ಕೆ.ಆರ್.ನಗರ: ಬೇಸಿಗೆ ಸಮಯಕ್ಕೆ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಬಾರದು ಈ ಬಗ್ಗೆ ಸಂಬoಧಪಟ್ಟ ಅಧಿಕಾರಿಗಳು ಈಗಿನಿಂದಲೇ ಸಿದ್ದತೆ ಮಾಡಿಕೊಳ್ಳಬೇಕು ಎಂದು ಮೈಸೂರು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಹೇಳಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಡಿ.ರವಿಶಂಕರ್ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು ಗ್ರಾಮ ಪಂಚಾಯಿತಿಯ ಅನುದಾನವನ್ನು ಬಳಕೆ ಮಾಡಿಕೊಂಡು ಕುಡಿಯುವ ನೀರಿಗೆ ತೊಂದರೆಯಾಗದoತೆ ನೋಡಿಕೊಳ್ಳಬೇಕು ಎಂದರು.
ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಎಇಇ ಅವರು ಪಂಚಾಯಿತಿಗಳಿಗೆ ತೆರಳಿ ಅನುದಾನವನ್ನು ಕಾಯ್ದಿರಿಸಿಕೊಳ್ಳಬೇಕು ಜತೆಗೆ ಖಾಸಗಿಯವರಿಂದ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆಯಲು, ಅವಶ್ಯಕತೆ ಇದ್ದಲ್ಲಿ ಟ್ಯಾಂಕರ್ ಖರೀದಿಗೂ ಮುಂದಾಗಬೇಕು ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ಸಮಸ್ಯೆ ಆಗಬಾರದು ಎಂದು ಸೂಚಿಸಿದರು.
ರೈತರು ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ ಪೊಲೀಸ್ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಸಮಾನತೆಯಿಂದ ಕೆಲಸ ಮಾಡಿ ನೊಂದ ಕುಟುಂಬದವರಿಗೆ ಪರಿಹಾರ ಕೊಡಿಸಲು ಮುಂದಾಗಬೇಕು ನಿರ್ಲಕ್ಷö್ಯ ಮಾಡಿ ಕುಟುಂಬದವರನ್ನು ಅಲೆದಾಡಿಸಬಾರದು ಇದರ ಜತೆಗೆ ಆರೋಗ್ಯ ಇಲಾಖೆಯವರು ಶವ ಪರೀಕ್ಷೆ ಸೇರಿದಂತೆ ದಾಖಲಾತಿ ನೀಡಲು ವಿಳಂಬ ಮಾಡಬಾರದು ಎಂದು ತಾಕೀತು ಮಾಡಿದರು.
ಗ್ರಾಮೀಣ ಭಾಗದಲ್ಲಿ ಮನೆಗಳು ಮತ್ತು ಪೆಟ್ಟಿ ಅಂಗಡಿಗಳಲ್ಲಿ ಮಧ್ಯ ಮಾರಾಟ ಮಾಡುವವರನ್ನು ಅಬಕಾರಿ ಮತ್ತು ಪೊಲೀಸ್ ಇಲಾಖೆಯವರು ಪರಸ್ಪರ ಹೊಂದಾಣಿಕೆಯಿoದ ಕೆಲಸ ಮಾಡಿ ಅವರುಗಳ ವಿರುದ್ದ ಗೂಡಾ ಕಾಯ್ದೆ ಸೇರಿದಂತೆ ಇತರ ಕಾನೂನು ಕ್ರಮ ಜರುಗಿಸಬೇಕು ಇದರಿಂದ ಭಯ ಉಂಟಾಗಲಿದೆ ಆಗ ಸಮಾಜದಲ್ಲಿ ಶಾಂತಿ ನೆಲಸಲು ಸಾಧ್ಯ ಎಂದರು.
ಆರೋಗ್ಯ ಇಲಾಖೆಯವರು ಔಷಧಿ ಪಡೆಯಲು, ರಕ್ತ ಪರೀಕ್ಷೆಗಾಗಿ ಖಾಸಗಿಯವರಿಗೆ ಚೀಟಿ ಬರೆಯಬಾರದು ಸಾಧ್ಯವಾದಷ್ಟು ಸರ್ಕಾರಿ ಆಸ್ಪತ್ರೆಯಲ್ಲೇ ಗುಣಪಡಿಸಲು ಮುಂದಾಗಬೇಕು ಎಂದು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು ಡಯಾಲಿಸಿಸ್ ಮಾಡದೆ ರೋಗಿಗಳನ್ನು ಹೊರ ಕಳುಹಿಸಬಾರದು ಎಂದು ಸಲಹೆ ನೀಡಿದಲ್ಲದೆ ಆಸ್ಪತ್ರೆಯಲ್ಲಿರುವ ಐಸಿಯು ಅನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಬೇಕು ಈ ನಿಟ್ಟಿನಲ್ಲಿ ಬಿಇಒ ಅವರು ಕಾರ್ಯಪ್ರವೃತ್ತರಾಗಬೇಕು ಎಂದು ಸೂಚಿಸಿದಲ್ಲದೆ ಅಂಕ ಗಳಿಕೆಯ ಜತೆಗೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು ವಿದ್ಯಾರ್ಥಿ ನಿಲಯಗಳು ಮತ್ತು ವಸತಿ ಶಾಲೆಯ ಮಕ್ಕಳು ಅತಿಹೆಚ್ಚು ಅಂಕ ಪಡೆಯಬೇಕಾಗಿದೆ ಆದ್ದರಿಂದ ಬಿಇಒ ಅವರು ನಿಲಯಗಳಿಗೆ ಆಗ್ಗಿಂದ್ದಾಗೆ ಭೇಟಿ ನೀಡಬೇಕು ಎಂದು ತಿಳಿಸಿದರು.
ಸಿಡಿಪಿಒ, ಆಹಾರ ಇಲಾಖೆ, ಕೃಷಿ, ತೋಟಗಾರಿಕೆ ಇಲಾಖೆಗಳು ಸರ್ಕಾರದಿಂದ ಬರುವ ಸವಲತ್ತುಗಳನ್ನು ಸಕಾಲದಲ್ಲಿ ಅರ್ಹ ಫನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳಬೇಕು, ಸರ್ವೆ ಇಲಾಖೆಯವರು ಶಾಲಾ ಕಾಲೇಜು, ಸ್ಮಶಾನ ಮತ್ತು ಕೆರೆ ಕಟ್ಟೆಗಳ ಜಾಗ ಒತ್ತುವರಿಯಾಗಿದ್ದಲ್ಲಿ ತೆರೆವು ಮಾಡಿ ಹದ್ದುಬದ್ತ್ ಮಾಡಿಸಿಕೊಡಬೇಕು ಎಂದು ಸೂಚಿಸಿದರು.
ಶಾಸಕ ಡಿ.ರವಿಶಂಕರ್ ಮಾತನಾಡಿ ಅಧಿಕಾರಿಗಳು ಸರ್ಕಾರದ ವೇಗಕ್ಕೆ ತಕ್ಕಂತೆ ಕೆಲಸ ಮಾಡಬೇಕು ಸರ್ಕಾರ ೧೦ ರಿಂದ ೫.೩೦ರವರೆಗೆ ಸಮಯ ನಿಗಧಿ ಮಾಡಿದೆ ಆದರೆ ಕೆಲವು ಅಧಿಕಾರಿಗಳು ಮನಬಂದoತೆ ಕಛೇರಿಗೆ ಆಗಮಿಸುತ್ತಿದ್ದಾರೆ ಇದನ್ನು ಸಹಿಸಲು ಸಾಧ್ಯವಿಲ್ಲ ಎಂದರಲ್ಲದೆ ಕಛೇರಿಯಲ್ಲಿ ಕುಳಿತು ಕೆಲಸ ಮಾಡುವುದರ ಜತೆಗೆ ಜನರ ಬಳಿಗೆ ಹೋಗಿ ಸಮಸ್ಯೆ ಆಲಿಸಬೇಕು ಎಂದು ಹೇಳಿದರು.
ಸರ್ಕಾರದ ವತಿಯಿಂದ ನಡೆಯುವಂತಹಾ ಜಯಂತಿಗಳು, ನಾಡಹಬ್ಬಗಳ ಆಚರಣೆ ಮತ್ತು ಪೂರ್ವಭಾವಿ ಸಭೆಗೆ ಗೈರು ಹಾಜರಾಗುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು ಈ ಬಗ್ಗೆ ಸದನದಲ್ಲೇ ಮಾತನಾಡಬೇಕು ಎಂದುಕೊoಡಿದೆ ಇದರಿಂದ ನಮ್ಮ ಸರ್ಕಾರಕ್ಕೆ ಮುಜುಗರವಾಗಲಿದೆ ಎಂದು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಹೇಳುತ್ತಿದ್ದೇನೆ ಮುಂದಾದರು ಅಧಿಕಾರಿಗಳು ತಿದ್ದಿ ನಡೆಯಬೇಕು ಎಂದು ಸಲಹೆ ನೀಡಿದರು.
ತಹಶೀಲ್ದಾರ್ ಸಿ.ಎಸ್.ಪೂರ್ಣಿಮ, ಇಒ ಜಿ.ಕೆ.ಹರೀಶ್ ,ಸಮಾಜ ಕಲ್ಯಾಣಾಧಿಕಾರಿ ಅಶೋಕ್, ತಾಲೂಕ್ ಆಡಳಿತ ಆರೋಗ್ಯ ಅಧಿಕಾರಿ ಡಾ. ನಟರಾಜ್, ಆಸ್ಪತ್ರೆಯ ಆರೋಗ್ಯ ಅಧಿಕಾರಿ ಡಾ.ನಾಗೇಂದ್ರ ,ಎ ಇ ಇ ಗಳಾದ ಗುರುಪ್ರಸಾದ್, ವಿನುತ್, ಅರ್ಕೇಶ್, ಮಧುಸೂದನ್, ಕೆಎಸ್ಆರ್ಟಿಸಿ ವ್ಯವಸ್ಥಾಪಕ ಮಹೇಶ್, ಬಿಇಓ ಕೃಷ್ಣಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.