ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಗ್ರಾಮೀಣ ಭಾಗದಲ್ಲಿ ಪ್ರಥಮ ಸಹಕಾರ ಸಂಘವನ್ನು ಸ್ಥಾಪಿಸುವ ಮೂಲಕ ಸಹಕಾರ ಪಿತಾಮಹಾ ಎನಿಸಿ ಕೊಂಡ ಸಿದ್ದನ ಗೌಡರ ಭಾವ ಚಿತ್ರವನ್ನು ಎಲ್ಲಾ ಸಹಕಾರಿ ಕ್ಷೇತ್ರದ ಕಚೇರಿಗಳಲ್ಲಿ ಅಳವಡಿಸಲು ರಾಜ್ಯ ಸರ್ಕಾರ ಅದೇಶ ಹೊರಡಿಸ ಬೇಕೆಂದು ಚಿಬುಕಹಳ್ಳಿ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿ.ಎಂ.ಶಿವಕುಮಾರ್ ಒತ್ತಾಯಿಸಿದರು.
ಸಾಲಿಗ್ರಾಮ ತಾಲೂಕಿನ ಚಿಬುಕಹಳ್ಳಿ ಕೃಷಿಪತ್ತಿನ ಸಹಕಾರ ಸಂಘದಲ್ಲಿ ನಡೆದ ಸಹಕಾರಿ ಕ್ಷೇತ್ರದ ಪಿತಮಹಾ ಸಿದ್ದನಗೌಡ ಅವರ ಜನ್ಮಾದಿನಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಿದ್ದನಗೌಡ ಅವರು ಸ್ಥಾಪಿಸಿದ ಸಹಕಾರ ಸಂಘವು ರಾಜ್ಯದ ಎಲ್ಲಾ ಕಡೆ ಸ್ಥಾಪನೆಯಾಗಿ ಸಕಾಲದಲ್ಲಿ ಸಾಲ ಸೌಲಭ್ಯ, ಹತ್ತರಾರು ಜನಪರ ಸವಲತ್ತುಗಳನ್ನು ಒದಗಿಸಿ ರೈತರ ಬಾಳಿಗೆ ನಂದಾ ದೀಪವಾಗಲು
ಕಾರಣವಾಗಿದ್ದು ಇವರನ್ನ ಸ್ಮರಿಸುವ ಕೆಲಸ ಅಗ ಬೇಕಾದರೇ ಇವರ ಜಯಂತಿಯನ್ನು ಸರ್ಕಾರಿ ಅಚರಣೆಯಾಗ ಬೇಕೆಂದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ನಂಜೇಗೌಡ, ನಿರ್ದೇಶಕರಾದ ಎಚ್.ಎಸ್.ವೆಂಕಟೇಶ್, ಸಿ.ಎ.ಗಣೇಶ್,ಬೆಣಗನಹಳ್ಳಿ ಪ್ರಸನ್ನಕುಮಾರ್, ಹೊಸಕೋಟೆ ಸಚಿನ್, ಶಿವರಾಜ್, ಸೋಮಯ್ಯ, ನಿಂಗರಾಜನಾಯಕ, ಸಂಘದ ಸಿ.ಇ.ಓಕೃಷ್ಣೇಗೌಡ, ನಾಗರಾಜು, ಕುಮಾರ್ ಗ್ರಾಮಸ್ಥರಾದ ಸೋಮಶೇಖರ್, ಸಿ.ಜೆ.ಕುಮಾರ್, ಸತೀಶ್, ರಮೇಶ್, ರವೀಶ್, ಇದ್ದರು.