Thursday, January 29, 2026
Google search engine

Homeಸ್ಥಳೀಯಚುಂಚನಕಟ್ಟೆ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಸಿಎಂ ಸಿದ್ದರಾಮಯ್ಯ ಭರವಸೆ

ಚುಂಚನಕಟ್ಟೆ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಸಿಎಂ ಸಿದ್ದರಾಮಯ್ಯ ಭರವಸೆ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ‌.ಅರ್.ನಗರ : ಕಾಂಗ್ರೆಸ್ ಸರ್ಕಾರದ ಶಾಸಕ ರವಿಶಂಕರ್ ಅವಧಿಯಲ್ಲೇ ಚುಂಚನಕಟ್ಟೆ ಸಕ್ಕರೆ ಕಾರ್ಖಾನೆ ಪ್ರಾರಂಭವಾಗುತ್ತದೆ. ಸಕ್ಕರೆ ಸಚಿವರೊಂದಿಗೆ ಮಾತನಾಡಿ ಕಾರ್ಖಾನೆ ಸಮಸ್ಯೆಯ ವರದಿಯನ್ನು ತರಿಸಿಕೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಬ್ಬು ಬೆಳೆಗಾರರ ಸಂಘಕ್ಕೆ ಭರವಸೆ ನೀಡಿದರು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ಅಂಕನಹಳ್ಳಿ ತಿಮ್ಮಪ್ಪ ಮತ್ತು ಸಂಘದ ಪದಾಧಿಕಾರಿಗಳು ಶಾಸಕ ರವಿಶಂಕರ್ ಜೊತೆ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಧಾನ ಸೌಧದಲ್ಲಿ ಭೇಟಿ ಮಾಡಿ ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆ ಪ್ರಾರಂಭದ ಬಗ್ಗೆ ಚರ್ಚಿಸಿದರು.
ಕೆ ಆರ್ ನಗರ ಹುಣಸೂರು ಸೇರಿದಂತೆ ಐದಾರು ತಾಲೂಕುಗಳ ರೈತರ ಜೀವನಾಡಿ ಯಾಗಿರುವ ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆ ಸ್ಥಗಿತಗೊಂಡು ಹಲವು ವರ್ಷಗಳೇ ಆಗಿದೆ ಇದರಿಂದ ಕಬ್ಬು ಬೆಳೆಗಾರರು ಸಾಕಷ್ಟು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಮೈಸೂರು ಜಿಲ್ಲೆಯವರೇ ಮುಖ್ಯಮಂತ್ರಿ ನೀವಾಗಿರುವುದರಿಂದ ರೈತರ ಭವಿಷ್ಯ ನಿಮ್ಮ ಕೈಯಲ್ಲಿದೆ. ಈ ಕಾರ್ಖಾನೆಯನ್ನ ರೈತರಿಗಾಗಿ ಉಳಿಸಿಕೊಡಿ ಎಂದು ರೈತ ಸಂಘದ ಪದಾಧಿಕಾರಿಗಳು ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು. ಈ ಹಿಂದೆ ಇದರ ಸಮಸ್ಯೆಯನ್ನು ನಮ್ಮ ಸರ್ಕಾರದ ಅವಧಿಯಲ್ಲೇ ಬಗೆಹರಿಸಲಾಯಿತು. ಮತ್ತೆ ಏಕೆ ಈ ಸಮಸ್ಯೆ ಉದ್ಭವವಾಗಿದೆ ಸರಿ ಬಿಡಿ ನನ್ನ ಗಮನಕ್ಕೆ ಬಂದಿರುವುದರಿಂದ ಇದರ ಬಗ್ಗೆ ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ ಇದರ ಸಮಸ್ಯೆ ಬಿಡಿಸುವ ಜವಾಬ್ದಾರಿಯನ್ನು ನಿಮ್ಮ ತಾಲೂಕಿನ ಶಾಸಕ ರವಿಗೆ ನೀಡುತ್ತೇನೆ. ನಂತರ ಎಲ್ಲರೂ ಕುಳಿತು ಮಾತನಾಡಿ ಪ್ರಾರಂಭಕ್ಕೆ ಏನು ಆಗಬೇಕು ಅವುಗಳನ್ನು ಒದಗಿಸಲು ಸರ್ಕಾರ ರೈತರೊಂದಿಗೆ ಇರುತ್ತದೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಡಿ ರವಿಶಂಕರ್, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಾಡ್ಯ ರವಿ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಸಂಘಟನಾ ಕಾರ್ಯದರ್ಶಿ ಸ್ವಾಮಿರಾಜು, ಮೈಸೂರು ಜಿಲ್ಲಾ ಗೌರವ ಅಧ್ಯಕ್ಷ ಕೃಷ್ಣಪ್ಪ, ಕೆ ಆರ್ ನಗರ ತಾಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಶಿವರಾಜ್,ಗೌರವಾಧ್ಯಕ್ಷ ನಾಗರಾಜ್, ಟಿ ನರಸೀಪುರ ತಾಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರವಿ, ಕೆ ಆರ್ ನಗರ ತಾಲೂಕು ಎಸ್ ಟಿ ಕಾಂಗ್ರೆಸ್ ಘಟಕದ ಅಧ್ಯಕ್ಷ ತಿಪ್ಪೂರು ಮಹದೇವ್, ಸಾಲಿಗ್ರಾಮ ತಾಲೂಕು ವಾಲ್ಮೀಕಿ ನಾಯಕರ ಸಂಘ ಅಧ್ಯಕ್ಷ ಭೇರ್ಯ ಸಿ ಸಿ ಮಹದೇವ್, ಹೊಸೂರು ಸಂತೋಷ್, ತಂದ್ರೆ ಧರ್ಮ, ಚನ್ನಂಗೆರೆ ಕುಮಾರ್, ಮಲ್ಲಿಕಾರ್ಜುನ್ ಇತರರು ಇದ್ದರು.

RELATED ARTICLES
- Advertisment -
Google search engine

Most Popular