ಮಂಡ್ಯ: ಸಿಎಂ-ಡಿಸಿಎಂ ವಿರುದ್ಧ ಹೋರಾಟಗಾರರು ಸಿಡಿದೆದ್ದಿದ್ದು, ಸಿಎಂ-ಡಿಸಿಎಂ ತಮಿಳುನಾಡಿನ ವಾಟರ್ ಮ್ಯಾನ್ ಗಳು ಎಂದು ಅಣಕಿಸಲಾಗಿದೆ.
ಮಂಡ್ಯದಲ್ಲಿ ರೈತ ಹಿತರಕ್ಷಣಾ ಸಮಿತಿಯಿಂದ ನಡೆಯುತ್ತಿರುವ ಧರಣಿಯಲ್ಲಿ ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ವಿರುದ್ಧ ಕಿಡಿಕಾರಲಾಗಿದೆ.
ಕೈ ಯಲ್ಲಿ ಪೈಪ್, ರಿಂಚ್, ಕಟಿಂಗ್ ಪ್ಲೇಯರ್, ಹಿಡಿದು ಭಾವಚಿತ್ರ ಹಾಕಿ ವಾಟರ್ ಮ್ಯಾನ್ ಉಡುಪು ಧರಿಸಿ ಧರಣಿಯಲ್ಲಿ ಭಾಗಿಯಾಗಿದ್ದಾರೆ.
ರಾಜ್ಯ ಸರ್ಕಾರದ ಘೋಷಣೆ ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿನ ವಾಟರ್ ಮ್ಯಾನ್ ಗಳ ರೀತಿ ರಾಜ್ಯ ಸರ್ಕಾರ ವರ್ತಿಸುತ್ತಿದೆ. ರೈತರ ಕೂಗು ಸರ್ಕಾರಕ್ಕೆ ಕೇಳುತ್ತಿಲ್ಲ. ನಮಗೆ ಕುಡಿಯಲು ನೀರಿಲ್ಲ, ತಮಿಳುನಾಡಿಗೆ ನೀರು ಬಿಟ್ಟು ವಾಟರ್ ಮ್ಯಾನ್ ಗಳು ಆಗಿದ್ದಾರೆ ಎಂದು ಅಣಕಿಸಲಾಗಿದೆ.