Friday, April 4, 2025
Google search engine

Homeರಾಜ್ಯಸುದ್ದಿಜಾಲಕಾಲೇಜು ವಿದ್ಯಾರ್ಥಿಗಳು ಮನಸ್ಸನ್ನು ಚಂಚಲಗೊಳಿಸದೆ ಓದಿನ ಕಡೆಗೆ ಗಮನಹರಿಸಿ ಭವಿಷ್ಯ ಉಜ್ವಲಗೊಳಿಸಿಕೊಳ್ಳಿ-ಲಕ್ಷ್ಮಿಕಾಂತ್

ಕಾಲೇಜು ವಿದ್ಯಾರ್ಥಿಗಳು ಮನಸ್ಸನ್ನು ಚಂಚಲಗೊಳಿಸದೆ ಓದಿನ ಕಡೆಗೆ ಗಮನಹರಿಸಿ ಭವಿಷ್ಯ ಉಜ್ವಲಗೊಳಿಸಿಕೊಳ್ಳಿ-ಲಕ್ಷ್ಮಿಕಾಂತ್

ವರದಿ : ಚಪ್ಪರದಹಳ್ಳಿ ವಿನಯ್ ಕುಮಾರ್

ಬೆಟ್ಟದಪುರ : ಕಾಲೇಜು ಜೀವನ ವಿದ್ಯಾರ್ಥಿಗಳ ಪ್ರಮುಖ ಘಟ್ಟವಾಗಿದ್ದು, ನಿಮ್ಮ ಮನಸ್ಸನ್ನು ಚಂಚಲಗೊಳಿಸದೆ ಓದಿನ ಕಡೆಗೆ ಗಮನಹರಿಸಿ ನಿಮ್ಮ ಭವಿಷ್ಯವನ್ನು ಉಜ್ವಲಗೊಳಿಸುಕೊಳ್ಳುವಂತೆ ರಾವಂದೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಲಕ್ಷ್ಮಿಕಾಂತ್ ವಿದ್ಯಾರ್ಥಿಗಳಿಗೆ ತಿಳಿಸಿದರು.

ಪಿರಿಯಾಪಟ್ಟಣ ತಾಲೋಕಿನ ಬೆಟ್ಟದಪುರದ ಎಸ್ಎಂಎಸ್ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಎನ್ ಎಸ್ ಎಸ್ ಸಮಾರೋಪ ಸಮಾರಂಭ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು ಕಾಲೇಜು ದಿನಗಳಲ್ಲಿ ವಿದ್ಯಾರ್ಥಿಗಳು ಹದಿಹರೆಯದವರಾಗಿದ್ದು, ತಮ್ಮ ಮನಸ್ಸನ್ನು ಸೀಮಿತದಲ್ಲಿಟ್ಟುಕೊಳ್ಳಬೇಕು. ಓದಿನ ಕಡೆಗೆ ಗಮನಹರಿಸದೆ ಮನಸ್ಸನ್ನು ಚಂಚಲಗೊಳಿಸಿಕೊಂಡರೆ ನಿಮ್ಮ ಭವಿಷ್ಯ ಹಾಳಾಗುವುದರಲ್ಲಿ ಸಂಶಯವಿಲ್ಲ. ಆದ್ದರಿಂದ ಕಾಲೇಜು ಜೀವನದಲ್ಲಿ ಆಸಕ್ತಿಯಿಂದ ಕಲಿತರೆ ನಿಮ್ಮ ಮುಂದಿನ ಜೀವನ ಉಜ್ವಲವಾಗುವುದರಲ್ಲಿ ಯಾವುದೇ ಅಡೆತಡೆಗಳು ಇರುವುದಿಲ್ಲ ಎಂದರು.

ಸಂಸ್ಥೆಯ ಆಡಳಿತಾಧಿಕಾರಿ ಬಿ ವಿ ಮಂಜುನಾಥ್ ಮಾತನಾಡಿ ನಮ್ಮ ಸಂಸ್ಥೆಯು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ಭಾಗವಹಿಸುವುದಕ್ಕೆ ಅವಕಾಶ ಮಾಡಿಕೊಡುತ್ತದೆ. ವಿದ್ಯಾರ್ಥಿಗಳು ಮುಂದಿನ ಜೀವನದಲ್ಲಿ ಶಿಸ್ತು ಅಳವಡಿಸಿಕೊಂಡು ಭವಿಷ್ಯವನ್ನು ಕಟ್ಟಿಕೊಳ್ಳಿ ಎಂದರು.

ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಲಿಖಿತ್, ಯಶಸ್ವಿನಿ ಡಿ, ಹರ್ಷ, ಲಕ್ಷ್ಮಿ, ಸೇರಿದಂತೆ ವಿದ್ಯಾರ್ಥಿಗಳು ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ ಜೊತೆಗಿನ ಕಾಲೇಜು ದಿನದ ಅನುಭವಗಳನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಎವಿ ಛಾಯಾ, ಪ್ರಾಂಶುಪಾಲ ರಾಜು, ಮುಖ್ಯ ಶಿಕ್ಷಕರಾದ ಎಸ್, ಆರ್,ವೆಂಕಟೇಶ್, ಶಿಬಿರಧಿಕಾರಿ ಕುಬೇರ್, ಸಹ ಶಿಬಿರ ಅಧಿಕಾರಿ ಸತೀಶ್, ಉಪನ್ಯಾಸಕರಾದ ನವೀನ್ ಕುಮಾರ್, ಶಿವಕುಮಾರ್, ವಸಂತ್, ಸುನಿಲ್, ಯಶವಂತ್, ಬಸವರಾಜು, ಹರ್ಷಿತ, ಪ್ರತಾಪ್, ರಾಮೇಗೌಡ, ರಶ್ಮಿ,ಮಂಜುನಾಥ್, ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular