Friday, April 4, 2025
Google search engine

Homeರಾಜ್ಯಮುಡಾ ಅಕ್ರಮ ನಿವೇಶನ ಹಂಚಿಕೆ ಸಂಬಂಧ ಲೋಕಾಯುಕ್ತ ವರದಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ಕ್ಲೀನ್ ಚಿಟ್

ಮುಡಾ ಅಕ್ರಮ ನಿವೇಶನ ಹಂಚಿಕೆ ಸಂಬಂಧ ಲೋಕಾಯುಕ್ತ ವರದಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ಕ್ಲೀನ್ ಚಿಟ್

ಮೈಸೂರು: ರಾಜ್ಯದಲ್ಲಿ ಭಾರಿ ಸುದ್ದಿಯಾಗಿದ್ದ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ವರದಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮೈಸೂರು ಲೋಕಾಯುಕ್ತ ಎಸ್ಪಿ ಉದೇಶ್ ಅವರು ಐಜಿಪಿ ಸುಬ್ರಹ್ಮಣ್ಯೇಶ್ವರ್‌ ರಾವ್‌ ಅವರಿಗೆ 2500 ಕ್ಕೂ ಹೆಚ್ಚು ಪುಟಗಳ ಅಂತಿಮ ವರದಿ ಸಲ್ಲಿಕೆ ಮಾಡಿದ್ದಾರೆ. ಮುಡಾ ಅಕ್ರಮ ನಿವೇಶನ ಹಂಚಿಕೆ ಸಂಬಂಧ ಲೋಕಾಯುಕ್ತ ವರದಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ನೀಡಲಾಗಿದೆ. ಮುಡಾ ಅಕ್ರಮದಲ್ಲಿ ಅಧಿಕಾರಿಗಳದ್ದೇ ಬಹುದೊಡ್ಡ ಲೋಪವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರದ್ದು ಏನೂ ಪಾತ್ರವಿಲ್ಲ. ರಾಜಕೀಯ ಒತ್ತಡಕ್ಕೆ ಮಣಿದು ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿಗೆ ನಿವೇಶನ ನೀಡಿಲ್ಲ. ಮುಡಾದಲ್ಲಿ ಸಾವಿರಕ್ಕೂ ಅಧಿಕ ನಿವೇಶನಗಳ ಹಂಚಿಕೆ ಮಾಡಲಾಗಿದೆ. ವಿವಿಧ ಕಾರಣಗಳನ್ನ ಇಟ್ಟುಕೊಂಡು ಅಧಿಕಾರಿಗಳೇ ಬಹುದೊಡ್ಡ ಲೋಪ ಮಾಡಿದ್ದಾರೆ. ಈ ಮೂಲಕ ಸರ್ಕಾರದ ಬೊಕ್ಕಸಕ್ಕೆ ಅಧಿಕಾರಿಗಳು ಕೋಟ್ಯಾಂತರ ರೂ ನಷ್ಟ ಉಂಟುಮಾಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಸಿಎಂ ಸಿದ್ದರಾಮಯ್ಯ ಕುಟುಂಬಕ್ಕೆ ಭೂಸ್ವಾಧೀನಕ್ಕೆ ಪರ್ಯಾಯವಾಗಿ 14 ಸೈಟ್ ನೀಡುವ ಅವಶ್ಯಕತೆ ಇರಲಿಲ್ಲ. ಕಂಡ- ಕಂಡವರಿಗೆ ಬಿಡಿ-ಬಿಡಿಯಾಗಿ ಸಾವಿರಾರು ನಿವೇಶನಗಳ‌ ಅಕ್ರಮ ಹಂಚಿಕೆ ಮಾಡಲಾಗಿದೆ. ಮೇಲಿನಿಂದ ಕೆಳಹಂತದ ಎಲ್ಲಾ ಅಧಿಕಾರಿಗಳು ಈ ಹಗರಣದಲ್ಲಿ ಶಾಮೀಲಾಗಿದ್ದಾರೆ.

ಕಂದಾಯ ಹಾಗೂ ನೋಂದಣಿ ಅಧಿಕಾರಿಗಳು ಹಲವು ಪ್ರಕರಣಗಳಲ್ಲಿ‌ ಭಾಗಿಯಾಗಿದ್ದು, ಸಿಎಂ ಪತ್ನಿ ಪಾರ್ವತಿ ಅವರು 14 ಸೈಟ್ ಗಳನ್ನ ವಾಪಸ್ ನೀಡಿರುವುದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಸಿಎಂ ಪತ್ನಿಗೆ ಭೂಮಿಗೆ ಹೇಗೆ ರವಾನೆ ಆಯ್ತು ಎಂಬುದರ ದಾಖಲೆ ವರದಿ ನೀಡಿದ್ದು, ಎಲ್ಲಿಯೂ ಕೂಡ ಸಿಎಂ ಸಿದ್ದರಾಮಯ್ಯ ಹಸ್ತಕ್ಷೇಪ ಇಲ್ಲದಿರುವುದರ ಕುರಿತು ವರದಿಯಲ್ಲಿ ಮಾಹಿತಿ ನೀಡಲಾಗಿದೆ.

RELATED ARTICLES
- Advertisment -
Google search engine

Most Popular