Friday, April 18, 2025
Google search engine

Homeಅಪರಾಧಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಸಲು ಹಣ ವಸೂಲಿ: ಕಂಪ್ಯೂಟರ್ ಸೆಂಟರ್ ಸೀಜ್ ಮಾಡಿದ ತಹಶೀಲ್ದಾರ್

ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಸಲು ಹಣ ವಸೂಲಿ: ಕಂಪ್ಯೂಟರ್ ಸೆಂಟರ್ ಸೀಜ್ ಮಾಡಿದ ತಹಶೀಲ್ದಾರ್

ರಾಯಚೂರು: ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಒಂದಾದ ಗೃಹ ಲಕ್ಷ್ಮಿ ಯೋಜನೆ ಮಹಿಳೆಯರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ 2000 ಸಾವಿರ ರೂಪಾಯಿಯ ಮಹಿಳೆಯ ರಿಗೆ ಖಾತೆಗೆ ಜಮಾ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಯೋಜನೆ ಅನುಷ್ಠಾನಗೊಳಿಸಿದೆ.

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಸಾದಾವೂರು ಗ್ರಾಮ ಒನ್‌ ಕೇಂದ್ರದ ಪಾಸ್‌ ವರ್ಡ್ ಖಾಸಗಿ ಅಂಗಡಿಯಾದ ಲಕ್ಷ್ಮೀ ಕಂಪ್ಯೂಟರ್ ಅಂಗಡಿಯಲ್ಲಿ ಒಂದು ಅರ್ಜಿಗೆ 200 ರೂ. ವಸೂಲಿ ಮಾಡಿದ ಆರೋಪ ಕೇಳಿಬಂದಿತ್ತು.

ಫಲಾನುಭವಿಗಳಿಂದ ಹಣ ವಸೂಲಿ ಮಾಡಿದ ಆರೋಪದ ಹಿನ್ನಲೆಯಲ್ಲಿ ತಹಸೀಲ್ದಾರ್ ಎಲ್.ಡಿ. ಚಂದ್ರ ಕಾಂತ ಹಠಾತ್ ದಾಳಿ ಮಾಡಿ, ಲಕ್ಷ್ಮಿ ಕಂಪ್ಯೂಟರ್ ಸೆಂಟರ್ ನ್ನು ಸೀಜ್ ಮಾಡಿದದ್ದಾರೆ.

ಸದಾಪೂರು ಗ್ರಾಮದಲ್ಲಿ ಗ್ರಾಮ ಒನ್‌ ಕೇಂದ್ರ ಇದ್ದರು ಅದನ್ನು ಬಂದ್ ಮಾಡಿ ಮಾನ್ವಿ ಲಕ್ಷ್ಮಿ ಕಂಪ್ಯೂಟರ್ ಅಂಗಡಿಯಲ್ಲಿ ಸರ್ಕಾರ ನೀಡಿದ ಪಾಸ್ ವಡ್೯ ದುರ್ಬಳಕೆ ಮಾಡಿಕೊಂಡಿದ್ದು, ಅಂಗಡಿ ಮಾಲೀಕರ ಮೇಲೆ ಪ್ರಕರಣ ದಾಖಲಿಸುವುದಾಗಿ ತಹಸೀಲ್ದಾರ್ ಚಂದ್ರಕಾಂತ ತಿಳಿಸಿದ್ದಾರೆ.

ಸೂರ್ಯ ಕಂಪ್ಯೂಟರ್, ಎಕ್ಸ್‌ಲ್ ಕಂಪ್ಯೂಟರ್‌ ನಲ್ಲಿ ಕುರ್ಡಿ ಗ್ರಾಮ್ ಒನ್‌ ಪಾಸ್‌ ವರ್ಡ ಬಳಕೆ ಸೇರಿ ಒಟ್ಟು ಮೂರು ಖಾಸಗಿ ಅಂಗಡಿ ಮಾಲೀಕರು ಹಾಗೂ ಸರ್ಕಾರದ ಗ್ರಾಮ್ ಒನ್ ಬಾಪೂಜಿ ಕರ್ನಾಟಕ ಒನ್‌ ಕೇಂದ್ರದಲ್ಲಿ ಮಹಿಳೆಯರಿಗೆ ಉಚಿತ ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ಕಲ್ಪಿಸಿದೆ.  ಆದರೆ ಒಂದು ಅರ್ಜಿಗೆ 200 ರಿಂದ 250 ವರೆಗೆ ಹಣ ವಸೂಲಿ ಮಾಡುವ ದಂಧೆ ನಡೆದಿದ್ದು, ಸಂಬಂಧಿಸಿದವರ ವಿರುದ್ಧ ಕ್ರಮಕೈಗೊಳ್ಳುವುದಾಗಿ ತಹಸೀಲ್ದಾರ ಚಂದ್ರಕಾಂತ್ ಅವರು ತಿಳಿಸಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರದ ಗ್ರಾಮ ಒನ್ ಕೇಂದ್ರ ಬಾಪೂಜಿ ಕೇಂದ್ರ ಇವೆ. ಅಲ್ಲಿ ಹೋಗಿ ಮಹಿಳೆಯರು ಯಾವುದೇ ಅರ್ಜಿಗೆ ಹಣ ನೀಡದೆ ತಾವು ಅರ್ಜಿ ಸಲ್ಲಿಸಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಉಪ ತಹಸೀಲ್ದಾರ ಅಬ್ದುಲ್ ವಾಹಿದ್, ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಮಹ್ಮದ್‌ ಯೂನೂಸ್ ಇದ್ದರು. ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕಾರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular