Tuesday, April 22, 2025
Google search engine

Homeರಾಜ್ಯಶ್ರೀರಾಂಪುರ ಪಟ್ಟಣ ಪಂಚಾಯತಿಯಿಂದ ಪೌರಕಾರ್ಮಿಕರ ದಿನಾಚರಣೆ

ಶ್ರೀರಾಂಪುರ ಪಟ್ಟಣ ಪಂಚಾಯತಿಯಿಂದ ಪೌರಕಾರ್ಮಿಕರ ದಿನಾಚರಣೆ

ಮೈಸೂರು: ಶ್ರೀರಾಂಪುರ ಪಟ್ಟಣ ಪಂಚಾಯತಿ ವತಿಯಿಂದ ಶ್ರೀರಾಂಪುರ ರಿಂಗ್ ರಸ್ತೆಯ ಪಕ್ಕದಲ್ಲಿ ಬರುವ ಟಿ ಎಸ್ ಛತ್ರದಲ್ಲಿ ಪೌರಕಾರ್ಮಿಕರ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಮೈಸೂರು ತಾಲೂಕಿನ ತಹಸೀಲ್ದಾರರು  ಹಾಗೂ ಪಟ್ಟಣ ಪಂಚಾಯಿತಿಯ ಆಡಳಿತ ಅಧಿಕಾರಿಗಳು ಗಿರೀಶ್ ಅಧ್ಯಕ್ಷತೆಯನ್ನು ವಹಿಸಿದ್ದರು.

ಮೈಸೂರು ಜಿಲ್ಲಾ ನಗರ ಅಭಿವೃದ್ಧಿ ಕೋಶದ ಯೋಜನೆ ನಿರ್ದೇಶಕಿ ಶುಭ ಹಾಗೂ ಸಹಾಯಕ ಕಾರ್ಯ ಪಾಲಕ ಅಭಿಯಂತರ ಕುಬೇರಪ್ಪ,  ಮೈಸೂರು ವಿಶ್ವವಿದ್ಯಾನಿಲಯ ಉದ್ಯೋಗಿಗಳ ಬಡಾವಣೆಯ ನಿವಾಸಿಗಳ ಸಂಘದ ಅಧ್ಯಕ್ಷ   ಕೆ ಎ ನಾಣಯ್ಯ, ಹಾಗೂ ಮೂಕಾಂಬಿಕ ಸಮೃದ್ದಿ ಬಡಾವಣೆಯ ನಿವಾಸಿಗಳ ಹಿತ ರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ, ಸಾಫ್ಟವೇರ್ ಇಂಜಿನಿಯರ್ ಹಾಗೂ ಸಮಾಜ ಸೇವಕ ಪುನೀತ್ ಮುಖ್ಯ ಅಧಿಕಾರಿ ಶ್ರೀಧರ್ ಭಾಗವಹಿಸಿದ್ದರು.

ಆಡಳಿತ ಅಧಿಕಾರಿ ಗಿರೀಶ್, ಮಾತನಾಡಿ, ಈ ವರ್ಷ  ಸುಮಾರು  ಪೌರ  ನೌಕರರನ್ನು ಖಾಯಂ ನೇಮಕಾತಿ ಮಾಡಿಕೊಳ್ಳಲಾಗಿದ್ದು, ಸದರಿಯರ ಕುಟುಂಬದ ಜೀವನ ಭದ್ರತೆಯನ್ನು ಕಲ್ಪಿಸಲಾಗಿದೆ. ಮತ್ತು ಪೌರಕಾರ್ಮಿಕರ ಗೃಹ ಭಾಗ್ಯ ಯೋಜನೆ ಅಡಿಯಲ್ಲಿ ನಿರ್ಮಾಣ ಮಾಡಿಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ತಮ್ಮ ತಮ್ಮ ಮಕ್ಕಳನ್ನು ಒಳ್ಳೆ ವಿದ್ಯಾವಂತರನ್ನಾಗಿ ಮಾಡಿ ಉತ್ತಮ ಪ್ರಜೆಗಳನ್ನಾಗಿ  ಮಾಡುವುದರ ಜೊತೆಗೆ ನಿಮ್ಮ ಮತ್ತು ನಿಮ್ಮ ಕುಟುಂಬಗಳ ಆರೋಗ್ಯದ ಕಡೆಗೆ ಗಮನ ನೀಡುವಂತೆ ಸೂಚಿಸಿದರು.

ಸರ್ಕಾರ ವತಿಯಿಂದ ನೀಡಲಾಗುವ ಸುರಕ್ಷತೆ ಪರಿಕರ ಗಳನ್ನು ಬಳಸಿಕೊಂಡು ದಿನನಿತ್ಯದ ಸ್ವಚ್ಛತಾ ಕೆಲಸವನ್ನು ನಿರ್ವಹಿಸಲು ಸೂಚಿಸಿದರು. ಕುಡಿತ ಮತ್ತು ಇತರ ದುಶ್ಚಟಗಳಿಂದ ದೂರವಿರಲು ಕಿವಿ ಮಾತು ಹೇಳಿದರು.

ಕೆ ಎ ನಾಣಯ್ಯ, ಪುನಿತ್ ಜಿ‌ ಮಾತನಾಡಿ, ಸ್ವಚ್ಛ ಭಾರತದಿಂದ ಕೇವಲ ಭಾರತ ಮಾತ್ರ ಸ್ವಚ್ಚವಾಗಿಲ್ಲ ನಮ್ಮ ಮನಸ್ಸುಗಳೂ‌ ಸಹ ಸ್ವಚ್ಛ ವಾಗಿದೆ ಪೌರಕಾರ್ಮಿಕರನ್ನು ಹತ್ತು ವರ್ಷಗಳ ಹಿಂದೆ ನೋಡುತ್ತಿದ್ದ ರೀತಿಗೂ ಇಂದಿನ ಪರಿಸ್ಥಿತಿಗೂ ಬರಲಿದೆ, ಪೌರಕಾರ್ಮಿಕರು ಅವರ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು ಹಾಗೂ ತಮ್ಮ ಆರೋಗ್ಯದ ಬಗ್ಗೆ ನಿಗಾವಹಿಸಬೇಕು ಪ್ರತಿ ತಿಂಗಳಿಗೊಮ್ಮೆ ಆಯುಷ್ ಇಲಾಖೆ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಆರೋಗ್ಯ ಇಲಾಖೆಯ ಜಿಲ್ಲಾ ವೈದ್ಯಾಧಿಕಾರಿಗಳಾದ  ಡಾ: ಜಯಂತ ರವರು ಆರೋಗ್ಯದ ಬಗ್ಗೆ ಉಪನ್ಯಾಸ ನೀಡಿದರು.

 ಪೌರಕಾರ್ಮಿಕರ  ಮಗಳಾದ ಕುಮಾರಿ ಲಿಪಿಕಾ ಅವರಿಗೆ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಸ್ಪರ್ಧಿಸಿದ್ದ ಹಿನ್ನೆಲೆಯಲ್ಲಿ ಪ್ರೋತ್ಸಾಹಧನ ನೀಡಿ  ಸನ್ಮಾನಿಸಲಾಯಿತು.

ಎಲ್ಲ ಪೌರಕಾರ್ಮಿಕರಿಗೂ ವಿಶೇಷ ಭತ್ಯೆಯನ್ನಾಗಿ ತಲಾ 7,000ಗಳಂತೆ ಒಟ್ಟು 2,59,000ಗಳ ಧನಾದೇಶ ವನ್ನು ವಿತರಿಸಲಾಯಿತು.

ಪೌರಕಾರ್ಮಿಕರಿಗೆ ಬೆಳಗಿನ ಉಪಹಾರವನ್ನು ಶುಚಿ ರುಚಿ  ಮತ್ತು ಬಿಸಿಬಿಸಿಯಾಗಿ ಸೇವಿಸಲು ಊಟದ ಬಾಕ್ಸ್ಗಳನ್ನು ವಿತರಿಸಲಾಯಿತು.

ಮತ್ತೆ ವಿಶೇಷವಾಗಿ ಪೌರಕಾರ್ಮಿಕರು ಮತ್ತು ಅವರ ಕುಟುಂಬದ ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ನಾಪ್ಕಿನ್ ಪ್ಯಾಡ್ ಗಳನ್ನು ಒಂದು ವರ್ಷದ ಅವಧಿಯವರೆಗೆ  ಉಪಯೋಗಿಸುವಂತೆ ಸೂಚಿಸಿ ವಿತರಿಸಲಾಯಿತು. ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಜಯಗಳಿಸಿದ ಪೌರಕಾರ್ಮಿಕ ನೌಕರರಗಳಿಗೆ ಬಹುಮಾನ ಪರಿತೋಶಕ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

ಹಾಗೂ ಇತ್ತೀಚೆಗೆ ಬೋಗಾದಿ ಪಟ್ಟಣ ಪಂಚಾಯಿತಿಗೆ ವರ್ಗಾವಣೆಗೊಂಡಿರುವ ರೋಹಿತ್ ರವರನ್ನು ಸನ್ಮಾನಿಸಲಾಯಿತು.

ಎಲ್ಲಾ ಪೌರಕಾರ್ಮಿಕರುಗಳಿಗೆ ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ,ಹಣ್ಣಿನ ಬುಟ್ಟಿಗಳನ್ನು,ನೆನಪಿನ ಕಾಣಿಕೆ ಗಳನ್ನು ನೀಡಲಾಯಿತು.ಹಾಗೂ ಮಾನ್ಯ ಯೋಜನಾ ನಿರ್ದೇಶಕರು, ಸಹಾಯಕ ಕಾರ್ಯ ಪಾಲಕ ಅಭಿಯಂತರರು, ಮುಖ್ಯ ಅತಿಥಿಗಳನ್ನು ಸನ್ಮಾನಿಸಲಾಯಿತು.

ನೌಕರರಿಗೆ ಮನರಂಜನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಮುದಾಯ ಸಂಘಟನಾಧಿಕಾರಿಗಳಾದ ಶ್ರೀನಿವಾಸ್, ಕಿರಿಯ  ಅಭಿಯಂತರ ಶಿವಕುಮಾರ್, ಆರೋಗ್ಯ ಅಧಿಕಾರಿಗಳಾದ  ಪರಮೇಶ್ವರ್, ಬಿಲ್ ಕಲೆಕ್ಟರ್ ಕುಮಾರಸ್ವಾಮಿ, ಸಿಬ್ಬಂದಿಗಳಾದ ಚಂದ್ರು, ಸೌಮ್ಯ, ಪುಷ್ಪ, ನಮ್ರತಾ, ಚೈತ್ರ, ರಶ್ಮಿ, ಶ್ರೀಕಂಠ, ಚಾಯ, ಬಸವರಾಜು,ಮೇಸ್ತ್ರಿ ಮುತ್ತು ಸ್ವಾಮಿ, ಇತರೆ ಎಲ್ಲಾ ಸಿಬ್ಬಂದಿ ವರ್ಗದವರು ಮಾಧ್ಯಮದ ಸ್ನೇಹಿತರು, ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಯವರು ಹಾಜರಿದ್ದರು.

RELATED ARTICLES
- Advertisment -
Google search engine

Most Popular