ಯಳಂದೂರು: ಶಾಸಕ ಎ.ಆರ್. ಕೃಷ್ಣಮೂರ್ತಿರವರ ೬೪ ನೇ ಹುಟ್ಟುಹಬ್ಬದ ನಿಮಿತ್ತ ತಾಲೂಕಿನ ಬಿಳಿಗಿರಿರಂಗನಬೆಟ್ಟದ ಬಂಗ್ಲೆಪೋಡಿನ ಸಮುದಾಯ ಭವನದಲ್ಲಿ ಭಾನುವಾರ ಸೋಲಿಗರಿಗೆ ಎಆರ್‌ಕೆ ಅಭಿಮಾನಿ ಬಳಗದ ಕಂದಹಳ್ಳಿ ನಂಜುಂಡಸ್ವಾಮಿ ನೇತೃತ್ವದಲ್ಲಿ ಬಟ್ಟೆಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖಂಡ ಕಂದಹಳ್ಳಿ ನಂಜುಂಡಸ್ವಾಮಿ ಮಾತನಾಡಿ, ಎ.ಆರ್. ಕೃಷ್ಣಮೂರ್ತಿ ಶಾಸಕರಾಗಿ ಆಯ್ಕೆಯಾದ ಮೇಲೆ ಸೋಲಿಗರ ಅಭಿವೃದ್ಧಿಗೆ ಹೆಚ್ಚಿನ ಅನುದಾನಗಳನ್ನು ತಂದಿದ್ದಾರೆ. ದೇಗುಲದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ. ದೇಗುಲಕ್ಕೆ ಮೆಟ್ಟಿಲುಗಳ ನಿರ್ಮಾಣ, ಹೊಸದಾಗಿ ಬಸ್ ನಿಲ್ದಾಣಕ್ಕೆ ಅನುದಾನವನ್ನು ತಂದಿದ್ದಾರೆ. ದೇಗುಲವನ್ನು ಮಲೆಮಹದೇಶ್ವರ ಬೆಟ್ಟದಂತೆ ಅಭಿವೃದ್ಧಿಪಡಿಸಲು ಸದನದಲ್ಲಿ ಮಾತನಾಡಿದ್ದಾರೆ. ಸೋಲಿಗರಿಗೆ ನೀಡಲಾಗಿದ್ದ ಭೂಮಿಯ ವ್ಯಾಜ್ಯವನ್ನು ಪರಿಹರಿಸುವ ನಿಟ್ಟಿನಲ್ಲಿ ಬಲವಾದ ಹೆಜ್ಜೆಯನ್ನಿಟ್ಟಿದ್ದಾರೆ. ಇವರ ಅಧಿಕಾರದ ಅವಧಿಯಲ್ಲಿ ಬೆಟ್ಟದ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ಈಗಾಗಲೇ ತಂದಿದ್ದಾರೆ.
ಇದನ್ನು ಮಾದರಿ ಮಾಡುವ ನಿಟ್ಟಿನಲ್ಲಿ ಸೋಲಿಗರ ಬದುಕು ಹಸನಾಗಿಸುವ ನಿಟ್ಟಿನಲ್ಲಿ ದೃಢವಾಗಿ ಹೆಜ್ಜೆ ಇಟ್ಟಿದ್ದಾರೆ. ಅಲ್ಲದೆ ಸಮಾಜದ ಪ್ರತಿ ವರ್ಗದ ಪ್ರಗತಿಗೆ ಏಳಿಗೆಗೆ ಇವರು ಅನುದಾನವನ್ನು ನೀಡುವ ಮೂಲಕ ತಮ್ಮ ಕ್ಷೇತ್ರ ವ್ಯಾಪ್ತಿಯ ಎಲ್ಲಾ ವರ್ಗದ ಜನರ ಏಳಿಗೆಗೂ ಶ್ರಮಿಸುತ್ತಿದ್ದಾರೆ. ಇವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಸೋಲಿಗರಿಗೆ ವಸ್ತ್ರವನ್ನು ನೀಡುತ್ತಿರುವುದು ಹೆಚ್ಚು ಅರ್ಥಪೂರ್ಣವಾಗಿದೆ ಎಂದರು.
ಇದಕ್ಕೂ ಮುಂಚೆ ಬಿಳಿಗಿರಿರಂಗನಾಥಸ್ವಾಮಿ ದೇಗುಲದಲ್ಲಿ ಶಾಸಕರ ಹೆಸರಿನಲ್ಲಿ ವಿಶೇಷ ಪೂಜೆ ಅರ್ಚನೆಗಳನ್ನು ಮಾಡಿಸಲಾಯಿತು. ನಂತರ ಬಂಗ್ಲೆಪೋಡಿನ ಸಮುದಾಯ ಭವನದಲ್ಲಿ ಸೋಲಿಗರೊಂದಿಗೆ ಕೇಕ್ ವಿತರಿಸಿ, ಸಿಹಿ ಹಂಚಿ ನಂತರ ಇಲ್ಲಿನ ಮಹಿಳೆಯರಿಗೆ ವಸ್ತ್ರಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಉಪಾಧ್ಯಕ್ಷೆ ಕೇತಮ್ಮ ಗ್ಯಾರಂಟಿ ಯೋಜನೆಯ ತಾಲೂಕು ಅಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯರಿಯೂರು ಪ್ರಕಾಶ್ ಮುಖಂಡರಾದ ಗಣಿಗನೂರು ಶಿವರಾಮ್, ಮಲ್ಲೇಶ್, ಶ್ರೀನಿವಾಸ್, ಮಸಣಾಪುರ ಶಿವನಂಜಯ್ಯ, ವೆಂಕಟೇಶ್, ಅಸ್ಲಂಪಾಷ ಸೇರಿದಂತೆ ಅನೇಕರು ಇದ್ದರು.