಗಳ ಜಾತ್ರೆಯನ್ನು ರದ್ದು ಮಾಡಲಾಗಿತ್ತು ಈ ಬಾರಿ ಮುಂಜ್ರಾಗತೆ ತೆಗೆದು ಕೊಂಡು ಯಶಸ್ವಿಯಾಗಿ ಜಾತ್ರೆ ನಡೆಸುವಂತೆ ತಿಳಿಸಲಾಗಿದೆ ಎಂದರು
ಈಗಾಗಲೇ ಜಾತ್ರಾ ಮಾಳದಲ್ಲಿ ಕುಡಿಯುವ ನೀರು ಸಮಸ್ಯೆಯಾಗದಂತೆ ನಲ್ಲಿಗಳನ್ನು ಹಾಕಿಸಲಾಗಿದ್ದು ಅಲ್ಲದೇ ಯಾವುದೇ ರೋಗರುಜಿನಗಳು ಹರಡದಂತೆ ಸ್ವಚ್ಚತೆ ಕಾಪಾಡುವುದರ ಜತೆಗೆ ದೂಳು ಬಾರದಂತೆ ಜಾತ್ರೆಯ ಮುಖ್ಯರಸ್ತೆ ದಿನಕ್ಕೆ ಮೂರು -ನಾಲ್ಕು ಬಾರಿ ನೀರು ಹಾಕುವಂತೆ ಕುಪ್ಪೆ ಗ್ರಾ.ಪಂ.ನವರಿಗೆ ಸೂಚಿಸಲಾಗಿದೆ ಎಂದು ಹೇಳಿದರು
ಇಂದಿನಿಂದ ಜಾತ್ರೆ ಮುಗಿಯುವ ಜನವರಿ 19ರ ತನಕ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸುವಂತೆ ಮತ್ತು ಜಾತ್ರೆಗೆ ಕಳೆ ತರುವ ದೃಷ್ಟಿಯಿಂದ ವರ್ಣ ರಂಜಿತಾ ವಿದ್ಯುತ್ ಆಲಕಾಂರ ಮಾಡುವಂತೆ ಕೆ.ಆರ್.ನಗರ ಬಸ್ ಡಿಪೋ ಘಟಕದವರಿಗೆ ಮತ್ತು
ಚೆಸ್ಕಾಂನವರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು
ಈ ಬಾರಿ ಜಾತ್ರೆಯಲ್ಲಿ ಭಾಗವಹಿಸುವ ರಾಸುಗಳಿಗೆ ಬಹುಮಾನ ನೀಡುವುದರ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಹೇಳಿದ ಅವರು ಜಾತ್ರೆಯಲ್ಲಿ ಯಾವುದೇ ಅಹಿತರಕರ ಘಟನೆಗಳು ನಡೆಯದಂತೆ ಮುನ್ನಚ್ಚರಿಕೆ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ ಎಂದರು
ಜಾತ್ರೆಗೆ ಬರುವ ರಾಸುಗಳಿಗೆ ಮತ್ತು ರೈತರಿಗೆ ಆರೋಗ್ಯದ ತೊಂದರೆಯಾದರೆ ಚಿಕಿತ್ಸೆ ನೀಡಲು ಚಿಕಿತ್ಸೆ ನೀಡಲು ಪಶು ಇಲಾಖೆ ವತಿಯಿಂದ ಮತ್ತು ಆರೋಗ್ಯ ಇಲಾಖೆಯಿಂದ ತಾತ್ಕಾಲಿಕ ಆಸ್ಪತ್ರೆಗಳನ್ನು ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಪೂರ್ಣಿಮಾ, ಶಿರಸ್ತೆದಾರ್ ಮೇಲೂರು ಶಿವಕುಮಾರ್, ಉಪತಹಸೀಲ್ದಾರ್ ಕೆ.ಜೆ.ಶರತ್, ಎಇಇ ಅರ್ಕೇಶ್ ಮೂರ್ತಿ, ಇಂಜಿನಿಯರ್ ಮಹದೇವ್ ಪಾರುಪತ್ತೆದಾರರಾದ ಯತೀರಾಜ್,ಪವನ್,
ಪಶುಇಲಾಖೆಯ ಎ.ಡಿ.ಡಾ.ಮಂಜುನಾಥ್, ಪಶುವೈದ್ಯರಾದ ರಾಮು,ಸಂಜಯ್, ಸುರೇಂದ್ರ,ಸಂತೋಷ್, ಹಿರಿಯ ಪರೀಕ್ಷಕ ಎಚ್.ಜೆ. ಸಿದ್ದರಾಜು, ಪರೀಕ್ಷಕರಾದ ಕೃಷ್ಣಸ್ವಾಮಿ,ಚಿಕ್ಕೇಗೌಡ,ರೇವಣ್ಣ , ಅಪ್ಪಾಜಿಗೌಡ ಸಿಬ್ಬಂದಿ ಸೋಮಶೇಖರ್,ಮಹೇಶ್,ಮಂಜುನಾಥ್ ಋಷಿಕುಮಾರ್, ತಾ.ಪಂ.ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಮಾಜಿ ಸದಸ್ಯ ಸಣ್ಣಪ್ಪ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಉದಯ್ ಕುಮಾರ್, ವಕ್ತಾರ ಸಯದ್ ಜಾಬೀರ್, ಮುಖಂಡರಾದ ಡೈರಿಮಾದು,ಎಚ್.ಜೆ.ರಮೇಶ್, ತಿಪ್ಪೂರು ಮಂಜಣ್ಣ, ದಮ್ಮನಹಳ್ಳಿ ಪಾಲಾಕ್ಷ , ನಾಡಪ್ಪನಹಳ್ಳಿ ಅಶ್ವತ್ಥ, ಚಿಕ್ಕನಾಯಕನಹಳ್ಳಿ ರಂಜಿತ್,ಮಂಚನಹಳ್ಳಿ ಧನು, ಗ್ರಾ.ಪಂ.ಮಾಜಿ ಅಧ್ಯಕ್ಷ ಗೌರಮ್ಮ ,ಮಾಜಿ ಸದಸ್ಯ ಶಂಕರಶೆಟ್ಟಿ,ಭರತ್,ಹರೀಶ್, ಸೇರಿದಂತೆ ಮತ್ತಿತರರು ಹಾಜರಿದ್ದರು