ಪಾಂಡವಪುರ: ಬಸ್ ನಿಲುಗಡೆಗಾಗಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಪೊಲೀಸ್ ಠಾಣೆಗೆ ಕರೆತಂದ ಸಾರಿಗೆ ಅಧಿಕಾರಿಗೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ತರಾಟೆಗೆ ತೆಗೆದುಕೊಂಡು ಘಟನೆ ಗುರುವಾರ ನಡೆಯಿತು. ಪಟ್ಟಣದ ಪೊಲೀಸ್ ಠಾಣೆಯ ಎದುರು ಸಾರಿಗೆ ಡಿಪೋ ಮ್ಯಾನೇಜರ್ ಅಪ್ಪಿರೆಡ್ಡಿ ಅವರಿಗೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ತರಾಟೆಗೆ ತೆಗೆದುಕೊಂಡು ಬಳಿಕ ಶಾಲಾ ವಿದ್ಯಾರ್ಥಿಗಳನ್ನುನ ಠಾಣೆಯಿಂದ ಬಿಟ್ಟು ಕಳುಹಿಸಲಾಯಿತು.
ತಾಲೂಕಿನ ಟಿ.ಎಸ್.ಛತ್ರ ಗ್ರಾಮದ ಬಳಿ ಶಾಲೆಗೆ ತೆರಳಲು ಶಾಲಾ ವಿದ್ಯಾರ್ಥಿಗಳು ಬಸ್ ಕಾಯುತ್ತಿದ್ದ ಸಂದರ್ಭದಲ್ಲಿ ನಾಗಮಂಗಲ ಕಡೆಯಿಂದ ಬಂದ ಹಲವಾರು ಸಾರಿಗೆ ಬಸ್‌ಗಳು ಟಿ.ಎಸ್.ಛತ್ರ ಗ್ರಾಮದ ಬಳಿ ನಿಲ್ಲಿಸದೆ ಮುಂದೆ ಹೋದಂತಹ ಸಂದರ್ಭದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸಾರಿಗೆ ಡಿಫೋ ಮ್ಯಾನೇಜರ್ ಅಪ್ಪಿರೆಡ್ಡಿ ಅವರು ಟಿ.ಎಸ್.ಛತ್ರ ಗ್ರಾಮಕ್ಕೆ ತೆರಳಿದ್ದಾರೆ. ಈ ವೇಳೆ ವಿದ್ಯಾರ್ಥಿಗಳು ಸಾರಿಗೆ ಅಧಿಕಾರಿಗಳ ವಿರುದ್ದ ಘೋಷಣೆ ಮೊಳಗಿಸಿದ್ದಾರೆ. ಬಸ್‌ಗಳು ನಿಲ್ಲಿಸದೆ ಹೋಗುವುದರಿಂದ ನಿತ್ಯ ನಾವು ಶಾಲೆಗೆ ಹೋಗಲು ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.
ಶಾಲಾ-ಕಾಲೇಜು ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಶಾಲೆಗೆ ಬರಲು ಮೊದಲು ಬಸ್ ವ್ಯವಸ್ಥೆ ಕಲ್ಪಿಸಿ, ಅದನ್ನು ಬಿಟ್ಟು ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳನ್ನು ಪೊಲೀಸ್ ಠಾಣೆಗೆ ಎಳೆದು ತಂದಿದ್ದೀಯ, ವಿದ್ಯಾರ್ಥಿಗಳಿಗೆ ಅವಾಚ್ಯಶಬ್ಧಗಳಿಂದ ನಿಂದಿಲು ನೀನ್ಯಾರಪ್ಪ, ಸಾರ್ವಜನಿಕರು ಕಟ್ಟುತ್ತಿರುವ ತೆರಿಗೆ ಹಣದಿಂದ ನೀನು ಸಂಬಂಳ ತೆಗೆದುಕೊಳ್ಳುತ್ತಿದ್ದೀಯ, ಸಾರಿಗೆ ಅಧಿಕಾರಿಯಾಗಿ ಜವಬ್ದಾರಿಯಿಂದ ನಡೆದುಕೊಳ್ಳಿ ತಾಲೂಕಿನಲ್ಲಾ ಯಾವುದೇ ವಿದ್ಯಾರ್ಥಿಗಳಿಗೆ ಬಸ್ ಸಮಸ್ಯೆ ಉಂಟಾದರೆ ಮುಂದಿನ ದಿನಗಳಲ್ಲಿ ನಿಮಗೆ ತಕ್ಕಶಾಸ್ತಿಮಾಡಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಬಳಿಕ ವಿದ್ಯಾರ್ಥಿಗಳನ್ನು ಪೊಲೀಸ್ ಠಾಣೆಯಿಂದ ವಾಪಸ್ಸು ಶಾಲೆಗೆ ಕಳುಹಿಸಿಕೊಟ್ಟರು. ಇದೇವೇಳೆ ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ಶ್ರೀನಿವಾಸ್, ನಿರ್ದೇಶಕ ಕಣಿವೆಯೋಗೇಶ್, ಪುರಸಭೆ ಸದಸ್ಯ ಕೃಷ್ಣ, ಶಿವಕುಮಾರ್, ಚಂದ್ರು, ಇಮ್ರಾನ್, ಚಂದ್ರಶೇಖರ್, ಟಿ.ಎಸ್.ಛತ್ರ ವಿಜಿ ಸೇರಿದಂತೆ ಹಲವರು ಹಾಜರಿದ್ದರು.