Friday, December 12, 2025
Google search engine

Homeರಾಜ್ಯಕ್ಲೀನಿಂಗ್ ಹೆಸರಲ್ಲಿ ಕಲ್ಲಿದ್ದಲು ಲೂಟಿ

ಕ್ಲೀನಿಂಗ್ ಹೆಸರಲ್ಲಿ ಕಲ್ಲಿದ್ದಲು ಲೂಟಿ

ರಾಯಚೂರು : ಕಪ್ಪು ಬಂಗಾರ ಅಂತಲೇ ಕರೆಸಿಕೊಳ್ಳುವ ಕಲ್ಲಿದ್ದಲು ಲೂಟಿ ರಾಯಚೂರಿನಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದು, ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಿಗೆ ಸಂಪೂರ್ಣವಾಗಿ ಸೇರಬೇಕಾದ ಕಲ್ಲಿದ್ದಲು ಗುತ್ತಿಗೆದಾರರ ಪಾಲಾಗುತ್ತಿದೆ ಎನ್ನಲಾಗಿದೆ.

ಒಂದು ರೇಕ್‍ನ 58 ವ್ಯಾಗಾನ್‍ಗಳಿಂದ ಕನಿಷ್ಠ 35 ರಿಂದ 40 ಟನ್ ಕಲ್ಲಿದ್ದಲು ಕದಿಯಲಾಗುತ್ತಿದೆ. ದಿನಕ್ಕೆ ಮೂರ್ನಾಲ್ಕು ರೇಕ್‍ಗಳಿಂದ ಸುಮಾರು 150 ಟನ್ ಕಲ್ಲಿದ್ದಲು ಹೊರಬರುತ್ತಿದ್ದು ಗುತ್ತಿಗೆದಾರರ ಪಾಲಾಗುತ್ತಿದೆ. ಕಲ್ಲಿದ್ದಲು ಅವಶೇಷಗಳ ಸ್ವಚ್ಛತೆಯ ಟೆಂಡರ್ ಪಡೆದು ಗುಣಮಟ್ಟದ ಕಲ್ಲಿದ್ದಲನ್ನೇ ಕಾರ್ಖಾನೆಗಳಿಗೆ, ಕೈಗಾರಿಕೆಗಳಿಗೆ ಸರಬರಾಜು ಮಾಡಲಾಗುತ್ತಿದೆ ಎನ್ನಲಾಗುತ್ತಿದೆ.

ಇನ್ನೂ ರೈಲ್ವೇ ನಿಲ್ದಾಣದ ಪಕ್ಕದಲ್ಲೇ ಟನ್‍ಗಟ್ಟಲೇ ಕಲ್ಲಿದ್ದಲು ಸಂಗ್ರಹಿಸಿ ಲಾರಿ, ಟ್ರ್ಯಾಕ್ಟರ್‌ಗಳ ಮೂಲಕ ಸಾಗಣೆ ಮಾಡುತ್ತಿದ್ದು, 2023ರಲ್ಲಿ ವರದಿಯಿಂದ ಎಚ್ಚೆತ್ತಿದ್ದ, ರೈಲ್ವೇ ಹಾಗೂ ಕೆಪಿಸಿಎಲ್ ಅಧಿಕಾರಿಗಳು ಜಾಣ ಕುರುಡುತನ ಮೆರೆಯುತ್ತಿದ್ದು, ದಂಧೆ ಮತ್ತೆ ಆರಂಭವಾಗಿದೆ ಎಂದು ತಿಳಿದು ಬಂದಿದೆ.

ಅಲ್ಲದೇ ಕಲ್ಲಿದ್ದಲು ರೇಕ್‍ನ ವ್ಯಾಗಾನ್‍ಗಳ ಕ್ಲೀನಿಂಗ್ ಹೆಸರಿನಲ್ಲಿ ಕಲ್ಲಿದ್ದಲು ಕಳ್ಳತನ ನಡೆಯುತ್ತಿದ್ದು, ಪ್ರತಿ ನಿತ್ಯ ಸುಮಾರು 150 ಟನ್ ಕಲ್ಲಿದ್ದಲು ಹೊರ ತೆಗೆದು ಸಣ್ಣ ಕೈಗಾರಿಕೆ, ಇಟ್ಟಿಗೆ ಭಟ್ಟಿಗಳಿಗೆ ಸಾಗಿಸಲಾಗುತ್ತಿದೆ ಎಂದು ವರದಿಯಾಗಿದೆ.

RELATED ARTICLES
- Advertisment -
Google search engine

Most Popular