Monday, April 7, 2025
Google search engine

Homeರಾಜ್ಯಮೇಘಸ್ಫೋಟ: ಕೇದಾರ್‌ನಾಥ್​ನ ಹಲವೆಡೆ ಗುಡ್ಡ ಕುಸಿತ; ದರ್ಶನಕ್ಕೆ ತೆರಳಿದ್ದ ಕನ್ನಡಿಗರ ಪರದಾಟ

ಮೇಘಸ್ಫೋಟ: ಕೇದಾರ್‌ನಾಥ್​ನ ಹಲವೆಡೆ ಗುಡ್ಡ ಕುಸಿತ; ದರ್ಶನಕ್ಕೆ ತೆರಳಿದ್ದ ಕನ್ನಡಿಗರ ಪರದಾಟ

ಬೆಂಗಳೂರು: ಮೇಘಸ್ಫೋಟದಿಂದ ಕೇದಾರ್‌ನಾಥ್​ನ ಹಲವೆಡೆ ಗುಡ್ಡ ಕುಸಿತ ಉಂಟಾಗಿದ್ದು, ಬೆಂಗಳೂರಿನಿಂದ ಕೇದಾರನಾಥನ ದರ್ಶನಕ್ಕೆ ತೆರಳಿದ್ದ ಕನ್ನಡಿಗರು ಪರದಾಡ್ತಿದ್ದಾರೆ.

ಪ್ರಕೃತಿ ಸೌಂದರ್ಯದ ಜೊತೆ ಪುಣ್ಯಕ್ಷೇತ್ರದ ದರ್ಶನಕ್ಕೆ ಅಂತಾ ಬೆಂಗಳೂರಿನಿಂದ ಕೇದಾರನಾಥ್ ಗೆ ತೆರಳಿದ್ದ 15 ಜನ ಸ್ನೇಹಿತರ ತಂಡ ಕೇದಾರನಾಥ್ ನಲ್ಲಿ ದಿಕ್ಕು ತೋಚದೇ ಕಂಗಾಲಾಗಿದ್ದಾರೆ. ಬೆಂಗಳೂರಿನ ಬೇರೆ ಬೇರೆ ಏರಿಯಾಗಳಿಂದ ಹೊರಟಿದ್ದ 15 ಜನರ ಪೈಕಿ, 6 ಜನರು ಸಂಪರ್ಕಕ್ಕೆ ಸಿಗದೇ ಇರೋದು ಇತರರನ್ನ ಕಂಗಾಲಾಗಿಸಿದೆ. ತಿನ್ನೋಕೆ ಊಟವು ಇಲ್ಲದೇ ಬಿಸ್ಕೆಟ್ ತಿಂದು ಎರಡ್ಮೂರು ದಿನ ಕಾಲ ನೂಕಿದ್ದ ಕನ್ನಡಿಗರ ಪೈಕಿ 5 ಜನರನ್ನ ರಕ್ಷಣಾತಂಡ ಸುರಕ್ಷಿತ ಸ್ಥಳಕ್ಕೆ ರವಾನಿಸಿದೆ. ಉಳಿದ ಕನ್ನಡಿಗರು ರೆಸ್ಕ್ಯೂ ಪಾಯಿಂಟ್ ನಲ್ಲಿ ರಕ್ಷಣೆಗೆ ಕಾದು ನಿಂತ ಜನರ ಗುಂಪಿನ ಜೊತೆ ಕಾದುಕುಳಿತಿದ್ದಾರೆ.

ಇತ್ತ ಬೆಂಗಳೂರಿನಿಂದ ಕೇದಾರನಾಥ್ ಗೆ ಹೊರಟಿದ್ದ 20 ಸದಸ್ಯರಿದ್ದ ಮತ್ತೊಂದು ತಂಡ ರಕ್ಷಣಾ ಪಡೆಯ ನೆರವಿನಿಂದ ಸುರಕ್ಷಿತ ಸ್ಥಳಕ್ಕೆ ತಲುಪಿದ್ದು, 20ಜನರ ಪೈಕಿ ಓರ್ವ ವ್ಯಕ್ತಿ ಸಂಪರ್ಕಕ್ಕೆ ಸಿಗ್ತಿಲ್ಲ ಅಂತಾ ತಂಡದ ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ಪ್ಯಾಕೇಜ್ ಟೂರ್ ನಲ್ಲಿ ಯಾತ್ರೆಗೆ ಹೊರಟಿದ್ದ ಈ ತಂಡ ಸದ್ಯ ಸುರಕ್ಷಿತ ಸ್ಥಳ ತಲುಪಿದ್ದು, ಯಾತ್ರೆ ವೇಳೆ ಆದ ಅನುಭವವನ್ನ ಯಾತ್ರಾರ್ಥಿಗಳು ಬಿಚ್ಚಿಟ್ಟಿದ್ದಾರೆ.

ಸದ್ಯ ದೇವರನಾಡಿನ ದುರಂತ ಮಾಸುವ ಮೊದಲೇ ಮಳೆರಾಯ ಉತ್ತರವನ್ನು ತತ್ತರ ಪಡುವಂತೆ ಮಾಡಿದ್ದು, ಕೇದಾರನಾಥ್ ನಲ್ಲಿ ಸಿಲುಕಿರೋ ಯಾತ್ರಾರ್ಥಿಗಳ ರಕ್ಷಣೆಗೆ ಸ್ಥಳೀಯ ಪೊಲೀಸರು, SDRF ತಂಡ ಕಾರ್ಯಾಚರಣೆ ಮುಂದುವರಿಸಿದೆ. ಸದ್ಯ ಬೆಂಗಳೂರಿನಿಂದ ಹೊರಟಿದ್ದ ಕನ್ನಡಿಗರು ರಕ್ಷಣಾ ಸ್ಥಳದಲ್ಲಿ ಸೇಫ್ ಆಗಿದ್ದು, ಆದಷ್ಟು ಬೇಗ ತವರು ಸೇರೋಕೆ ಕಾದುಕುಳಿತಿದ್ದಾರೆ.

RELATED ARTICLES
- Advertisment -
Google search engine

Most Popular