ಬೆಂಗಳೂರು: ದೆಹಲಿಗೆ ಸಿಎಂ ಸಿದ್ಧರಾಮಯ್ಯ ತೆರಳಿದ್ದಾರೆ. ಇಂದು ಮಧ್ಯಾಹ್ನ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯನ್ನು ಭೇಟಿಯಾಗಿರುವಂತ ಅವರು, ನಾಳೆ ಮತ್ತಿಬ್ಬರು ಕೇಂದ್ರ ಸಚಿವರನ್ನು ಭೇಟಿಯಾಗಲಿದ್ದಾರೆ.
ಮುಖ್ಯಮಂತ್ರಿ ಕಾರ್ಯಾಲಯದಿಂದ ಮಾಹಿತಿ ಬಿಡುಗಡೆ ಮಾಡಲಾಗಿದ್ದು ನಾಳೆ ಮಧ್ಯಾಹ್ನ 12.30ಕ್ಕೆ ಕೇಂದ್ರ ಜಲಶಕ್ತಿ ಸಚಿವ ಸಿಆರ್ ಪಾಟೀಲ್ ಅವರನ್ನು ಸಿಎಂ ಸಿದ್ಧರಾಮಯ್ಯ ಅವರು ಭೇಟಿಯಾಗುತ್ತಿರುವುದಾಗಿ ತಿಳಿಸಿದೆ.
ಇನ್ನೂ ಮಧ್ಯಾಹ್ನ 2.30ಕ್ಕೆ ಕೇಂದ್ರ ವಿಮಾನಯಾನ ಸಚಿವ ಕೆ.ರಾಂಮೋಹನ್ ನಾಯ್ಡು ಅವರನ್ನು ದೆಹಲಿಯ ರಾಜೀವ್ ಗಾಂಧಿ ಭವನದಲ್ಲಿ ಸಿಎಂ ಸಿದ್ಧರಾಮಯ್ಯ ಭೇಟಿಯಾಗಲಿದ್ದಾರೆ.ಕೇಂದ್ರ ಜಲಶಕ್ತಿ ಸಚಿವರೊಂದಿಗೆ ರಾಜ್ಯದ ಜಲ ವಿವಾದಗಳು, ನೀರಿನ ಸಮಸ್ಯೆ ಸಂಬಂಧ ಸಿಎಂ ಸಿದ್ಧರಾಮಯ್ಯ ಚರ್ಚೆ ನಡೆಸಿದರೇ, ವಿಮಾನಯಾನ ಸಚಿವರೊಂದಿಗೆ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಚರ್ಚಿಸೋ ಸಾಧ್ಯತೆ ಇದೆ.