ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಪ್ರತಿಯೊಬ್ಬ ಉತ್ತಮ ಶಿಕ್ಷಕರಿಗೂ ಶಿಕ್ಷಣದ ಪ್ರಾಮುಖ್ಯತೆ ತಿಳಿದಿರುವುದರ ಜೊತೆಗೆ ಜವಾಬ್ದಾರಿ ಹೆಚ್ಚಿಸಿದೆ ಎಂದು ಪಟ್ಟಣದ ಪುರಸಭಾ ಸದಸ್ಯ ಕೆ.ಎಲ್.ಜಗದೀಶ್ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಹೆಚ್.ಕೆ.ಕೃಷ್ಣಯ್ಯ ಅವರಿಗೆ ರಾಜ್ಯ ಸರ್ಕಾರ ಅತ್ಯುತ್ತಮ ಪ್ರಾಂಶುಪಾಲ ಪ್ರಶಸ್ತಿ ಘೋಷಣೆ ಪಡೆದ ಹಿನ್ನೆಲೆಯಲ್ಲಿ ಕಾಲೇಜು ಸಭಾಂಗಣದಲ್ಲಿ ಪಟ್ಟಣದ ನಾಗರೀಕರ ಪರವಾಗಿ ಅಭಿನಂದಿಸಿ ಮಾತನಾಡಿದರು.
ಉಪನ್ಯಾಸಕರು ಗುಣಮಟ್ಟದ ಶಿಕ್ಷಣ ನೀಡಿದರೆ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಲು ಸಹಕಾರಿಯಾಗುತ್ತದೆ ಹಾಗೇಯೆ ಉಜ್ವಲ ಭವಿಷ್ಯ ರೂಪಿಸಿ ಕೊಳ್ಳುತ್ತಾರೆ ಆದ್ದರಿಂದ ಪ್ರಾಂಶುಪಾಲರಾದ ಹೆಚ್.ಕೆ.ಕೃಷ್ಣಯ್ಯ ಅವರ ರೀತಿಯಲ್ಲಿ ಮಾದರಿಯಾಗಿ ಎಂದರು. ಶಿಕ್ಷಣದಿಂದ ಉತ್ತಮ ವ್ಯಕ್ತಿಯಾಗಲು ಮತ್ತು ಬದುಕಲು ಉತ್ತಮ ಸಮಾಜವನ್ನು ಸೃಷ್ಟಿಸಲು ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಅಗತ್ಯವಾದ ಅಕ್ಷರ ಜ್ಞಾನ ಮತ್ತು ಕೌಶಲ್ಯಗಳನ್ನು ಪಡೆಯುವುದರ ಬಗ್ಗೆ. ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಯ ಬುತ್ತಿ ತುಂಬಿದಾಗ ಸಾದ್ಯ ಎಂದರು.
ಪ್ರಾಂಶುಪಾಲ ಹೆಚ್.ಕೆ.ಕೃಷ್ಣಯ್ಯ ಅವರಿಗೆ ಅತ್ಯುತ್ತಮ ಪ್ರಾಂಶುಪಾಲ ಪ್ರಶಸ್ತಿ ಲಭಿಸಲು ಕಾಲೇಜಿನ ಉಪನ್ಯಾಸಕ ತಂಡ ಬೆನ್ನೆಲುಬಾಗಿ ನಿಂತಿದೆ ಎಂದರು. ಪ್ರಾಂಶುಪಾಲರಾದ ಹೆಚ್.ಕೆ.ಕೃಷ್ಣಯ್ಯ ಮತ್ತು ಉಪನ್ಯಾಸಕ ತಂಡ ಪ್ರತಿ ವರ್ಷ ಪಿಯುಸಿ ಪರೀಕ್ಷೆಯಲ್ಲಿ ಶೇಕಡ 100 ರಷ್ಟು ಫಲಿತಾಂಶ ಬರಲು ಸಾಧನೆ ಮಾಡಿದ್ದಾರೆ ಎಂದರಲ್ಲದೆ ಇದೇ ರೀತಿ ಕ್ರೀಡಾಕೂಟದಲ್ಲಿ ಕೂಡ ತಾಲ್ಲೂಕಿನಲ್ಲಿಯೇ ಆರೇಳು ವರ್ಷಗಳಿಂದ ಸಮಗ್ರ ಪಾರಿತೋಷಕ ಪದಕಗಳನ್ನು ಮುಡಿಗೇರಿ ಕೊಂಡಿದೆ ಎಂದು ಕಾಲೇಜಿನ ಬಗ್ಗೆ ಪ್ರಶಂಸೆ ನುಡಿಗಳನ್ನು ನುಡಿದರು.
ಜಿಲ್ಲಾ ಅನುದಾನಿತ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಪಿ.ನಂದೀಶ್, ಸ.ನೌಕರರ ಸಂಘದ ಗೌರವಾಧ್ಯಕ್ಣ ಶಂಕರೇಗೌಡ, ಪುರಸಭಾ ಮಾಜಿ ಸದಸ್ಯ ಬಾರ್ ಶಿವಕುಮಾರ್, ನವನಗರ ಅರ್ಬನ್ ಬ್ಯಾಂಕ್ ನಿರ್ಧೇಶಕ ಕೇಶವ್, ತಾ.ಒಕ್ಕಲಿಗರ ಸಂಘದ ನಿರ್ಧೇಶಕ ದೇವೇಂದ್ರ, ರಾಜ್ಯಶಾಸ್ತ್ರ ಉಪನ್ಯಾಸಕ ಕೆ.ಎಲ್.ರಮೇಶ್, ಉಪನ್ಯಾಸಕರಾದ ಜಗದೀಶ್, ಗುರುರಾಜ್, ಶಿಕ್ಷಕ ಪಾಲಾಕ್ಷ, ವಕೀಲ ಅಂಕನಹಳ್ಳಿ ತಿಮ್ಮಪ್ಪ, ಕಾಲೇಜು ಸಿಬ್ಬಂದಿ ಅಪಲೋ ಮಹೇಶ್ ಸೇರಿದಂತೆ ಹಲವರು ಇದ್ದರು