ವಿನಯ್ ದೊಡ್ಡಕೊಪ್ಪಲು
ಹೊಸೂರು : ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರಿಕ್ಕೆ ಬಂದ ಮೇಲೆ ಇದೇ ಮೊದಲ ಬಾರಿಗೆ ಕೆ.ಆರ್.ನಗರ ಕ್ಷೇತ್ರಕ್ಕೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅಭಿವೃದ್ದಿ ಕಾಮಗಾರಿಗೆ ಚಾಲನೆಗೆ ಆಗಮಿಸುತ್ತಿದ್ದು ಇದರಿಂದ ಕ್ಷೇತ್ರಕ್ಕೆ ಬರಪೂರ ಹೊಸ ಅಭಿವೃದ್ದಿಯ ಹೊಸ ಕೆಲಸಗಳು ಮಂಜೂರು ಘೋಷಣೆಯನ್ನು ಕ್ಷೇತ್ರದ ಜನರು ನೀರಿಕ್ಷೆಯಲ್ಲಿ ಇದ್ದಾರೆ.

ಮೇ. 23 ರ ಶುಕ್ರವಾರ ಕೆ.ಅರ್.ನಗರ ರೇಡಿಯೋ ಮೈಧಾನದಲ್ಲಿ ನಡೆಯುವ ಬೃಹತ್ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬರೋಬ್ಬರಿ 390 ಕೋಟಿ ಅಧಿಕ ರೂಪಾಯಿಗಳ ವಿವಿಧ ಇಲಾಖೆಗಳ ಅಭಿವೃದ್ದಿ ಕೆಲಸಕಾರ್ಯಗಳಿಗೆ ಚಾಲನೆ ನೀಡಲಿದ್ದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇವರಿಗೆ ಸಾಥ್ ನೀಡಲಿದ್ದಾರೆ
ಯುವ ಶಾಸಕರಾಗಿರುವ ಡಿ.ರವಿಶಂಕರ್ ಅವರು ಕ್ಷೇತ್ರದಲ್ಲಿರುವ ಕೆ.ಅರ್.ನಗರ ಮತ್ತು ಸಾಲಿಗ್ರಾಮ ತಾಲೂಕಿನಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಯ ಮಾಡಲು ಸಲ್ಲಿಸಿರುವ ವಿವಿಧ ಮನವಿಯ ಅಂದಾಜು ಪಟ್ಟಿಯ ಮೇರೆಗೆ ರಾಜ್ಯ ಸರ್ಕಾರ ಈ ಅನುಧಾನ ಬಿಡುಗಡೆ ಮಾಡಿದ್ದು ಇನ್ನು ಅನೇಕ ಅಭಿವೃದ್ದಿ ಕೆಲಸಗಳಿಗೆ ಅನುಧಾನ ಕೋರಿ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಸದ್ಯ ಪತ್ರಿಕೆಗೆ ಸಿಕ್ಕ ಮಾಹಿತಿ ಅಂತೆ ನೀರಾವರಿ ಇಲಾಖೆಗೆ 10 ಕೋಟಿ ರೂ ಬಿಡುಗಡೆಯಾಗಿದ್ದು ಇದರಲ್ಲಿ ಚಾಮರಾಜ ನಾಲೆಯ ಕೊನೆಯ ಭಾಗದ ಅಭಿವೃದ್ದಿಗೆ 5 ಕೋಟಿ, ಕೋಡಿಯಮ್ಮ ಪಿಕಪ್ ನಾಲೆಯ ಅಭಿವೃದ್ದಿಗೆ ಕೋಟಿ ಬಿಡುಗಡೆಯಾಗಿದ್ದ ಇದೇ ಇಲಾಖೆಯ ಮೂಲಕ ಕೆಸ್ತೂರು ಕೊಪ್ಪಲು ಬಳಿ ಚಾಮರಾಜ ನಾಲೆಗೆ ಮೇಲ್ ಗಾಲುವೆ ನಿರ್ಮಾಣಕ್ಕೆ 15 ಕೋಟಿ, ರಾಮಸಮುದ್ರ ಚಾಮಲಪುರ ಬ್ರಾಂಚ್ ನಾಲೆ ಅಭಿವೃದ್ದಿಗೆ 43 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದೆ.
ಇನ್ನು ಲೋಕೋಪಯೋಗಿ ಇಲಾಖೆಯಿಂದ ಕಾಳಮ್ಮನ ಕೊಪ್ಪಲು ರಸ್ತೆಗೆ 10ಕೋಟಿ,ಮೂಳ್ಳುರು ರಸ್ತೆಗೆ 1.50 ಕೋಟಿ,ಐಚನಹಳ್ಳಿ ರಸ್ತೆಗೆ 2 ಕೋಟಿ, ಮಂಚನಹಳ್ಳಿ ಮತ್ತು ಗೇರುಡ ರಸ್ತೆಗೆ ತಲಾ ಒಂದು ಕೋಟಿ, ಅರ್ಕೇಶ್ವರ ದೇವಾಲಯದಿಂದ ಚೀರನಹಳ್ಳಿ ರಸ್ತೆಗೆ 2 ಕೋಟಿ ಮತ್ತು ಬಹುಬೇಡಿಕೆಯಾಗಿರುವ ಕಪ್ಪಡಿ ಗಂಧನಹಳ್ಳಿ ಬಳಿ ಸೇತುವೆ ನಿರ್ಮಾಣಕ್ಕೆ 25 ಕೋಟಿ ಬಿಡುಗಡೆಯಾಗಿದ್ದು ಇದೇ ಇಲಾಖೆಯಿಂದ ಹೊಸ ಪ್ರವಾಸಿ ಮಂದಿರ ಮತ್ತು ವಕೀಲ ಸಂಘದ ಕಟ್ಟಡ ನಿರ್ಮಾಣಕ್ಕೆ ಅನುಧಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಇನ್ನು ಸಣ್ಣ ನೀರಾವರಿ ಇಲಾಖೆಯಿಂದ ಮಿರ್ಲೆ ಗ್ರಾಮದ ಬಳಿ ಕಾವೇರಿ ನದಿಯಿಂದ ಮಿರ್ಲೆ ಹೋಬಳಿ ಮತ್ತು ಹೊಸ ಅಗ್ರಹಾರ ಹೋಬಳಿಯ ಕೆರೆಗಳಿಗೆ ಏತ ನೀರಾವರಿ ಮೂಲ ನೀರು ತುಂಬಿಸುವ ಯೋಜನೆಗೆ 50 ಕೋಟಿ ಮತ್ತು ಕೆ.ಅರ್.ನಗರ ಡಿಗ್ರಿ ಕಾಲೇಜು ಕಟ್ಟಡ ನಿರ್ಮಾಣಕ್ಕೆ 16 ಕೋಟಿ ರೂಪಾಯಿಗಳು ಬಿಡುಗಡೆಯಾಗಿದ್ದು ಸಾಲಿಗ್ರಾಮ ತಾಲೂಕು ಆಸ್ವತ್ರೆ ನಿರ್ಮಾಣಕ್ಕೆ 60 ಕೋಟಿ ಬಿಡುಗಡೆಯಾಗಿದೆ.
ಇನ್ನು ಪಶು ಇಲಾಖೆಯಿಂದ ಹಾಡ್ಯದಲ್ಲಿ ಆಸ್ವತ್ರೆ ನಿರ್ಮಾಣಕ್ಕೆ 50 ಲಕ್ಷ, ಕೆ.ಆರ್.ನಗರದಲ್ಲಿ ಪಾಲಿಕಿನ್ಲಿಕ್ ನಿರ್ಮಾಣಕ್ಕೆ 45 ಲಕ್ಷ, ಜಿಲ್ಲಾಪಂಚಾಯಿಂದ ರಸ್ತೆ ಅಭಿವೃದ್ದಿಗೆ 10 ಕೋಟಿ, ನಿರ್ಮಿತಿ ಕೇಂದ್ರದ ಮೂಲಕ ಚಂದಗಾಲು,ಅರ್ಜನಹಳ್ಳಿ,ಮಳಲಿ,ಮುಂಜನಹಳ್ಳಿ,ಚಿಕ್ಕಬೇರ್ಯ,ಮಾವನೂರು,ಬೇರ್ಯ, ತಂದ್ರೆ ಗ್ರಾಮಗಳಲ್ಲಿ ವಾಲ್ಮಿಕಿ ಸಮುದಾಯ ಭವನ ನಿರ್ಮಾಣಕ್ಕೆ ತಲಾ 20 ಲಕ್ಷ ದಂತೆ 1.60 ಕೋಟಿ ಮಂಜೂರು ಅಗಿದೆ
ಉಳಿದಂತೆ ಶಿಕ್ಷಣ ಇಲಾಖೆಯ ಮೂಲಕ ವಿವಿಧ ಕಟ್ಟಡ ನಿರ್ಮಾಣ ಮತ್ತು ದುರಸ್ತಿಗಾಗಿ 10 ಕೋಟಿ ಮಿರ್ಲೆ ಪಾಲಿಟೆಕ್ನಿಕ್ ಕಾಲೇಜಿನ ಹೈಟೆಕ್ ಗ್ರಂಥಾಲ ಕಟ್ಟಡ ನಿರ್ಮಾಣಕ್ಕೆ 1.50 ಕೋಟಿ ನೀಡಲಾಗಿದ್ದು ಇನ್ನು ಕುಡಿಯುವ ನೀರು ಇಲಾಖೆಗೆ 4 ಕೋಟಿ ಸೇರಿದಂತೆ ಇನ್ನಿತರ ಇಲಾಖೆಗೆ 70 ಕೋಟಿ ಅನುಧಾನವನ್ನು ಸರ್ಕಾರ ನೀಡಿದ್ದು ಈ ಮೂಲಕ ಕೆ.ಅರ್.ನಗರ ಕ್ಷೇತ್ರದ ಅಭಿವೃದ್ಧಿಗೆ ಶಾಸಕ ಡಿ.ರವಿಶಂಕರ್ ಮತ್ತು ರಾಜ್ಯ ಸರ್ಕಾರ ಮುನ್ನುಡಿ ಬರೆದಿದ್ದು ಮುಂದೆ ಸಲ್ಲಿಸಲಾಗಿರುವ ಕಾಮಗಾರಿಗಳಿಗೆ ಅನುಧಾನ ಮಂಜೂರು ಅದರೆ ಕ್ಷೇತ್ರದ ಅಭಿವೃದ್ದಿಯ ಚಿತ್ರಣವೇ ಬದಲಾಗಲಿದೆ.

ಕೆ.ಆರ್.ನಗರ ಕ್ಷೇತ್ರದ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕಿನ ಅಭಿವೃದ್ದಿಗೆ ಶಾಸಕ ಡಿ.ರವಿಶಂಕರ್ ಅವರು ರಾಜ್ಯ ಸರ್ಕಾರದಿಂದ ಕೋಟಿ ರೂ. ಗಳ ಅನುಧಾನ ತಂದು ಕಾಮಗಾರಿ ಆರಂಭಿಸುತ್ತಿರುವುದು ಅವರನ್ನು ಅಭಿನಂದಿಸುವೆ ಜತಗೆ ಎರಡು ತಾಲೂಕಿನ ಜನಗೆ ಅಭಿವೃದ್ಧಿ ಕೆಲಸಗಳಿಗೆ ಸಹಕಾರ ನೀಡಿದರೇ ಇನ್ನಷ್ಟು ಅಭಿವೃದ್ಧಿ ಮಾಡಲು ರವಿಶಂಕರ್ ಅವರಿಗೆ ಉತ್ಸಾಹ ತುಂಬ ಬಹುದು
ದಮ್ಮನಹಳ್ಳಿ ಉದಯಶಂಕರ್
ಅಧ್ಯಕ್ಷರು.ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
