ಮೈಸೂರು: ನಗರದ ವಿಜಯನಗರ ೨ನೇ ಹಂತದಲ್ಲಿರುವ ಸಮರ್ಥನಂ ಬುದ್ಧಿ ವಿಕಲಚೇತನರ ಶಾಲೆಯಲ್ಲಿ ಇಂದು ೨೦೨೪-೨೫ನೇ ಶೈಕ್ಷಣಿಕ ಸಾಲಿನಲ್ಲಿ ಶಾಲೆಗಳ ಆರಂಭದ ಹಿನ್ನೆಲೆಯಲ್ಲಿ ಶಾಲಾ ಪ್ರಾರಂಭತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಮಕ್ಕಳನ್ನು ಸ್ವಾಗತಿಸುವ ಸಲುವಾಗಿ ಬ್ಯಾನರ್, ಬಂಟಿಂಗ್ಸ್, ತೋರಣ ಹಾಗೂ ಆಕರ್ಷಕ ಸೂಚನೆ ಫಲಕಗಳನ್ನು ಹಾಕಲಾಗಿತ್ತು.
ಹಿರಿಯ ವಿಜ್ಞಾನಿ ಡಾ. ಜಿ.ಎ.ರವಿಶಂಕರ್ ರವರು ಮಕ್ಕಳಿಗೆ ಗುಲಾಬಿ ಹೂ ಕೊಡುವ ಮೂಲಕ ಬುದ್ಧಿ ವಿಕಲಚೇತನ ಮಕ್ಕಳನ್ನು ಸ್ವಾಗತಿಸಲಾಯಿತು. ನಂತರ ಮಾತನಾಡಿದ ವಿಶೇಷ ಮಕ್ಕಳು ದೇವರ ಮಕ್ಕಳು ಇದ್ದಹಾಗೆ ಎಲ್ಲರಂತೆ ಸಮಾನವಾಗಿ ಬದುಕುವ ಹಕ್ಕಿದೆ ಎಂದರು ಹಾಗೂ ಎಲ್ಲರಿಗೂ ಶುಭಾಶಯ ತಿಳಿಸಿದರು.
ಮೈಸೂರು ವಿಭಾಗದ ಮುಖ್ಯಸ್ಥ ಶಿವರಾಜು ಮಾತನಾಡಿ, ಸಮರ್ಥನಂ ಸಂಸ್ಥೆಯು ಸ್ಮಾರ್ಟ್ ಫೋನ್ ಮತ್ತು ಟ್ಯಾಬ್ಲೆಟ್‌ಗಳು ಸೇರಿದಂತೆ ತಂತ್ರಜ್ಞಾನ ಪೂರಕವಾದ ಸಾಮಗ್ರಿಗಳನ್ನು ಶಾಲೆಗಳಿಗೆ ವಿತರಣೆ ಮಾಡಿದ್ದು, ಮಕ್ಕಳ ಕಲಿಕೆಗೆ ತಂತ್ರಜ್ಞಾನ ಬಳಸುವ ಮೂಲಕ ಶಿಕ್ಷಣ ನೀಡುತ್ತಿದೆ ಎಂದರು.

ಇದೆ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯನಿ ಭ್ರಮರಂಭ, ವಿಶೇಷ ಶಿಕ್ಷಕರಾದ ಪದ್ಮ, ವಿದ್ಯಾವತಿ, ಬೃಂದ ಬಾಯಿ, ಸಿಬ್ಬಂದಿಯಾದ ಮಂಜುಳ, ಮಹದೇವ ಸೇರಿದಂತೆ ಮೊದಲಾದವರು ಉಪಸ್ಥಿತರದ್ದರು.