Tuesday, April 8, 2025
Google search engine

Homeರಾಜ್ಯಸುದ್ದಿಜಾಲಸಾರ್ವಜನಿಕರ ಅಹವಾಲುಗಳಿಗೆ ಪರಿಹಾರ ಕಾರ್ಯಆರಂಭ: ಡಿಸಿಎಂ ಡಿ.ಕೆ. ಶಿವಕುಮಾರ್

ಸಾರ್ವಜನಿಕರ ಅಹವಾಲುಗಳಿಗೆ ಪರಿಹಾರ ಕಾರ್ಯಆರಂಭ: ಡಿಸಿಎಂ ಡಿ.ಕೆ. ಶಿವಕುಮಾರ್

ರಾಮನಗರ: ಜನಸ್ಪಂದನಕಾರ್ಯಕ್ರಮದಲ್ಲಿ ಸ್ವೀಕೃತವಾದ ಸಾರ್ವಜನಿಕರ ಅಹವಾಲುಗಳಿಗೆ ಪರಿಹಾರ ನೀಡುವ ಕೆಲಸ ಇನ್ನೂಆರಂಭವಾಗಲಿದೆ, ಇದೂವರೆಗೆಚನ್ನಪಟ್ಟಣತಾಲ್ಲೂಕಿನಲ್ಲಿ ೧೦ ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆಎಂದುರಾಜ್ಯದ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಅವರುಜು.೩ ಬುಧವಾರಚನ್ನಪಟ್ಟಣಟೌನಿನಲ್ಲಿಕೋಟೆ ಮಾರಮ್ಮದೇವಸ್ಥಾನದ ಹಳೇ ಕಚೇರಿಆವರಣ ಹಾಗೂ ಫರನಾ ಶಾಲೆಯಆವರಣದಲ್ಲಿಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದಜನಸ್ಪಂದನಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಚನ್ನಪಟ್ಟಣತಾಲ್ಲೂಕಿನಲ್ಲಿಇದೂವರೆಗೆ ಸಲ್ಲಿಕೆಯಾದ೧೦ ಸಾವಿರಕ್ಕೂ ಹೆಚ್ಚು ಅರ್ಜಿಗಳ ಅಹವಾಲುಗಳಿಗೆ ಸಂಬಂಧಪಟ್ಟಂತೆಕೂಡಲೇ ಪರಿಹಾರ ಒದಗಿಸುವಲ್ಲಿ ಕಾರ್ಯೋನುಖರಾಗಲಿದ್ದು, ಅನ್ಯಾಯವನ್ನು ಸರಿಪಡಿಸಿ. ನ್ಯಾಯದೊರಕಿಸುವುದು ಜನಸ್ಪಂದನ ಕಾರ್ಯಕ್ರಮದ ಉದ್ದೇಶವಾಗಿದೆ.ಚನ್ನಪಟ್ಟಣ ನಗರದಲ್ಲಿರಸ್ತೆ, ಕಾಂಕ್ರಿಟ್‌ರಸ್ತೆ, ಚರಂಡಿ ದುರಸ್ಥಿ, ಕುಡಿಯುವ ನೀರು ಸೇರಿದಂತೆ ಹಲವು ಸಮಸ್ಯೆಗಳಿವೆ. ಮುಖ್ಯವಾಗಿ ನಿವೇಶನ ಹಾಗೂ ಮನೆ ನಿರ್ಮಾಣಕ್ಕೆ ಸಂಬಂಧಿಸಿಂತೆ ೪ ಸಾವಿರಕ್ಕೂ ಹೆಚ್ಚಿನ ಅರ್ಜಿಗಳನ್ನು ಸಾರ್ವಜನಿಕರು ಸಲ್ಲಿಸಿದ್ದಾರೆ ಎಂದವರು ಹೇಳಿದರು.

ಚನ್ನಪಟ್ಟಣಕ್ಕೆ ಹೊಸ ಚೈತನ್ಯತರಲುಯತ್ನಿಸಲಾಗುತ್ತಿದೆ, ಅದುಡಿ.ಕೆ.ಶಿವಕುಮಾರ್ ಸಾರಥ್ಯದಲ್ಲಿಬೆಂಗಳೂರು ಆಗಲಿದೆ.ಅದಕ್ಕಾಗಿ ಈ ರೀತಿಯ ಕೆಲಸಗಳನ್ನು ಮಾಡಲಾಗುತ್ತಿದೆ, ಅಧಿಕಾರಿಗಳನ್ನು ಕಳುಹಿಸಿ ಸಾರ್ವಜನಿಕರ ಸಮಸ್ಯೆಗಳನ್ನು ಕೇಳಿ ಬಗೆಹರಿಸಲಾಗುತ್ತಿದೆ, ಚನ್ನಪಟ್ಟಣವನ್ನುಅಭಿವೃದ್ಧಿ ಪಟ್ಟಣ ಮಾಡಲು ಸ್ಥಳೀಯ ನಗರಸಭೆ ಸದಸ್ಯರುಗಳ ನೆರವು ಹಾಗೂ ಸಹಕಾರಬೇಕುಎಂದರು.

ಚನ್ನಪಟ್ಟಣದಲ್ಲಿ೨.೫ ಕೋಟಿ ರೂ.ಗಳಲ್ಲಿ ಹಿಂದೂರುಧ್ರಭೂಮಿಕಾಮಗಾರಿಯು ಈಗಾಗಲೇ ಮುಗಿಯುವ ಹಂತಕ್ಕೆ ಬಂದಿದೆ.ಶೆಟ್ಟಿಹಳ್ಳಿ ಕೆರೆಅಭಿವೃದ್ಧಿ, ರಾಮಮ್ಮನಕೆರೆಯ ಬಳಿ ರೈಲ್ವೇಅಂಡರ್ ಪಾಸ್‌ಕಾಮಗಾರಿ, ಟಿಪ್ಪು ನಗರಅಂಡರ್ ಪಾಸ್‌ಗಾಗಿ ೪.೫ ಕೋಟಿ ರೂ.ಗಳಲ್ಲಿ ಮಾಡಲಾಗುವುದು.ಚನ್ನಪಟ್ಟಣಕ್ಕೆ೯೯ ಕೋಟಿ ರೂ.ಗಳ ಯುಜಿಡಿಕಾಮಗಾರಿಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮನೆ ಹಾಗೂ ನಿವೇಶನ ಹಂಚಿಕೆ ಮಾಡಲುಸರ್ಕಾರಿಜಾಗ ಸಿಗದಿದ್ದರೆಖಾಸಗಿಯಿಂದ ಪಡೆದುಮನೆ ಹಾಗೂ ನಿವೇಶನ ಹಂಚಲು ಯೋಜನೆರೂಪಿಸಲಾಗುವುದು.ಪಿಂಚಣಿ, ವಿಧವಾ ವೇತನ, ಹೊಸ ಪಡಿತರಚೀಟಿ ಸಮಸ್ಯೆಗಳನ್ನು ಬಗೆಹರಿಸಲಾಗುವುದುಎಂದರು.
ಪ್ರತಿ ಮನೆಗೂ ಅಧಿಕಾರಿಗಳು ಭೇಟಿ ನೀಡಿದ್ದಾರೆ.ಈ ಕಾರ್ಯಕ್ರಮದಲ್ಲಿಸಾರ್ವಜನಿಕರು ಸಮಸ್ಯೆಗಳ ಅರ್ಜಿಗಳನ್ನು ತಂದಿದ್ದೀರಿ, ಸಂಬಂಧಪಟ್ಟ ಇಲಾಖೆಗಳಿಗೆ ಅರ್ಜಿಯನ್ನು ನೀಡಿ ಸ್ವೀಕೃತಿಯನ್ನು ಪಡೆದುಕೊಳ್ಳಬೇಕು.ಯಾರ ಬಗ್ಗೆಯೂಟೀಕೆ ಮಾಡುವುದಿಲ್ಲ. ಋಣತೀರಿಸಲು ಬಂದಿದ್ದೇನೆ. ನಮಗೆ ಅಧಿಕಾರ ನೀಡಿದ್ದೀರಿ, ಮನೆ ಬಾಗಿಲಿಗೆ ಲಕ್ಷ್ಮೀ ಬಂದ ಹಾಗೆ ನಿಮ್ಮ ಮನೆ ಬಾಗಿಲಿಗೆ ಸರ್ಕಾರ ಬಂದಿದೆಇದರ ಸದುಪಯೋಗಪಡೆದುಕೊಳ್ಳಿ ಎಂದು ತಿಳಿಸಿದರು.ಬೀಡಿಕಾರ್ಮಿಕರುಎದುರಿಸುತ್ತಿರುವ ಸಮಸ್ಯೆಗಳಿಗೆ ಚರ್ಚಿಸಿ ಈ ಸಮಸ್ಯೆಗಳನ್ನು ಬಗೆಹರಿಸಲಾಗುವುದುಎಂದರು.

ವಿಧಾನ ಪರಿಷತ್ ಸದಸ್ಯರಾದಪುಟ್ಟಣ್ಣ ಅವರು ಮಾತನಾಡಿ, ಜನಸ್ಪಂದನ ಜನಪ್ರಿಯ ಕಾರ್ಯಕ್ರಮವಾಗಿದೆ.ಸಾರ್ವಜನಿಕರಸಮಸ್ಯೆಕೇಳಿ, ಮನೆ ಬಾಗಿಲಿಗೆ ಬಂದಿರುವುದುಇದೇ ಮೊದಲು, ಸಮಸ್ಯೆಗಳು ಎಷ್ಟು ಬೃಹತ್ ಆಗಿವೆ ಎಂದುತಿಳಿಯಲಿದೆ ಎಂದರು. ಗ್ಯಾರಂಟಿ ಪರಿಣಾಮಕಾರಿ ಅನುಷ್ಠಾನಕ್ಕೆ ಜಿಲ್ಲಾಹಾಗೂ ತಾಲ್ಲೂಕು ಮಟ್ಟದಲ್ಲಿ ಅಧ್ಯಕ್ಷರುಗಳನ್ನು ನಿಯೋಜನೆ ಮಾಡಲಾಗಿದೆ.ಏನೇನು ಸಾಧ್ಯವೋ ಅವುಗಳನ್ನೆಲ್ಲಾ ಮಾಡಲಾಗುವುದು.ಚನ್ನಪಟ್ಟಣದಅಭಿವೃದ್ಧಿಗೆಮುಖ್ಯಂತ್ರಿUಳು ೧೦೦ ಕೋಟಿ ರೂ.ಗಳನ್ನು ಬಿಡುಗಡೆಮಾಡಲಿದ್ದಾರೆ.೨೫೦ ಕೋಟಿ ರೂ.ಗಳ ಅನುದಾನವನ್ನುವಿವಿಧ ಇಲಾಖೆಗಳಿಂದ ತರಲಾಗುವುದುಎಂದು ಹೇಳಿದರು. ಈ ಭಾಗದಲ್ಲಿ ಹತ್ತು ಹಲವಾರು ಕಾಮಗಾರಿಗಳನ್ನು ಮಾಡಲಾಗುವುದು.ಅರ್ಜಿ ಸ್ವೀಕರಿಸುವುದಷ್ಟೇ, ಸಮಸ್ಯೆಗಳನ್ನು ಕೂಡ ಬಗೆಹರಿಸಲಾಗುವುದು, ಕರ್ತವ್ಯ ಹಾಗೂ ನಿಷ್ಠೆ ಎರಡೂಇದೆ.ಸ್ವೀಕೃತವಾದ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದುಎಂದು ತಿಳಿಸಿದರು.


ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡುತ್ತಿರುವುದು ರಾಷ್ಟ್ರದಲ್ಲೇ ಅತ್ಯುತ್ತಮ ಕಾರ್ಯವಾಗಿದೆ. ಸರ್ಕಾರವನ್ನುಡಿ.ಕೆ.ಶಿವಕುಮಾರ್ ಅವರುಜನರ ಬಳಿಗೆ ತಂದಿದ್ದಾರೆಎಂದು ತಿಳಿಸಿದರು. ಮುಖಂಡ ಎಚ್.ಎಂ.ರೇವಣ್ಣಅವರು ಮಾತನಾಡಿ, ಈ ಕಾರ್ಯಕ್ರಮಜನರೊಂದಿಗೆ ಇರುವ ಕಾರ್ಯಕ್ರಮವಾಗಿದೆ.ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳು ೧೬೫ ಭರವಸೆಗಳನ್ನು ಈಡೇರಿಸಿದ್ದಾಋಎ, ಸರ್ಕಾರರಾಜ್ಯ ಸರ್ಕಾರದಒಂದೊಂದುಕಾರ್ಯಕ್ರಮವುಜನ ಮೆಚ್ಚಿದಕಾರ್ಯಕ್ರಮವಾಗಿದೆ ಎಂದರು. ಈ ಹಿಂದೆ ಇಂದಿರಾ ಕ್ಯಾಂಟೀನ್,ಸಿಇಟಿ ರಚನೆ, ಇದೀಗ ಪಂಚಗ್ಯಾರಂಟಿ ಯೋಜನೆಗಳ ಭರವಸೆ ನೀಡಿದ್ದರು. ಅದರಂತೆ ನುಡಿದಂತೆನಡೆಯಲಾಗಿದೆ. ಇಡೀದೇಶದಲ್ಲೇಇಂತಹ ಯೋಜನೆಗಳೆಲ್ಲೂ ಇಲ್ಲ. ಪಂಚ ಗ್ಯಾರಂಟಿ ಯೋಜನೆಗಳ ಸದುಪಯೋಗವನ್ನುಕಟ್ಟಕಡೆಯ ವ್ಯಕ್ತಿಗೂತಲುಪುವಂತೆ ಮಾಡಲಾಗುವುದುಎಂದರು.

ರಾಮನಗರವಿಧಾನಸಭಾಕ್ಷೇತ್ರದ ಶಾಸಕಇಕ್ಬಾಲ್ ಹುಸೇನ್‌ಅವರು ಮಾತನಾಡಿ,ಇಂದಿನ ಸನ್ನಿವೇಶದಲ್ಲಿ ಚನ್ನಪಟ್ಟಣದ ಅಭಿವೃದ್ದಿಗೆ ಸುವರ್ಣಾವಕಾಶವಿದೆ.ನಮ್ಮ ಮೇಲೆ ಸಾಕಷ್ಟು ಜವಾಬ್ದಾರಿಗಳಿವೆ. ತಾಲ್ಲೂಕಿನಸಾರ್ವಜನಿಕರಕಷ್ಟಸುಖ ಕೇಳುವವರು ಬೇಕು.ಚನ್ನಪಟ್ಟಣ ಅಭಿವೃದ್ಧಿಗೆ ಯತ್ನಿಸಲಾಗುವುದು ಎಂದರು. ವಿಧಾನ ಪರಿಷತ್ ಸದಸ್ಯರಾದಎಸ್. ರವಿ,ಮದ್ದೂರು ವಿಧಾನಸಭಾಕ್ಷೇತ್ರದ ಶಾಸಕರಾದಉದಯ್,ಮಾಜಿಶಾಸಕ ಅಶ್ವತ್ಥ್, ಬೆಂಗಳೂರು-ಮೈಸೂರುಇನ್‌ಫ್ರಾಸ್ಟ್ರಕ್ಚರ್‌ಕಾರಿಡಾರ್ ಪ್ರದೇಶಯೋಜನಾಭಿವೃಧ್ಧಿ ಪ್ರಾಧಿಕಾರದ ಅಧ್ಯಕ್ಷರ ಘುನಂದನ್‌ರಾಮಣ್ಣ, ಗ್ಯಾರಂಟಿ ಯೋಜನೆ ಯಜಿಲ್ಲಾ ಅಧ್ಯಕ್ಷರಾದ ರಾಜು, ಚನ್ನಪಟ್ಟಣ ಯೋಜನಾ ಅಭಿವೃದ್ಧಿಪ್ರಾಧಿಕಾರದ ಅಧ್ಯಕ್ಷ ಪ್ರಮೋದ್,ಜಿಲ್ಲಾಧಿಕಾರಿಡಾ. ಅವಿನಾಶ್ ಮೆನನ್‌ರಾಜೇಂದ್ರನ್, ಜಿಲ್ಲಾ ಪೊಲೀಸ್ ವರಿ?ಧಿಕಾರಿಕಾರ್ತಿಕ್‌ರೆಡ್ಡಿ, ನಗರಸಭೆಅಧ್ಯಕ್ಷರು, ಜನಪ್ರತಿನಿಧಿಗಳು, ಗಣ್ಯರು ಸೇರಿದಂತೆಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಅಪರಜಿಲ್ಲಾಧಿಕಾರಿ ಶಿವಾನಂದ ಮೂರ್ತಿ ಸ್ವಾಗತಿಸಿದರು.ಇದೇ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.

RELATED ARTICLES
- Advertisment -
Google search engine

Most Popular