Friday, April 18, 2025
Google search engine

Homeರಾಜ್ಯಹಿಂದುಳಿದ ವರ್ಗಗಳ ಸಮುದಾಯ ಭವನ ನಿರ್ಮಾಣಕ್ಕೆ ವಿಶೇಷ ಅನುದಾನ ಬಿಡುಗಡೆ ಮಾಡಿದ ಸಿಎಂ

ಹಿಂದುಳಿದ ವರ್ಗಗಳ ಸಮುದಾಯ ಭವನ ನಿರ್ಮಾಣಕ್ಕೆ ವಿಶೇಷ ಅನುದಾನ ಬಿಡುಗಡೆ ಮಾಡಿದ ಸಿಎಂ

ಬೆಂಗಳೂರು: ಹಿಂದುಳಿದ ವರ್ಗಗಳ ಸಮುದಾಯ ಭವನ ನಿರ್ಮಾಣಕ್ಕೆ ಸಿಎಂ ಸಿದ್ದರಾಮಯ್ಯ ವಿಶೇಷ ಅನುದಾನ ಬಿಡುಗಡೆ ಮಾಡಿದ್ದಾರೆ.

ಹಾಸನ ಜಿಲ್ಲೆಯ ಅರಸೀಕೆರೆ, ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಕ್ಷೇತ್ರ, ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ ಹಾಗೂ ಗದಗ ಜಿಲ್ಲೆಯ ರೋಣ ಕ್ಷೇತ್ರಕ್ಕೆ ಸರ್ಕಾರದಿಂದ ಒಟ್ಟು 16.40 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಮಾಡಲಾಗಿದೆ.

ಕರ್ನಾಟಕಕ್ಕೆ ಶಿಫಾರಸ್ಸು ಮಾಡಲಾಗಿದ್ದ 5495 ಕೋಟಿ ರೂ. ವಿಶೇಷ ಅನುದಾನ ಇದುವರೆಗೆ ಕೇಂದ್ರ ನೀಡಿಲ್ಲ. ಇನ್ನು ಬರ ಪರಿಹಾರಕ್ಕಾಗಿ ಮನವಿ ಸಲ್ಲಿಸಿ ತಿಂಗಳುಗಳು ಸರಿದವು. ಗೃಹಮಂತ್ರಿಗಳ ಅಧ್ಯಕ್ಷತೆಯ ಹೈಪವರ್‌ ಕಮಿಟಿಯೇ ಅದಕ್ಕೆ ಅನುಮೋದನೆ ಕೊಡ್ಬೇಕು. ಆದರೆ ಗೃಹಮಂತ್ರಿಗಳಾದ ತಾವು ಇದುವರೆಗೆ ಸಭೆ ಕರೆದಿಲ್ಲ. ಪರಿಹಾರವೂ ಬಂದಿಲ್ಲ.

ಇತ್ತ ಕನ್ನಡಿಗರ ಅನ್ನಭಾಗ್ಯಕ್ಕೆ ಅಕ್ಕಿ ಕೊಡಲಾಗದು ಎಂದಿದ್ದ ಕೇಂದ್ರ, ಈಗ ಅದೇ ಅಕ್ಕಿಯನ್ನು ಭಾರತ್‌ ಬ್ರಾಂಡ್‌ ಹೆಸರಲ್ಲಿ ಚುನಾವಣಾ ಪ್ರಚಾರಕ್ಕಾಗಿ ಮಾರುತ್ತಿದೆ. ಅಮಿತ್ ಶಾ ಅವರೇ, ಕನ್ನಡಿಗರ ಹಸಿವು ಹಸಿವಲ್ಲವೇ? ಹೇಳಿ ಶಾ, ಕನ್ನಡಿಗರ ಮೇಲೆ ಬಿಜೆಪಿಗೆ ಯಾಕಿಷ್ಟು ತಾತ್ಸಾರ? ಅಂತಾ ಪ್ರಶ್ನೆ ಮಾಡಿದ್ದಾರೆ.

ಬಿಜೆಪಿ ಶಾಸಕರ ವಿರೋಧದ ನಡುವೆಯೂ ನಿರ್ಣಯ ಓದಿದ ಕಾನೂನು ಸಚಿವ ಹೆಚ್.ಕೆ.ಪಾಟೀಲ್, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 68,200 ಕೋಟಿ ರೂಪಾಯಿ ತೆರಿಗೆ ನಷ್ಟ ಆಗಿದೆ ಎಂದು ಆರೋಪಿಸಿದರು. ಜೊತೆಗೆ ಕೇಂದ್ರದಿಂದ ಬರಬೇಕಾದ ಅನುದಾನ ತೆರಿಗೆ ಪಾಲು ಹಾಗೂ ಬರದ ಅಂಕಿ ಅಂಶ ಕುರಿತು ನಿರ್ಣಯ ಮಂಡಿಸಿದರು.

RELATED ARTICLES
- Advertisment -
Google search engine

Most Popular