Friday, April 18, 2025
Google search engine

Homeಸ್ಥಳೀಯಸಹಕಾರಿ ಸಂಸ್ಥೆಗಳು ರಾಜಕೀಯ ಆಶ್ರಯ ಸಂಸ್ಥೆಗಳಾಗುತ್ತಿರುವುದು ಕೆಟ್ಟ ಬೆಳವಣಿಗೆ: ಬಿ.ಎನ್.ಸದಾನಂದ ವಿಷಾದ

ಸಹಕಾರಿ ಸಂಸ್ಥೆಗಳು ರಾಜಕೀಯ ಆಶ್ರಯ ಸಂಸ್ಥೆಗಳಾಗುತ್ತಿರುವುದು ಕೆಟ್ಟ ಬೆಳವಣಿಗೆ: ಬಿ.ಎನ್.ಸದಾನಂದ ವಿಷಾದ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವ ಸದುದ್ದೇಶದಿಂದ ರೂಪಿತವಾಗಿರುವ ಸಹಕಾರಿ ಸಂಸ್ಥೆಗಳು ರಾಜಕೀಯ ಆಶ್ರಯ ಸಂಸ್ಥೆಗಳಾಗುತ್ತಿರುವುದು ಕೆಟ್ಟ ಬೆಳವಣಿಗೆಯಾಗಿದೆ ಎಂದು ಮೈಸೂರು ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಬಿ.ಎನ್.ಸದಾನಂದ ವಿಷಾದ ವ್ಯಕ್ತಪಡಿಸಿದರು.

ಕೆ.ಆರ್.ನಗರ  ತಾಲೂಕಿನ ಹೆಬ್ಬಾಳು ಸಮೀಪದ ಕಪ್ಪಡಿಕ್ಷೇತ್ರದಲ್ಲಿ ಸಹಕಾರ ಮಹಾಮಂಡಳ, ಮೈಮುಲ್, ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಹಾಗೂ ಸಹಕಾರ ಇಲಾಖೆ ಸಹಯೋಗದಲ್ಲಿ ಮೈಮುಲ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಹಾಗೂ ಆಯ್ದ ಹಾಲು ಉತ್ಪಾದಕರ ಸಹಕಾರ ಸಂಘಗಳ ಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಏರ್ಪಡಿಸಲಾಗಿದ್ದ ರಾಜ್ಯಮಟ್ಟದ ವಿಶೇಷ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬ ಸಹಕಾರಿ ಸಂಸ್ಥೆಯ ನೌಕರರು ಅಧಿಕಾರಿಗಳು ರಾಜಕೀಯ ಮರ್ಜಿಗೆ ಒಳಗಾಗಿ ಕೆಲಸ ಮಾಡದೆ ಪ್ರಾಮಾಣಿಕವಾಗಿ ಸಹಕಾರ ತತ್ವಗಳ ಆಧಾರದ ಮೇಲೆ ಕೆಲಸ ಮಾಡಿದಲ್ಲಿ ಸಹಕಾರಿ ಸಂಸ್ಥೆಗಳು ಬೆಳವಣಿಗೆ ಕಾಣಲು ಸಾಧ್ಯ ಎಂದರು.

ರಾಜಕೀಯ ಪಕ್ಷಗಳ ಚುನಾವಣೆಗಳಿಗಿಂತ ಹೆಚ್ಚಿನಮಟ್ಟದಲ್ಲಿ ಸಣ್ಣಪುಟ್ಟ ಸಹಕಾರಿ ಸಂಸ್ಥೆಗಳ ಚುನಾವಣೆ ರಾಜಕೀಯ ಪ್ರೇರಿತವಾಗಿ ನಡೆಯುವುದು ದುರ್ದೈವದ ಸಂಗತಿಯಾಗಿದೆ ಎಂದ ಅವರು ಇಂತಹ ವ್ಯವಸ್ಥೆಗೆ ಇತಿಶ್ರೀ ಹಾಡಿ ರಾಜಕೀಯ ಮರ್ಜಿಗೆ ಒಳಗಾಗದೆ ಸಹಕಾರಿ ಸಂಸ್ಥೆಯ ಎಲ್ಲಾ ನೌಕರ ಅಧಿಕಾರಿವರ್ಗದವರು ಜವಾಬ್ದಾರಿಯಿಂದ ಕೆಲಸ ಮಾಡಿ ಎಂದು ಸಲಹೆ ನೀಡಿದರು.

ಸಂಘಗಳ ಸಿಇಒಗಳು ಒತ್ತಡಕ್ಕೆ ಒಳಗಾಗದೆ ಪ್ರಾಮಾಣಿಕವಾಗಿ ಆಡಳಿತ ಮಂಡಳಿಯೊAದಿಗೆ ಉತ್ತಮ ಸಂಬಂಧ ಭಾಂದವ್ಯ ಬೆಳೆಸಿಕೊಂಡು ಸಂಸ್ಥೆಯನ್ನು ಉತ್ತಮವಾಗಿ ನಡೆಸುವಂತೆ ಹೇಳಿದ ಅವರು ತಪ್ಪಿದಲ್ಲಿ ನೀವು ಮಾಡುವ ತಪ್ಪಿಗೆ ನೀವಲ್ಲದೆ ಸದಸ್ಯರು ಸಹ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದನ್ನು ಮರೆಯಬೇಡಿ ಎಂದರು.

ಮೈಮುಲ್ ನಿರ್ದೇಶಕ ಎ.ಟಿ.ಸೋಮಶೇಖರ್ ಮಾತನಾಡಿ ಮೈಮುಲ್ ನೌಕರರಿಗೆ ಇರುವ ಒತ್ತಡ ಬೇರೆ ಯಾವುದೆ ಸಂಘ ಸಂಸ್ಥೆಯವರಿಗೆ ಇಲ್ಲ ಇಂತಹ ಸಂಧರ್ಭದಲ್ಲಿ ಒತ್ತಡ ನಿವಾರಣೆ ಹಾಗೂ ಸಂಘವನ್ನು ಹೇಗೆ ವ್ಯವಸ್ಥಿತವಾಗಿ ಅಭಿವೃದ್ದಿಹಾದಿಯಲ್ಲಿ ಮುನ್ನೆಡೆಸಿಕೊಂಡುಹೋಗಬೇಕೆಂಬುದನ್ನು ಅರಿಯಲು ಇಂತಹ ಶಿಬಿರಗಳು ಸಹಕಾರಿಯಾಗಿವೆ ಎಂಧರು.

ಮೈಮುಲ್ ವ್ಯವಸ್ಥಾಪಕ ನಿರ್ದೇಶಕ ಬಿ.ಎನ್.ವಿಜಯಕುಮಾರ್ ಮಾತನಾಡಿ ತರಬೇತಿ ಶಿಬಿರಗಳು ಅಭಿವೃದ್ದಿಗೆಪೂರಕವಾಗಿದ್ದು ಶಿಕ್ಷಣದೊಂದಿಗೆ ಕಾಲಕಾಲಕ್ಕೆ ತರಬೇತಿ ಪಡೆದಲ್ಲಿ ಸಂಘಸAಸ್ಥೆಗಳ ಪ್ರಗತಿಗೆ ಕಾರಣವಾಗುತ್ತದೆ ಆದ್ದರಿಂದ ತರಬೇತಿ ಎಲ್ಲ ಹಂತದಲ್ಲಿ ಪ್ರಮುಖವಾಗಿದೆ ಎಂದರು.

ಮೈಮುಲ್ ನಿರ್ದೇಶಕ ಈರೇಗೌಡ, ಕೆ.ಎಸ್.ಕುಮಾರ್ ಮತ್ತಿತರರು ಮಾತನಾಡಿದರು. ಮೈಮುಲ್ ಅಧ್ಯಕ್ಷ ಪಿ.ಎಂ.ಪ್ರಸನ್ನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭಕೋರಿದರು. ಮೈಮುಲ್ ನಿರ್ದೇಶಕ ಟಿ.ರಾಮೇಗೌಡ, ಶಿವಗಾಮಿ, ಭೈರಪ್ಪ, ಮಹೇಶ್, ದಾಕ್ಷಾಯಿಣಿ, ಸವಿತಾವಿಜಯಕುಮಾರ್, ಕುಪ್ಪಳ್ಳಿಸೋಮು, ಪಿ.ಎನ್.ಸುಬ್ರಹ್ಮಣ್ಯ, ದಿವಾಕರ್, ಜಗದೀಶ್, ಸಂತೋಷಞ್, ಚಂದ್ರಶೇಖರ್, ಪ್ರವೀಣ್‌ಪತ್ತಾರ್ ಮತ್ತಿತರ ಮೈಮುಲ್ ಅಧಿಕಾರಿ ವೃಂದದವರು ಹಾಗೂ ತಾಲೂಕಿನ ವಿವಿಧ ಹಾಲು ಉತ್ಪಾದಕರ ಸಹಕಾರ ಸಂಘದ ಮುಖ್ಯಕಾರ್ಯನಿರ್ವಾಹಣಾಧಿಕಾರಿಗಳು, ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರು ಪಾಲ್ಗೊಂಡಿದ್ದರು.

ಇದೇ ಸಂಧರ್ಭದಲ್ಲಿ ಹೈನೋದ್ಯಮ ಚಟುವಟಿಕೆಗಳ ವಿಸ್ತಾರ ಮತ್ತು ಉನ್ನತೀಕರಣದಲ್ಲಿ ಸಹಕಾರಿ ಸಂಸ್ಕೃತಿ ಮತ್ತು ವೃತ್ತಿ ಸಂಸ್ಕೃತಿ ಕುರಿತು, ಸಮಯ ನಿರ್ವಹಣೆ ಮತ್ತು ಒತ್ತಡರಹಿತ ಕಾರ್ಯನಿರ್ವಹಣೆ, ಸಹಕಾರ ಸಂಘಗಳ ಕಾಯ್ದೆ ಮತ್ತು ನಿಯಮಗಳ ಇತ್ತೀಚಿನ ತಿದ್ದುಪಡಿಗಳು, ಚರ್ಚಾಗೋಷ್ಠಿಗಳನ್ನು ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ನಡೆಸಿಕೊಡಲಾಯಿತು.

RELATED ARTICLES
- Advertisment -
Google search engine

Most Popular