ಮೈಸೂರು: ಗಾಂಧಿಜಯಂತಿಯ ಅಂಗವಾಗಿ ಬೋಗಾದಿ ಎರಡನೇ ಹಂತದಲ್ಲಿರುವ ಅಮೃತ ವಿಶ್ವ ವಿದ್ಯಾಪೀಠಂನ ಸುತ್ತಮುತ್ತಲಿನ ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ಇಂದು ಭಾನುವಾರ, ನಡೆಸಲಾಯಿತು. ಅಮೃತ ವಿಶ್ವವಿದ್ಯಾಪೀಠಂ ಮೈಸೂರು ಕ್ಯಾಂಪಸ್, ಮಾತಾ ಅಮೃತಾನಂದಮಯಿ ಮಠ ಮೈಸೂರು, ಹಾಗೂ ಅಮೃತಕೃಪಆಸ್ಪತ್ರೆಯ ಸಹಯೋಗದಲ್ಲಿ ನಡೆದ ಈ ಶ್ರಮದಾನವನ್ನು ವಾರ್ಡ್ ನಂ.೪೪ರ ಪಾಲಿಕೆ ಸದಸ್ಯೆ ಹಾಗೂ ಆರೋಗ್ಯ ಸ್ಥಾಯಿ ಸಮಿತಿಯ ಮುಖ್ಯಸ್ಥೆ ಸವಿತಾ ಸುರೇಶ್ ಉದ್ಘಾಟಿಸಿದರು.
ಮಹಾತ್ಮಗಾಂಧಿಯವರಿಗೆಗೌರವ ಸಲ್ಲಿರುವ ನಿಟ್ಟಿನಲ್ಲಿಒಂದುಗಂಟೆಯ ಶ್ರಮದಾನ ಮಾಡುವ ಮೂಲಕ ಗಾಂಧಿಯವರಿಗೆ’ಸ್ವಚ್ಛಾಂಜಲಿ’ ಸಲ್ಲಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ದೇಶದಜನತೆಗೆಕರೆ ನೀಡಿದ್ದಾರೆ. ಪ್ರಧಾನಿಯವರಕರೆಗೆ ಪ್ರತಿಸ್ಪಂದನೆಯಾಗಿ’ಕಸಮುಕ್ತಭಾರತ?ವನ್ನು ನಿರ್ಮಿಸುವ ನಿಟ್ಟಿನಲ್ಲಿ ಈ ಶ್ರಮದಾನವನ್ನು ಮಾಡಲಾಯಿತು.ಅಮೃತ ವಿಶ್ವವಿದ್ಯಾಪೀಠಂ ಹಾಗೂ ಅಮೃತಕೃಪಆಸ್ಪತ್ರೆಯ ೨೦೦ ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗ ಈ ಶ್ರಮದಾನದಲ್ಲಿ ಭಾಗಿಯಾದರು.
ಅಮೃತ ವಿಶ್ವವಿದ್ಯಾಪೀಠಂ ಮೈಸೂರುಕ್ಯಾಂಪಸ್‌ನ ಪ್ರಾಂಶುಪಾಲ ಡಾ.ಜಿ.ರವೀಂದ್ರನಾಥ್, ಅಕ್ಯಾಡೆಮಿಕ್‌ಕೋರ್ಡಿನೇಟರ್‌ಡಾ.ರೇಖಾ ಭಟ್, ಅಮೃತಕೃಪಆಸ್ಪತ್ರೆಯಡಾ. ವಿಕಾಸ್ ಮೋದಿ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
