ಮುಂಬೈ: ಹಿಂದಿ ಜನಪ್ರಿಯ ಧಾರಾವಾಹಿ ಸಿಐಡಿಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುವ ಮೂಲಕ ಸಿಐಡಿ ನಟ ಎಂದೇ ಖ್ಯಾತರಾಗಿದ್ದ ದಿನೇಶ್ ಫಡ್ನಿಸ್ ಅವರು ಇಂದು ನಿಧನ ಹೊಂದಿದ್ದಾರೆ. ಈ ಮಾಹಿತಿಯನ್ನು ಸಹ ನಟ ದಯಾನಂದ್ ಶೆಟ್ಟಿ ಅವರು ಖಚಿತ ಪಡಿಸಿದ್ದಾರೆ. ಡಿಸೆಂಬರ್ ೧ರಂದು ಅವರಿಗೆ ಹೃದಯಾಘಾತವಾಗಿತ್ತು. ಕೂಡಲೇ ಅವರನ್ನು ಮುಂಬೈ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನಾಲ್ಕು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದಿನೇಶ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ಸಿಐಡಿಯಲ್ಲಿ ದಯಾ ಪಾತ್ರವನ್ನು ನಿರ್ವಹಿಸುತ್ತಿದ್ದ ದಯಾನಂದ್ ಶೆಟ್ಟಿ ಮಾಹಿತಿ ನೀಡಿದ್ದಾರೆ. ದಿನೇಶ್ ಫಡ್ನಿಸ್ ಅವರ ಅಂತ್ಯಕ್ರಿಯೆಯು ಇಂದು ನಡೆಯಲಿದೆ.