Friday, April 18, 2025
Google search engine

Homeರಾಜಕೀಯಸಿ.ಎಂ ಏನು ತಪ್ಪು ಮಾಡಿಲ್ಲ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ-ಸಚಿವ ಮಧು ಬಂಗಾರಪ್ಪ

ಸಿ.ಎಂ ಏನು ತಪ್ಪು ಮಾಡಿಲ್ಲ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ-ಸಚಿವ ಮಧು ಬಂಗಾರಪ್ಪ

ಮಂಡ್ಯ: ಮೂಡಾ ಹಗರಣದಲ್ಲಿ ಸಿ.ಎಂ ಸಿದ್ರಾಮಯ್ಯ ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಲ್ಲ.ಅವರು ಏನು ತಪ್ಪು ಮಾಡಿಲ್ಲ, ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಇಂದು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ನಿಡಘಟ್ಟ ಗ್ರಾಮದ ಸರ್ಕಾರಿ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಇದೇ ವೇಳೆ ಗ್ರಾಮದ ಮಹಿಳೆಯರ ಜೊತೆ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತುಕತೆ ನಡೆಸಿ, ಬಳಿಕ ಶಾಲಾ ಕೊಠಡಿಗೆ ಭೇಟಿ ನೀಡಿ ಶಿಕ್ಷಕರು ಹಾಗೂ ಮಕ್ಕಳೊಂದಿಗೆ ಮಾತುಕತೆ ನಡೆಸಿ ಮಕ್ಕಳೊಂದಿಗೆ ಕುಳಿತು ಬಿಸಿಯೂಟ ಸವಿದರು. ಸಚಿವರಿಗೆ ಶಾಸಕರಾದ ಕದಲೂರು ಉದಯ್, ಗಣಿಗ ರವಿಕುಮಾರ್ ಸಾಥ್ ನೀಡಿದರು.

ನಂತರ ಸಚಿವ ಮಧು ಬಂಗಾರಪ್ಪ ಮಾಧ್ಯಮದವರೊಂದಿಗೆ ಮಾತನಾಡಿ, ಬಿಜೆಪಿ ಭಾರತೀಯ ಜನತಾ ಪಾರ್ಟಿ ಅಲ್ಲಾ,ಅದು ಬ್ಯಸಿನೆಸ್ ಜನತಾ ಪಾರ್ಟಿ.. 12 ವರ್ಷದ ಹಿಂದಿನ ಮುಡಾ ಪ್ರಕರಣ ತಂದು ಸರ್ಕಾರ ಗೊಳಿಸಲು ಪ್ರಯತ್ನ ಮಾಡ್ತಿದ್ದಾರೆ ಎಂದು ಕಿಡಿಕಾರಿದರು.

ಅರಸು, ಬಂಗಾರಪ್ಪ ಬಳಿಕ ಈ ರಾಜ್ಯದ ಜನರು ಎನಿಸಿಕೊಳ್ಳುವ ಸಿ.ಎಂ.ಅದು ಸಿದ್ರಾಮಯ್ಯ ಮಾತ್ರ. ನಮ್ಮ ಸರ್ಕಾರದ ಖಜಾನೆ ಖಾಲಿ ಅಂತಾ ವಿರೋಧ ಪಕ್ಷವರು ಬೊಬ್ಬೆ ಹೊಡೆಯುತ್ತಿದ್ದಾರೆ. ಸರ್ಕಾರದ ಖಜಾನೆ ಖಾಲಿ ಆಗಿದ್ರೆ ನಾವು ಭಾಗ್ಯಗಳನ್ನು ಮುಂದುವರೆಸಲು ಆಗ್ತಿರಲ್ಲ.ಇದುವರೆಗೂ ರಾಜ್ಯದ ಜನರಿಗೆ ಎಲ್ಲಾ ಭಾಗ್ಯಗಳು ಸಿಗುತ್ತಿವೆ ಅಂದರೆ ನಮ್ಮ ಖಜಾನೆ ತುಂಬಿದೆ ಅಂತಾ. ನಾವು ನೀಡ್ತಿರೋ ಯಾವುದೇ ಭಾಗ್ಯದಲ್ಲಿ ಯಾರಿಂದಲೂ ಕಮೀಷನ್ ಪಡೀತಿಲ್ಲ ಎಂದು ಹೇಳಿದರು. ಈಗ ಮೂಡಾ ಹಗರಣ ಇಟ್ಕೊಂಡು‌ ಬಿಜೆಪಿ ಜೆಡಿಎಸ್ ನವರು ಪಾದಯಾತ್ರ ಮಾಡಿದ್ರು… ಯಡಿಯೂರಪ್ಪನನ್ನು ಛೋಟಾ ಸಹಿ ಮಾಡಿ ಜೈಲಿಗೆ ಕಳಿಸಿದವರು ಯಾರು ಅಂತಾ ಅವ್ರುಗೆ ನೆನಪಿಲ್ಲ ಅಂತಾ ವ್ಯಂಗ್ಯ ವಾಡಿದರು.

RELATED ARTICLES
- Advertisment -
Google search engine

Most Popular