ಉಚಿತ ಕಂಪ್ಯೂಟರ್ ತರಬೇತಿ,ವಿದ್ಯಾರ್ಥಿನಿಯರಿಗೆ ವೇಲ್ಕಮ್ ಕಿಟ್ ವಿತರಣೆ
ಮೈಸೂರು: ಚಾಮರಾಜ ಜೋಡಿ ರಸ್ತೆಯಲ್ಲಿ ಪೇಜ್ ಇಂಡಸ್ಟ್ರೀಸ್ ಲಿಮಿಟೆಡ್ ಸಹಾಯದೊಂದಿಗೆ ಸಮರ್ಥನಂ ಅಂಗವಿಕಲರ ಸಂಸ್ಥೆಯ ಜೀವನೋಪಾಯ ಸಂಪನ್ಮೂಲ ಕೇಂದ್ರದಲ್ಲಿ ಉಚಿತ ಕಂಪ್ಯೂಟರ್ ತರಬೇತಿಯ ವಿದ್ಯಾರ್ಥಿನಿಯರಿಗೆ ವೇಲ್ಕಮ್ ಕಿಟ್ ವಿತರಣಾ ಕಾರ್ಯಕ್ರಮ ಇಂದು ಗುರುವಾರ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ವಕೀಲ ರಾಜೇಂದ್ರ ಮೈಸೂರು ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಕಂಪ್ಯೂಟರ್ ಮಹತ್ವದ ಪಾತ್ರವನ್ನು ವಹಿಸುತ್ತದೆ. ಕಂಪ್ಯೂಟರ್ ತಂತ್ರಜ್ಞಾನದಲ್ಲಿನ ಆವಿಷ್ಕಾರವು ಶಿಕ್ಷಣದ ಮೇಲೆ ಆಳವಾದ ಪ್ರಭಾವ ಬೀರುತ್ತದೆ. ಇದು ಇಂದು ಪ್ರತಿಯೊಬ್ಬ ವ್ಯಕ್ತಿಯ ಅತ್ಯಗತ್ಯ ಭಾಗವಾಗಿರುವುದರಿಂದ ಶಾಲಾ ಪಠ್ಯಕ್ರಮದ ಒಂದು ಭಾಗವಾಗಿದೆ. ಶಾಲೆಗಳಲ್ಲಿ ಕಂಪ್ಯೂಟರ್ ಶಿಕ್ಷಣವು ಚಿಕ್ಕ ಮಕ್ಕಳ ವೃತ್ತಿಜೀವನದ ಬೆಳವಣಿಗೆಯಲ್ಲಿ ಪ್ರಮುಖ ಗಮನಾರ್ಹ ಪಾತ್ರವನ್ನು ವಹಿಸುತ್ತದೆ ಎಂದರು

ಮತ್ತೋರ್ವ ಅತಿಥಿಯಾದ ಯುವಮುಖಂಡ ಕೆ.ಜಿ. ಮಹಾಲಿಂಗಪ್ಪ ಮಾತನಾಡಿ, ಪ್ರಸ್ತುತ ಇಂದು ಹಲವಾರು ವಿದ್ಯಾರ್ಥಿಗಳಿಗೆ ಬಡತನದ ಕೊರತೆಯಿಂದ ಶಿಕ್ಷಣ ಸೌಲಭ್ಯದಿಂದ ವಂಚಿತರಾಗಿದ್ದಾರೆ ಆದರೆ ಈ ಸಮರ್ಥನ ಸಂಸ್ಥೆಯು ಉತ್ತಮ ಶಿಕ್ಷಣವನ್ನು ನೀಡುವುದರ ಜೊತೆ ಶಿಕ್ಷಣಕ್ಕಾಗಿ ಬೇಕಾಗುವ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿದೆ ಇದನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳುವಂತೆ ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.
ಸಮರ್ಥನಂ ಅಂಗವಿಕಲರ ಸಂಸ್ಥೆಯ ಮೈಸೂರು ವಿಭಾಗೀಯ ಮುಖ್ಯಸ್ಥರಾದ ಶಿವರಾಜು ಕಂಪ್ಯೂಟರ್ ಶಿಕ್ಷಣವು ಉತ್ತಮ ಉದ್ಯೋಗಗಳನ್ನು ಪಡೆಯಲು ಸಹಾಯ ಮಾಡುತ್ತದೆ: ಇಂದು ಕಂಪ್ಯೂಟರ್ ಉದ್ಯಮವು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಕಂಪ್ಯೂಟರ್‌ಗಳು ಎಲ್ಲೆಡೆ ಬೇಕು. ಅವರು ಪ್ರತಿ ಉದ್ಯಮದ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದ್ದಾರೆ. ಇಂದು ಪ್ರತಿಯೊಂದು ಕೆಲಸವೂ ಕಂಪ್ಯೂಟರ್ ಮೇಲೆ ಅವಲಂಬಿತವಾಗಿದೆ. ಆದ್ದರಿಂದ ಸಂಸ್ಥೆಯಲ್ಲಿ ನೀಡುವ ತರಬೇತಿಯ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಂಡು, ಮೊಬೈಲ್ ಬಿಟ್ಟು ಓದುವ ಹವ್ಯಾಸ ಬೆಳೆಸಿಕೊಂಡು ಹೆಚ್ಚು ಜ್ಞಾನ ಸಂಪಾದಿಸಿಕೊಂಡು ತಮ್ಮ ಕಾಲು ಮೇಲೆ ನಿಂತು ಉತ್ತಮವಾದ ಜೀವನವನ್ನು ನಡಿಸಬೇಕು ಎಂದು ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸಮರ್ಥನಂ ಜೀವನೋಪಾಯ ಸಂಪನ್ಮೂಲ ಕೇಂದ್ರದ ತರಬೇತಿದಾರ ಸ್ಪರ್ಶ, ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಪಿ.ಸುಮಿತ್ರ, ನಿಶಾಮಣಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಾರ್ಥನೆಯನ್ನು ಲಕ್ಷ್ಮಿ, ನಿರೂಪಣೆಯನ್ನು ಚಂದನ, ಸ್ವಾತಗವನ್ನು ನಿತ್ಯ, ವಂದನಾರ್ಪಣೆಯನ್ನು ದರ್ಶಿನಿ ನಡೆಸಿಕೊಟ್ಟರು.