Sunday, April 20, 2025
Google search engine

Homeರಾಜ್ಯಸುದ್ದಿಜಾಲಮಂಗಳೂರು:ತೊಕ್ಕೊಟ್ಟು ಜಂಕ್ಷನ್ ರಿಕ್ಷಾ ಪಾರ್ಕ್ ಅವ್ಯವಸ್ಥೆ ಸರಿಪಡಿಸಲು ಸಿಐಟಿಯು ಒತ್ತಾಯ

ಮಂಗಳೂರು:ತೊಕ್ಕೊಟ್ಟು ಜಂಕ್ಷನ್ ರಿಕ್ಷಾ ಪಾರ್ಕ್ ಅವ್ಯವಸ್ಥೆ ಸರಿಪಡಿಸಲು ಸಿಐಟಿಯು ಒತ್ತಾಯ

ಮಂಗಳೂರು( ದಕ್ಷಿಣ ಕನ್ನಡ) : ಮಂಗಳೂರಿನ ತೊಕ್ಕೊಟ್ಟು ಜಂಕ್ಷನ್ ನಲ್ಲಿರುವ ಆಟೋರಿಕ್ಷಾ ಪಾರ್ಕ್ ನ ಅವ್ಯವಸ್ಥೆಯನ್ನು ಸರಿಪಡಿಸಬೇಕು ಹಾಗೂ ಹೊರಗಿನ ರಿಕ್ಷಾಗಳ ಹಾವಳಿಯನ್ನು ತಡೆಗಟ್ಟಬೇಕೆಂದು ಸಿಐಟಿಯು ಸಂಯೋಜಿತ ಆಟೋ ರಿಕ್ಷಾ ಚಾಲಕರ ಫೆಡರೇಷನ್ ನ ಉನ್ನತ ಮಟ್ಟದ ನಿಯೋಗವೊಂದು ಸಂಚಾರ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಉಳ್ಳಾಲ ನಗರ ಸಭೆ ಅಧಿಕಾರಿಗಳಿಗೆ ಮನವಿ ಅರ್ಪಿಸುವ ಮೂಲಕ ಒತ್ತಾಯಿಸಿದೆ.

ಕಳೆದ ಹಲವಾರು ದಶಕಗಳಿಂದ ಕಾರ್ಯಾಚರಿಸುತ್ತಿರುವ ಈ ಪಾರ್ಕ್ ತೀರಾ ವ್ಯವಸ್ಥೆಗಳಿಂದ ಕೂಡಿದೆ. ಹೊರಗಿನ ರಿಕ್ಷಾಗಳ ಹಾವಳಿ ತೀರಾ ಮಿತಿ ಮೀರುತ್ತಿದ್ದು, ಪಾರ್ಕಿನಲ್ಲಿ ರಿಕ್ಷಾಗಳು ಕ್ಯೂ ನಿಂತಿದ್ದರೂ ಕಣ್ಣೆದುರಲ್ಲೇ ಸರ್ವಿಸ್ ಮಾಡುತ್ತಿರುವುದರಿಂದ ಸ್ವತಃ ಪಾರ್ಕಿನಲ್ಲಿರುವ ಸುಮಾರು 50ರಷ್ಟು ರಿಕ್ಷಾ ಚಾಲಕರಿಗೆ ದುಡಿಯಲು ಅಸಾಧ್ಯವಾಗಿದೆ. ಹಾಗೂ ಮಂಗಳೂರಿನಿಂದ ಉಳ್ಳಾಲ ತಲಪಾಡಿ ಕಡೆಗೆ ಹೋಗುವ ಬಸ್ ಗಳು ತೊಕ್ಕೊಟ್ಟು ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಬಳಿಕ ಮತ್ತೆ ರಿಕ್ಷಾ ಪಾರ್ಕ್ ಇರುವ ತೊಕ್ಕೊಟ್ಟು ಜಂಕ್ಷನ್ ಬಳಿಯಲ್ಲಿ ನಿಲ್ಲಿಸಿ ವಿನಃ ಕಾರಣ ರಿಕ್ಷಾ ಚಾಲಕರಿಗೆ ತೊಂದರೆ ನೀಡಲಾಗುತ್ತಿದೆ.

ರಿಕ್ಷಾ ಪಾರ್ಕ್ ಬಳಿಯಲ್ಲೇ ಡ್ರೈನೇಜ್ ತ್ಯಾಜ್ಯಗಳು ಹರಿದಾಡುತ್ತಿದ್ದು ದುರ್ನಾತದಿಂದ ಅಲ್ಲಿ ನಿಲ್ಲಲು ಅಸಾಧ್ಯವಾಗಿದೆ.ಈ ಬಗ್ಗೆ ಸಂಬಂಧ ಪಟ್ಟವರ ಗಮನಕ್ಕೆ ತಂದರೂ ಯಾವುದೇ ಸ್ಪಂದನೆ ಇಲ್ಲವಾಗಿದೆ. ಆದಷ್ಟು ಶೀಘ್ರದಲ್ಲಿ ಸಮಸ್ಯೆಯನ್ನುಪರಿಹರಿಸದಿದ್ದಲ್ಲಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾದೀತು ಎಂದು ಫೆಡರೇಷನ್ ಎಚ್ಚರಿಕೆ ನೀಡಿದೆ.

ಈ ನಿಯೋಗದಲ್ಲಿ ಆಟೋರಿಕ್ಷಾ ಚಾಲಕರ ಫೆಡರೇಷನ್ ನ ಜಿಲ್ಲಾಧ್ಯಕ್ಷರಾದ ಸುನಿಲ್ ಕುಮಾರ್ ಬಜಾಲ್,ತೊಕ್ಕೊಟ್ಟು ಜಂಕ್ಷನ್ ಅಟೋ ರಿಕ್ಷಾ ಚಾಲಕರ ಸಂಘದ ಮುಖಂಡರಾದ ದಯಾನಂದ್, ನಝೀರ್,ಪುರಂದರ, ರಾಮಕೃಷ್ಣ,ಕೃಷ್ಣ ಶೆಟ್ಟಿ ಪಿಲಾರ್, ಮುತ್ತಲಿಬ್,‌ ಅಶ್ರಫ್, ನಾರಾಯಣ, ರಮೇಶ್, ಬಶೀರ್, ಅಬ್ಬಾಸ್, ಆಫ್ರಿದ್,‌ ಮೆಲ್ವಿನ್ ಸೇರಿದಂತೆ 50ಕ್ಕೂ ಮಿಕ್ಕಿ ರಿಕ್ಷಾ ಚಾಲಕರಿದ್ದರು.

RELATED ARTICLES
- Advertisment -
Google search engine

Most Popular