ಬೆಂಗಳೂರು : ಇತ್ತೀಚೆಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಸಂಪುಟ ಪುನಾರಚನೆ ಕುರಿತಂತೆ ಸುಳಿವು ನೀಡಿದ್ದರು. ಇದೇ ವಿಚಾರವಾಗಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಮಾತನಾಡಿದ್ದು, ಸಂಪುಟ ಪುನಾರಚನೆ ಕುರಿತಂತೆ ಚರ್ಚಿಸಲು ಸಿಎಂ ಸಿದ್ದರಾಮಯ್ಯ ಎಂದು ದೆಹಲಿಗೆ ತೆರಳುತ್ತಿದ್ದಾರೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಇವತ್ತು ದೆಹಲಿಗೆ ತೆರಳುತ್ತಿದ್ದಾರೆ. ಏಕೆಂದರೆ ನಾಳೆ ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸಭೆ ಇದೆ. ವರ್ಕಿಂಗ್ ಕಮಿಟಿಗೆ ಸಾಮಾನ್ಯವಾಗಿ ಮುಖ್ಯಮಂತ್ರಿಗಳನ್ನು ಹಾಗೂ ಕೆಪಿಸಿಸಿ ಅಧ್ಯಕ್ಷರನ್ನ ಕರೆಯುತ್ತಾರೆ. ನಾನು ಕೂಡ ಅನೇಕ ಸಂದರ್ಭ ದಲ್ಲಿ ಹೋಗಿ ಭಾಗಿಯಾಗಿದ್ದೇನೆ ಅದಕ್ಕೆ ತೆರಳುತ್ತಿದ್ದಾರೆ.
ಅದಾದ್ಮೇಲೆ ಅವರು ಏನಾದರೂ ಹೈಕಮಾಂಡೊಂದಿಗೆ ಚರ್ಚೆ ಮಾಡಿ ಸಂಪುಟ ಪುನ ರಚನೆ ಕುರಿತು ಚರ್ಚೆ ಮಾಡುತ್ತಾರೋ ಎಂಬುದು ಗೊತ್ತಿಲ್ಲ. ಅದರ ಜೊತೆಗೆ ಕೆಪಿಸಿಸಿ ಅಧ್ಯಕ್ಷರನ್ನು ಬದಲಾಯಿಸಬೇಕು ಎನ್ನುವುದು ಕೂಗು ಕೇಳಿ ಬರುತ್ತಿದೆ. ಅಲ್ಲಲ್ಲಿ ಮಾತನಾಡುತ್ತಿರುವುದು ತಿಳಿಬಂದಿದೆ. ಹಾಗಾಗಿ ಈ ಎರಡು ವಿಚಾರದಲ್ಲಿ ಏನು ತೀರ್ಮಾನ ಮಾಡಿಕೊಂಡು ಬರುತ್ತಾರೆ ಎನ್ನುವುದು ಗೊತ್ತಿಲ್ಲ ಎಂದು ತಿಳಿಸಿದರು.