Tuesday, April 7, 2026
Google search engine

Homeರಾಜಕೀಯಉಪಚುನಾವಣೆ ಬಳಿಕ ಸಿಎಂ ವಿಚಾರ : ಡಿ.ಕೆ ಸುರೇಶ್

ಉಪಚುನಾವಣೆ ಬಳಿಕ ಸಿಎಂ ವಿಚಾರ : ಡಿ.ಕೆ ಸುರೇಶ್

ಬೆಂಗಳೂರು : ನಮ್ಮಣ್ಣ ಸಿಎಂ ಆಗಬೇಕು ಎಂಬ ಆಸೆ ಇದೆ, ಆದರೆ ಇವತ್ತೇ ಸಿಎಂ ಆಗಬೇಕು ಅಂತೇನಿಲ್ಲ. ಇನ್ನೂ ಸಮಯವಿದೆ ಎಂದು ಮಾಜಿ ಸಂಸದ ಡಿ.ಕೆ ಸುರೇಶ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ ಸುರೇಶ್, ಪರಮೇಶ್ವರ್ ಹೇಳಿಕೆಯನ್ನ ಅವರಿಗೆ ಕೇಳಬೇಕು  ಪರಮೇಶ್ವರ್ ಗೃಹ ಸಚಿವರಿದ್ದಾರೆ ಅವರು ಹೇಳಿದಂತೆ ಕೇಳಬೇಕು.  ನಮ್ಮಣ್ಣ ಇವತ್ತೇ  ಸಿಎಂ ಆಗುತ್ತಾರೆ ಅಂತಾ ಏನೂ ಹೇಳಿಲ್ಲ ಸಿಎಂ ಆಗಬೇಕು ಎಂಬ ಆಸೆ ಇದೆ. ಆಸೆ ಇಲ್ಲ ಅಂತಾ ಹೇಳಿಲ್ಲ ಇನ್ನೂ ಸಮಯವಿದೆ ಉಪಚುನಾವಣೆ ಮುಗಿದ ಮೇಲೆ ಮಾತಾಡೋಣ ಎಂದರು.

ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ. ಯಾವುದೇ ಅನುಮಾನ ಬೇಡ ಗ್ಯಾರಂಟಿ ಕೊಟ್ಟಿದ್ದೇವೆ.  ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲ್ಲುತ್ತೆ ಬಾಗಲಕೋಟೆ ಗೆಲುವು ಕಷ್ಟ ಎಂಬುದು ಕೇವಲ ಊಹಾಪೋಹ ಎಂದು ಡಿಕೆ ಸುರೇಶ್ ಹೇಳಿದರು.

RELATED ARTICLES
- Advertisment -
Google search engine

Most Popular