ರಾಮನಗರ: ಗಣರಾಜ್ಯೋತ್ಸವ ಸಮಾರಂಭದಲ್ಲಿ ತನ್ನ ತೊದಲು ನುಡಿಗಳ ಮೂಲಕ ಬರಿಯ ಬಾಯಿಯಲ್ಲಿ ಸಂವಿಧಾನದ ಪ್ರಸ್ತಾವನೆಯನ್ನು ಹೇಳಿದ ಜಿಲ್ಲೆಯಯುಕೆಜಿ ಬಾಲಕ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮೆಚ್ಚುಗೆ ಗೊಳಗಾಗಿದ್ದಾನೆ.
ಗಣರಾಜ್ಯೋತ್ಸವ ಸಮಾರಂಭದಲ್ಲಿ ಚನ್ನಪಟ್ಟಣ ತಾಲೂಕಿನ ಅರಳಾಳುಸಂದ್ರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಯುಕೆಜಿ ವಿದ್ಯಾರ್ಥಿ ಹರ್ಷವರ್ಧನ್ ಸಂವಿಧಾನದ ಪೀಠಿಕೆಯನ್ನುಕಂಠಪಾಠ ಮಾಡಿ ವೇದಿಕೆಯಲ್ಲಿ ಹೇಳಿದ್ದ.ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ಆಗಿತ್ತು. ಈ ವಿಡಿಯೋವನ್ನು ನೋಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರುತಮ್ಮಎಕ್ಸ್(ಟ್ವಿಟರ್) ಖಾತೆಯಲ್ಲಿಟ್ವೀಟ್ ಮಾಡಿದ್ದು, ಪುಟ್ಟಬಾಲಕನತೊದಲು ನುಡಿಯಲ್ಲಿ ಸಂವಿಧಾನದ ಪೀಠಿಕೆಯನ್ನು ಕೇಳುವುದೇ ಒಂದು ಖುಷಿ ಈ ಹುಡುಗನಂತೆ ಪ್ರತಿಯೊಬ್ಬರ ಮನದಲ್ಲೂ ಸಂವಿಧಾನದ ಪ್ರತಿಪದ ಅಚ್ಚಾಗಬೇಕು. ಆಗಮಾತ್ರ ಸಮಾನತೆ, ಬಹುತ್ವದ ತಳಹದಿಯ ಮೇಲೆ ಬಲಿ ಭಾರತ ರೂಪುಗೊಳ್ಳಲು ಸಾಧ್ಯಎಂದು ಹೇಳಿದ್ದಾರೆ.