ಬೆಂಗಳೂರು: ಇಂದು ಪುನೀತ್ ರಾಜ್ ಕುಮಾರ್ ಅವರ 50ನೇ ಹುಟ್ಟು ಹಬ್ಬ. ಇಂದಿನ ಪುನೀತ್ ರಾಜ್ ಕುಮಾರ್ ಜನ್ಮದಿನಕ್ಕೆ ಸಿಎಂ ಸಿದ್ಧರಾಮಯ್ಯ ಅವರು ನಿಷ್ಕಲ್ಮಷ ಮನಸಿನ ಹಸನ್ಮುಖಿ ವ್ಯಕ್ತಿಯಾಗಿದ್ದ ಅಪ್ಪುವಿಗೆ ನನ್ನ ನಮನಗಳು ಅಂತ ತಿಳಿಸಿದ್ದಾರೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ನಟನೆಯ ಜೊತೆಗೆ ಸಮಾಜ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಪುನೀತ್ ರಾಜ್‍ಕುಮಾರ್ ನೂರಾರು ದುರ್ಬಲ ಜೀವಗಳಿಗೆ ಬದುಕಿನ ಹಾದಿ ತೋರಿದ್ದರು. ಬಡವ, ಬಲ್ಲಿದನೆನ್ನದೆ ಸರ್ವರನ್ನೂ ಪ್ರೀತಿಸುತ್ತಿದ್ದ, ಸದಾ ಹಸನ್ಮುಖಿಯಾಗಿದ್ದ ಅಪ್ಪುವಿನ ಜೀವನ ಯುವಜನರಿಗೆ ಸಂದೇಶದಂತಿದೆ. ಅಪ್ಪುವಿನ ಜನ್ಮದಿನದ ಸಂದರ್ಭದಲ್ಲಿ ಅವರಿಗೆ ನನ್ನ ನಮನಗಳು ಎಂದಿದ್ದಾರೆ.