ರಾಮನಗರ: ಸಚಿವ ಚಲುವರಾಯ ಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ಕೃಷಿ ಅಧಿಕಾರಿಗಳ ಪತ್ರ ಬರೆದಿರುವ ಕುರಿತು ಪ್ರತಿಕ್ರಿಯಿಸಿರುವ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಪ್ರತಿಕ್ರಿಯೆ ನೀಡಿದ್ದು, ಇದು ಸತ್ಯಕ್ಕೆ ದೂರವಾರ ವಿಚಾರ ಎಂದು ಹೇಳಿದ್ದಾರೆ.
ಅವರೊಬ್ಬ ಉತ್ತಮ ರಾಜಕಾರಣಿ ಅವರಿಗೆ ಆ ತರಹದ ಅವಶ್ಯಕತೆ ಇಲ್ಲ. ಹಿಂದೆ ಕಂಡಕ್ಟರ್ ಒಬ್ಬರು ಆತ್ಮಹತ್ಯೆ ವಿಚಾರವಾಗಿ ಕೂಡ ವಿಧಾನ ಸಭೆಯಲ್ಲಿ ಅವರ ವಿರುದ್ಧ ಮಾತನಾಡಿದ್ರು. ನಾವು ನಮಗೆ ಬೇಕಾದವರಿಗೆ ಟ್ರಾನ್ಸ್ ಫರ್ ಗೆ ಲೆಟರ್ ಕೊಡ್ತೇವೆ. ಆದರೆ ಅದೊಂದನ್ನೇ ಇಟ್ಟುಕೊಂಡು ಸದನದಲ್ಲಿ ಹೇಗೆ ಅವರ ಮೇಲೆ ಮುಗಿಬಿದ್ದರು ನೋಡಿದಿರಿ. ಈಗ ಬಂದಿರುವ ಆರೋಪವೂ ಸುಳ್ಳು ಎಂದು ಹೇಳಿದರು.
ಯಾರು ಅವರನ್ನು ಟಾರ್ಗೆಟ್ ಮಾಡ್ತಾ ಇದಾರೆ ಎಂಬುದು ಗೊತ್ತಿದೆ. ಅಧಿಕಾರ ಸಿಗಲಿಲ್ಲವಲ್ಲವೆಂದು ಹೀಗೆಲ್ಲ ಮಾಡೋದು ಶೋಭೆ ಅಲ್ಲ. ನಾನು ಯಾರ ಹೆಸರನ್ನು ಹೇಳುವುದಿಲ್ಲ. ತನಿಖೆ ಆದ ಮೇಲೆ ಗೊತ್ತಾಗಲಿದೆ. ಅಧಿಕಾರಿಗಳು ಪತ್ರ ಬರಿದ್ದಾರಾ..? ಅಥವಾ ಯಾರಾದ್ರು ಬರಸಿದ್ದಾರಾ ಎಂಬುದು ತನಿಖೆ ಆದ್ರೆ ಗೊತ್ತಾಗಲಿದೆ ಎಂದು ವಾಗ್ದಾಳಿ ನಡೆಸಿದರು.