ಮಂಡ್ಯ : ಸಿಎಂ ಸಿದ್ದರಾಮಯ್ಯ ಸರ್ಕಾರ ಪಾಪರ್ ಆಗೋಗಿದೆ ಎಂದು ಮಂಡ್ಯದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ನಾಯಕರ ಹೇಳಿಕೆ ಖಂಡಿಸಿ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪೆಟ್ರೋಲ್, ಹಾಲು ದರ ಏರಿಕೆ ಮಾಡಾಯ್ತು. ಸಿದ್ದರಾಮಯ್ಯ ಸರ್ಕಾರ ಪಾಪರ್ ಆಗೋಗಿದೆ. ನೌಕರರಿಗೆ ಸಂಬಳ, ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಕೊಡೋಕು ಸರ್ಕಾರದ ಬಳಿ ದುಡ್ಡಿಲ್ಲ. ಸರ್ಕಾರ ಪಾಪರ್ ಆಗಿ ಬರ್ಬಾದ್ ಆಗೋಗಿದೆ. ಗ್ಯಾರಂಟಿ ಯೋಜನೆಗಳಿಗೆ ಕೊಡಲು ದುಡ್ಡು ಸಹ ಇಲ್ಲವಾಗಿದೆ. ಪಾಪರ್ ನಿಂದ ಎಸ್ಕೇಪ್ ಆಗಲು ದಾರಿಯೇ ಇಲ್ಲ.
ಡೆಲ್ಲಿ ಹೈಕಮಾಂಡ್ ಗ್ಯಾರಂಟಿ ನಿಲ್ಲಿಸಿದ್ರೆ ದೇಶದಲ್ಲೇ ಪಕ್ಷಕ್ಕೆ ತೊಂದರೆಯಾಗುತ್ತೆ ಅಂದವ್ರೇ. ಅದಕ್ಕಾಗಿ ಬೆಂಗಳೂರಿನಲ್ಲಿ ನೀರಿನ ಬೆಲೆ ಏರಿಕೆ ಮಾಡಿದ್ದಾರೆ. ನೀರಿನ ದರ ಏರಿಕೆ ಮಾಡಿರೋದು ದೊಡ್ಡ ಅಪರಾಧ. ಅದರ ವಿರುದ್ಧ ಬಿಜೆಪಿ ದೊಡ್ಡ ಹೋರಾಟ ಮಾಡ್ತೇವೆ. ಸ್ಕ್ಯಾಂಡಲ್ ಆಗಿದ್ರು ಸಿಎಂ ರಾಜೀನಾಮೆ ಕೊಡಲ್ಲ ಅಂತಾರೆ. ಡಿ.ಕೆ.ಶಿವಕುಮಾರ್ ಯಾರೇ ಬೈದ್ರು ನೀರಿನ ದರ ಏರಿಕೆ ಮಾಡದೆ ಇರಲ್ಲ ಅಂತಾರೆ. ಅವರಿಗೆ ತಮ್ಮ ಸರ್ಕಾರ ಇರಲ್ಲ ಅನ್ನೋದು ಗ್ಯಾರಂಟಿಯಾಗಿದೆ. ತುಘಲಕ್ ದರ್ಬಾರ್ ಮಾಡುತ್ತಿದೆ.
ನೀರು ದರ ಏರಿಕೆ ಮಾಡ್ತಿದ್ರೆ ರಾಜ್ಯ ಸರ್ಕಾರದ ವಿರುದ್ಧ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತೇವೆ. ಬೆಂಗಳೂರು ಶಾಸಕರು, ಬಿಜೆಪಿಯಿಂದ ಪ್ರತಿಭಟನೆ ಮಾಡುತ್ತೇವೆ ಎಂದು ತಿಳಿಸಿದರು. ಜನರು ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ ಎಂದು ಹೇಳಿದರು.
ರಾಜ್ಯ ಸರ್ಕಾರದಿಂದ ಕೆಪಿಎಸ್‌ಸಿ ಎಕ್ಸಾಂ ಮುಂದೂಡಿಕೆ ವಿಚಾರವಾಗಿ ಮಾತನಾಡಿ, ಅಧಿಕಾರದಲ್ಲಿ ಮುಂದುವರೆಯುವ ನಂಬಿಕೆ ಕಾಂಗ್ರೆಸ್ ಗೆ ಇಲ್ಲ. ಎಷ್ಟು ದಿನ ಇರ್ತಿವೋ ಅಷ್ಟು ದಿನ ಲೂಟಿ ಮಾಡೋಕೆ ನಿಂತಿದ್ದಾರೆ. ಅದಕ್ಕೆ ಯಾವುದು ಸಿಗುತ್ತೋ ಅದರಲ್ಲಿ ಲೂಟಿ ಹೊಡೆಯುತ್ತಿದ್ದಾರೆ. ಮೊನ್ನೆ ಪಿಎಸ್ಐ ಹತ್ರ 30 ಲಕ್ಷ ಈಸ್ಕೊಂಡಿದ್ದಾರೆ. ಅದು ಕೂಡ ಕೇಸ್ ನಡೆಯುತ್ತಿದೆ. ಕಾಂಗ್ರೆಸ್ ಪಾರ್ಟಿ ಮುಗಿದ ಕಥೆ ಎಂದು ಆರ್ ಅಶೋಕ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.