ಬೆಟ್ಟದಪುರ: ಬೆಟ್ಟದಪುರ ಸಮೀಪದ ಹಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಡಗೂರು ಗ್ರಾಮದಲ್ಲಿ ಗುರುವಾರ ಮೂಲ ಗ್ರಾಮಾಠಾಣಾ ಜಾಗದ ಒತ್ತುವರಿ ತೆರವು ಮಾಡಿ, ಸರ್ವೇ ನಂ. ಗ್ರಾಮಾ ಠಾಣಾದ ಜಮೀನಿನ ಅಳತೆ ಮಾಡಿ ಗಡಿಯನ್ನು ಗುರುತಿಸಲಾಯಿತು.
ಗ್ರಾಮದಲ್ಲಿನ ಮೂಲ ಗ್ರಾಮಾಠಾಣಾ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದನ್ನು ತೆರವುಗೊಳಿಸಲಾಯಿತು. ಇನ್ನಾ ಸರ್ವೇ ನಂ.17ರ ಗ್ರಾಮಾಠಾಣಾ ಜಮೀನಿನಲ್ಲಿ ಹಲವರು ಒತ್ತುವರಿ ಮಾಡಿಕೊಂಡಿದ ಹಿನ್ನಲೆ ಅಳತೆ ಮಾಡಿ ಕಲ್ಲು ನೆಡುವ ಮೂಲಕ ಗಡಿಭಾಗವನ್ನು ಗುರುತಿಸಲಾಯಿತು.
ಬುಧವಾರ ಹಾಗೂ ಗುರುವಾರ ಎರಡು ದಿನಗಳ ಕಾಲ ಜಾಗದ ಒತ್ತುವರಿ ಮತ್ತು ಸರ್ವೆ ಅಳತೆ ಕಾರ್ಯ ನಡೆಸಲಾಗಿದೆ. ಗ್ರಾಮಾಠಾಣಾದ ಸರ್ವೆ ನಂಬರಿನ ಗಡಿಭಾಗ ಗುರುತಿಸಲಾಗಿದ್ದು, ಈ ವಿಚಾರವಾಗಿ ಪಂಚಾಯಿತಿಯಲ್ಲಿ ನಡೆಯುವ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಬಳಿಕ ತೆರವುಗೊಳಿಸಲಾಗುವುದು ಎಂದು ಹಾರನಹಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಪಿ ಧನಂಜಯ ತಿಳಿಸಿದ್ದಾರೆ.
ತೆರವು ಕಾರ್ಯಾಚರಣೆಯಲ್ಲಿ ಸರ್ವೇ ಅಧಿಕಾರಿ ಗಿರೀಶ್, ಗ್ರಾಮ ಆಡಳಿತಧಿಕಾರಿ ಸುನೀಲ್, ಗ್ರಾ.ಪಂ ಸದಸ್ಯ ಸುರೇಶ ಸೇರಿದಂತೆ ಸಿಬ್ಬಂದಿಗಳು ಇದ್ದರು.