ಗುಂಡ್ಲುಪೇಟೆ: ತಾಲೂಕಿನ ಪ್ರಮುಖ ಧಾರ್ಮಿಕ ಸ್ಥಳ ಹಾಗು ಪ್ರವಾಸಿ ತಾಣ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಅಂತರಾಷ್ಟ್ರೀಯ ಹುಲಿ ದಿನಾಚರಣೆ ಅಂಗವಾಗಿ ಸ್ವಯಂ ಪ್ರೇರಿತ ಶ್ರಮದಾನದ ಮೂಲಕ ಪ್ಲಾಸ್ಟಿಕ್ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು.
ಶನಿವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ನಮ್ಮ ಗುಂಡ್ಲುಪೇಟೆ ತಂಡ, ಎಸ್.ಎಲ್.ವಿ ಎಂಟರ್ ಪ್ರೈಸಸ್, ಗುಂಡ್ಲುಪೇಟೆಯ ಶೇಖರ್ ಆಗ್ರೋ ಟ್ರೇಡರ್ಸ್ ಹಾಗೂ ಬೇಗೂರಿನ ರಾಘವೇಂದ್ರ ಎಂಟರ್ ಪ್ರೈಸಸ್ ಸಹಯೋಗದಲ್ಲಿ ಸ್ವಯಂ ಪ್ರೇರಿತ ಶ್ರಮದಾನದ ಮೂಲಕ ಪ್ಲಾಸ್ಟಿಕ್ ಸ್ವಚ್ಛತಾ ಕಾರ್ಯ ಆರಂಭವಾಯಿತು.
40 ಸ್ವಯಂ ಸೇವಕರು ಬೆಟ್ಟದ ತಪ್ಪಲಿನ ವಾಹನ ನಿಲ್ದಾಣ, ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಪ್ರವೇಶದ್ವಾರ, ಸಂಪರ್ಕ ರಸ್ತೆಯ ಇಕ್ಕೆಲಗಳು, ಹಗ್ಗದಹಳ್ಳ ಮತ್ತು ಕುಣಗಹಳ್ಳಿ ಸಂಪರ್ಕ ರಸ್ತೆ ಇತರೆ ಭಾಗಗಳನ್ನು ಒಳಗೊಂಡು 3 ರಿಂದ 4 ಕಿ.ಮೀ ನಷ್ಟು ನಿಗಧಿತ ಪ್ರದೇಶದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ ಕಾರ್ಯ ನಡೆಯಿತು.
ಗಾಜಿನ ಬಾಟಲಿಗಳು, ತಂಪುಪಾನೀಯ ಟಿನ್‍ಗಳು, ನೀರಿನ ಕ್ಯಾನ್‍ಗಳನ್ನು ಒಳಗೊಂಡ 40 ರಿಂದ 50 ಮೂಟೆಗಳಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹವಾಯಿತು. ನಂತರ ಕೊಳೆಯುವ ಮತ್ತು ಕೊಳೆಯದ ತ್ಯಾಜ್ಯವನ್ನು ಬೇರ್ಪಡಿಸಿ ಹಂಗಳ ಗ್ರಾಮ ಪಂಚಾಯಿತಿಗೆ ನೀಡಲಾಯಿತು.
ನಮ್ಮ ಗುಂಡ್ಲುಪೇಟೆ ತಂಡದವರು, ಎಸ್.ಎಲ್.ವಿ ಎಂಟರ್ ಪ್ರೈಸಸ್ ಮತ್ತು ಗುಂಡ್ಲುಪೇಟೆಯ ಶೇಖರ್ ಆಗ್ರೋ ಟ್ರೇಡರ್ಸ್ ಹಾಗೂ ಬೇಗೂರಿನ ರಾಘವೇಂದ್ರ ಎಂಟರ್ ಪ್ರೈಸಸ್ ನ ಮಾಲೀಕರು ಸ್ವಯಂ ಪ್ರೇರಿತ ಶ್ರಮದಾನದ ಮೂಲಕ ನಡೆಸಿದ ಪ್ಲಾಸ್ಟಿಕ್ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಹಿಮವದ್ ಗೋಪಾಲಸ್ವಾಮಿ ಬೆಟ್ಟವನ್ನು ಜಿಲ್ಲಾಡಳಿತ ಪ್ಲಾಸ್ಟಿಕ್ ಮುಕ್ತ ಪ್ರದೇಶವಾಗಿ ಘೋಷಣೆ ಮಾಡಿದೆ. ಈಗ ತಪ್ಪಲಿನಲ್ಲೂ ಸ್ವಯಂ ಪ್ರೇರಿತ ಶ್ರಮದಾನದ ಮೂಲಕ ನಡೆಸಿದ ಪ್ಲಾಸ್ಟಿಕ್ ಸ್ವಚ್ಛತಾ ಕಾರ್ಯ ಕೈಗೊಂಡಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.