ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕೆ.ಆರ್.ನಗರ ತಾಲ್ಲೂಕು ಪಂಚಾಯತ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಗ್ರಾಪಂ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್‌ಕ್ಷೇಮಾಭಿವೃದ್ಧಿ ಕೆ.ಆರ್.ನಗರ- ಸಾಲಿಗ್ರಾಮ ತಾಲ್ಲೂಕು ಸಂಘದ ವತಿಯಿಂದ “ಉತ್ತಮ ಆಡಳಿತ ದಿನಾಚರಣೆ” “ಕಂಪ್ಯೂಟರ್ ಆಪರೇಟರ್” ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ತಾ.ಪಂ.ಇಓ. ವಿ.ಪಿ.ಕುಲದೀಪ್ ಮಾತನಾಡಿ, ಕಂಪ್ಯೂಟರ್‌ಪಿತಾಮಹ ಚಾರ್ಲ್ಸ್ ಬ್ಯಾಬೇಜ್ ಅವರ ಜನ್ಮದಿನದ ಅಂಗವಾಗಿ ರಾಜ್ಯ ಸರ್ಕಾರದ ಸುತ್ತೋಲೆಯ ನಿರ್ದೇಶನದಂತೆ ಕಂಪ್ಯೂಟರ್‌ಅಪರೇಟರ್ ದಿನಾಚರಣೆಯನ್ನು ಇದೇ ಮೊದಲ ಬಾರಿಗೆ ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಗಿದೆ ಎಂದರು. ಕ್ಷೀಪ್ರಗತಿಯಲ್ಲಿ ಮಾಹಿತಿ ಹಾಗೂ ಸೇವೆಗಳನ್ನು ಪಡೆಯಲು ಪ್ರಸ್ತುತ ಎಲ್ಲಾ ಇಲಾಖೆಗಳಿಗಿಂತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅತೀ ಹೆಚ್ಚು ತಾಂತ್ರಿಕತೆ ಅಳವಡಿಸಿಕೊಂಡಿದೆ. ಗ್ರಾಮೀಣ ಭಾಗದ ಜನರಿಗೆ ಅನೇಕ ಸವಲತ್ತನ್ನು ತಲುಪಿಸುವಲ್ಲಿ ಗ್ರಾಪಂ ಪಾತ್ರ ಹಿರಿದು. ಅದರಂತೆ ಜನರಿಗೆ ಅಗತ್ಯ ಸೇವೆಯನ್ನು ಸಕಾಲದಲ್ಲಿ ಒದಗಿಸಲು ಆಪರೇಟರ್‌ಗಳ ಸೇವೆ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.
ಸೇವೆಯನ್ನು ಸಕಾಲದಲ್ಲಿ ಒದಗಿಸಲು ಆಪರೇಟರ್‌ಗಳ ಸೇವೆ ಮಹತ್ವದ್ದಾಗಿದೆ ಎಂದು ಅವರು ಹೇಳಿದರು. ಕಂಪ್ಯೂಟರ್ ಆಪರೇಟರ್‌ಗಳು ಗ್ರಾಪಂಗೆ ಬೆನ್ನೆಲುಬಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಕೆಲವೊಮ್ಮೆ ಕಚೇರಿ ಅವಧಿ ಮೀರಿ ಹಗಲಿರುಳು ಕೆಲಸ ಮಾಡುತ್ತಿದ್ದಾರೆ ಇದರಿಂದ ಗ್ರಾ.ಪಂ.ಗಳ ಅಭಿವೃದ್ದಿಗೆ ಮತ್ತು ಜನರಿಗೆ ಸಕಾಲದಲ್ಲಿ ಗ್ರಾ.ಪಂ.ಸೇವೆಗಳು ದೊರೆಯಲು ಕಾರಣವಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಪಂಚಾಯತ್ ರಾಜ್ ಸಹಾಯಕನಿದೇಶಕರು ಭಾಸ್ಕರ್, ತಾ.ಪಂ.ಕಛೇರಿ ವ್ಯವಸ್ಧಾಪಕ ಕರ್ತಾಳ್ ಸತೀಶ್ ಕುಮಾರ್, ಸಹಾಯಕ ಲೆಕ್ಕಾಧಿಕಾರಿಗಳಾದ ಮೋಹನಕುಮಾರಿ ಶಿವಕುಮಾರ್,ತಾಲ್ಲೂಕು ಯೋಜನಾಧಿಕಾಗಳಾದ ನಂದೀಶ್ ಕುಮಾರ್, ನಂದೀಶ, ತಾಲ್ಲೂಕು ಡಿ.ಇ.ಓ. ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಿ ಹೆಚ್ ಹರೀಶ್ ರಾಘವೇಂದ್ರ, ಜಿಲ್ಲಾ ಘಟಕದ ಸಂಚಾಲಕ ಡಿ.ಬಿ. ಮಹದೇವಪ್ಪ,ತಾಲ್ಲೂಕು ಉಪಾಧ್ಯಕ್ಷರಾದ ಟಿ ಪಿ ಪ್ರಸನ್ನ ,ಕಾರ್ಯದರ್ಶಿ ಎ.ಡಿ ಮಹೇಶ,ಖಂಚಾಚಿ ಪಿ ಎಲ್ ಕಾರ್ತಿಕ್ ಹಾಗೂ ಡಿ.ಇ.ಓ.ಗಳಾದ ಎಸ್.ಎಸ್ ಸ್ವಾಮಿ ,ಎಂ ಬಿ ರವಿರಾವ್ ಅಭ್ಯಕರಂರ್ , ಕೆ.ಸಿ ಮಹದೇವ,ಎಮ್ ಡಿ ಸಂಜಯ ,ಹೆಚ್.ಎಸ್ ರೇಖಾಮಣಿ.,ಸಿ ಆರ್ ಭಾಗ್ಯ ,ಸಿ ಎಂ ಆನಂದ,ಎ ಜೆ ರಶ್ಮಿ , ಬಿ ಎಂ ಜಯಂತ ಕುಮಾರ ,ಸಿ ಆರ್ ರವಿ ಕುಮಾರ ,ಎಲ್ ಡಿ ಅಪ್ಪಾಜೀಗೌಡ, ಪಿ ಎ ಚಾಂದಿನಿ , ಎನ್ ದೀಪಿಕಾ, ಬಿ ಜಿ ನಳಿನಿ , ಜಿ.ಬಿ ರವೀಶ,ಹೆಚ್.ಕೆ. ರತ್ನಮ್ಮ ,ಎಸ್ ಸಂಜಿತ , ಎನ್ ಬಿ ವಿನುತ,ಎಸ್ ಆರ್ ರವಿ ,ಎಂ ಎನ್ ಮಹೇಶ,ಎಸ್.ಜಿ. ಅವಿನಾಶ್,ಜಿ ಎಸ್ ಚಂದನ ,ಎಸ್ ಎಸ್ ಅರುಣ್ ಕುಮಾರ್ , ಎಸ್ ಬಾಲರಾಜು,ವಿ ಎಮ್ ಸೌಮ್ಯ ,ಎಸ್ ಜಿ ರಾಮು , ಜೀವನ್, ಶೃತಿ,ಕಿರಣ್ ಹಾಜರಿದ್ದರು.