ಮೈಸೂರು :ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ವಿಜ್ಞಾನ, ತಂತ್ರಜ್ಞಾನ ಮತ್ತು ಕಲಾ ಪ್ರದರ್ಶನವು ಮಕ್ಕಳಲ್ಲಿ ಸೃಜನಾತ್ಮಕ ಚಿಂತನೆ ಮೂಡುವಂತೆ ಮಾಡುತ್ತದೆ ಎಂದು ಶಿಕ್ಷಣ ಸಂಯೋಜನಾಧಿಕಾರಿಗಳಾದ ಮನೋಹರ್ ಹೇಳಿದರು.
ವಸ್ತು ಪ್ರದರ್ಶನದಲ್ಲಿ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಹೊರತರುವುದಕ್ಕಾಗಿ, ಕಲಿಕೆಯಲ್ಲಿ ಆಶಕ್ತಿಯನ್ನು ಮತ್ತು ನಾವಿಣ್ಯತೆಯನ್ನು ಉಂಟುಮಾಡಲು ಈ ಶೈಕ್ಷಣಿಕ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಕಲೆ, ವಿಜ್ಞಾನ, ಪ್ರಾಚೀನ ವಸ್ತು, ಕರಕುಶಲತೆ, ಚಿತ್ರಕಲೆ ಹೀಗೆ ಹತ್ತು ಹಲವು ವಿಷಯಗಳನ್ನೊಳಗೊಂಡಿತ್ತು. ವಿದ್ಯಾರ್ಥಿಗಳು ವಿವಿಧ ಮಾದರಿಗಳನ್ನು ತಯಾರಿಸಿ ತರುವುದರ ಜೊತೆಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲ ಅತಿಥಿಗಳಿಗೆ, ಸಿಬ್ಬಂದಿವರ್ಗದವರಿಗೆ ಮತ್ತು ಪೋಷಕರುಗಳಿಗೆ ಅಚ್ಚುಕಟ್ಟಾಗಿ ಶಾಲೆಯ ಮಕ್ಕಳು ವಿವರಣೆಯನ್ನು ನೀಡಿರುವುದು ಸಂತಸ ಉಂಟಾಗುತ್ತದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಿಕ್ಷಣ ಸಮುಚ್ಚಯ ಸಂಪನ್ಮೂಲ ಅಧಿಕಾರಿಗಳಾದ ಪನ್ನ ಪ್ರಕಾಶ್ ಮತ್ತು ಶಾಲೆಯ
ಶಾಲೆಯ ಮುಖ್ಯ ಶಿಕ್ಷಕ ಗುರುಸ್ವಾಮಿ ಎಂ., ಶಾಲೆಯ ಬೋಧಕ / ಬೋಧಕೇತರ ಸಿಬ್ಬಂದಿ ವರ್ಗದವರೆಲ್ಲರು ಹಾಜರಿದ್ದರು.