ಚಾಮರಾಜನಗರ: ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪ್ರಥಮ ಆಡಳಿತಾಧಿಕಾರಿಣಿ ಮಾತೇಶ್ವರೀ ಜಗದಂಬಾ ಸರಸ್ವತೀಜಿಯವರ ೫೯ ನೇ ಸ್ಮೃತಿ ದಿನಾಚರಣೆಯನ್ನು ನಗರದ ಪ್ರಕಾಶ ಭವನದಲ್ಲಿ ಏರ್ಪಡಿಸಲಾಗಿತ್ತು.
ಪುಷ್ಪ ನಮನ ಸಲ್ಲಿಸಿ ಸಂಸ್ಥೆ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜಿ ಮಾತನಾಡಿ,೧೯೩೬ ರಲ್ಲಿ ಸಿಂದ್ ಹೈದರಾಬಾದ್ ಕರಾಚಿಯಲ್ಲಿ ದಾದಾ ಲೇಖರಾಜ್ ಅವರ ನೇತೃತ್ವದಲ್ಲಿ ಸ್ಥಾಪನೆಯಾದ ಮಹಿಳೆಯರ ಸಣ್ಣ ಆಧ್ಯಾತ್ಮಿಕ ಸಂಘಟನೆಯು ಇಂದು ಜಗತ್ತಿನಾದ್ಯಂತ ಹೆಮ್ಮರವಾಗಿ ಬೆಳೆಯಲು ಮಾತೇಶ್ವರಿ ಜಗದಾಂಬ ಸರಸ್ವತೀಜೀಯವರ ತ್ಯಾಗ ತಪಸ್ಸು ಸೇವೆಯೇ ಮೂಲ ಕಾರಣ ಎಂದರು. ಮಾತೇಶ್ವರಿಯವರು ಪ್ರತಿ ಗಳಿಗೆಯನ್ನು ಅಂತಿಮಗಳಿಗೆ ಎಂದು ಸಾಧನೆ ಮಾಡಿದರು. ಅವರು ಯಾರಲ್ಲಿಯೂ ಅವಗಣವನ್ನು ನೋಡದೆ ಪ್ರತಿಯೊಬ್ಬರಲ್ಲಿ ಗುಣವನ್ನು ನೋಡುವ ಗುಣಗ್ರಾಹಿಯಾಗಿದ್ದರು. ಅವರು ಮೊದಲು ಬೆಂಗಳೂರಿನ ಶಿವಾಜಿನಗರದಲ್ಲಿ ೧೯೫೮ ರಲ್ಲಿ ಸಣ್ಣ ಕೊಠಡಿಯಲ್ಲಿ ಸ್ಥಾಪನೆ ಮಾಡಿದ ಈಶ್ವರೀಯ ವಿಶ್ವವಿದ್ಯಾಲಯವು ಇಂದು ದಕ್ಷಿಣ ಭಾರತಾದ್ಯಂತ ಹಳ್ಳಿಯಿಂದ ಹಿಡಿದು ನಗರದ ಪ್ರದೇಶದವರೆಗೆ ಆಧ್ಯಾತ್ಮಿಕ ಸೇವೆ ಸಲ್ಲಿಸುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಓಂಶಾಂತಿ ನ್ಯೂಸ್ ಸರ್ವಿಸ್ ನ ಬಿಕೆ ಆರಾಧ್ಯ,ಸರಳಾ,ನಾರಾಯಣ, ಭಾಗ್ಯ,ಸತೀಶ,ಶ್ರೀನಿವಾಸ, ಗೋವಿಂದರಾಜು,ಗೀತಾ, ಪ್ರಮಿಳಾ,ಸುಕನ್ಯಾ ಮುಂತಾದವರು ಹಾಜರಿದ್ದರು