Friday, April 4, 2025
Google search engine

Homeರಾಜ್ಯಸುದ್ದಿಜಾಲನಾಳೆ ಶ್ರೀ ಭಗವದ್ಗೀತಾ ಅಭಿಯಾನ ಕರ್ನಾಟಕ 2024-25ರ ಸಮಾರೋಪ ಸಮಾರಂಭ

ನಾಳೆ ಶ್ರೀ ಭಗವದ್ಗೀತಾ ಅಭಿಯಾನ ಕರ್ನಾಟಕ 2024-25ರ ಸಮಾರೋಪ ಸಮಾರಂಭ

ಚಾಮರಾಜನಗರ: ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ ,ಶ್ರೀ ಸರ್ವಜ್ಞೆoದ್ರ ಸರಸ್ವತಿ ಪ್ರತಿಷ್ಠಾನ( ರಿ) ಶಿರಸಿ,( ಉತ್ತರ ಕರ್ನಾಟಕ ) ಕರ್ನಾಟಕ ಹಾಗೂ ಶ್ರೀ ಭಗವದ್ಗೀತಾ ಅಭಿಯಾನ ಸಮಿತಿ ಚಾಮರಾಜನಗರ ಜಿಲ್ಲೆ ವತಿಯಿಂದ ಶ್ರೀ ಭಗವದ್ಗೀತಾ ಅಭಿಯಾನದ 2024- 25ರ ಸಮಾರೋಪ ಸಮಾರಂಭ ಫೆಬ್ರವರಿ 17ರ ಸೋಮವಾರ ಬೆಳಗ್ಗೆ 10.30 ಕ್ಕೆ ನಗರದ ಸೇವಾ ಭಾರತೀ ಶಾಲಾ ಸಭಾಂಗಣದಲ್ಲಿ ಜರುಗಲಿದೆ.

ದಿವ್ಯ ಸಾನಿಧ್ಯವನ್ನು ಶ್ರೀ ಶ್ರೀ ದೇಶಿಕೇಂದ್ರ ಷಡಕ್ಷರಿ ಸ್ವಾಮಿರವರು, ಮುಡಕನಪುರ ,ಟಿ ನರಸೀಪುರ ಇವರು ವಹಿಸುವರು. ಉದ್ಘಾಟನೆಯನ್ನು ನಗರಸಭೆಯ ಅಧ್ಯಕ್ಷರಾದ ಸುರೇಶ್ ಎಸ್ ರವರು ನೆರವೇರಿಸಲಿದ್ದಾರೆ.
ಮುಖ್ಯ ಭಾಷಣಕಾರರಾಗಿ ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರದ ಡಾ. ಅನಂತ ನಾಗೇಂದ್ರ ಭಟ್ ಹಿತ್ಲಳ್ಳಿ ರವರು ನೆರವೇರಿಸುವರು.

ಅಧ್ಯಕ್ಷತೆಯನ್ನು ಶ್ರೀ ಭಗವದ್ಗೀತಾ ಅಭಿಯಾನ ಸಮಿತಿಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಸ್ವಾಮಿ ವಹಿಸುವರು. ಅತಿಥಿಗಳಾಗಿ ಗಣಪತಿ ಮಹಾದೇವ ಹೆಗಡೆ ಗೌರವಾಧ್ಯಕ್ಷರು ,ಶ್ರೀ ಭಗವದ್ ಗೀತಾ ಅಭಿಯಾನ ಸಮಿತಿ, ಸೇವಾ ಭಾರತೀ ಶಿಕ್ಷಣ ಸಂಸ್ಥೆಯ ವಾಸುದೇವರಾವ್, ಶ್ರೀ ಭಗವದ್ಗೀತಾ ಅಭಿಯಾನ ಸಮಿತಿಯ ಕಾರ್ಯದರ್ಶಿ ಸುರೇಶ್ ಎನ್ ಋಗ್ವೇದಿ ,ಭಗವದ್ಗೀತಾ ಅಭಿಯಾನ ಸಮಿತಿಯ ಖಜಾಂಚಿಗಳಾದ ಎಸ್ ಬಾಲಸುಬ್ರಮಣ್ಯರವರು ಆಗಮಿಸಲಿದ್ದಾರೆ.

ಶ್ರೀ ಸ್ವರ್ಣವಲ್ಲಿ ಮಹಾಸಂಸ್ಥಾನ ಶಿರಸಿ 2007 ರಿಂದ ರಾಜ್ಯಾದ್ಯಂತ ಶ್ರೀ ಭಗವದ್ಗೀತಾ ಅಭಿಯಾನವನ್ನು ನಿರಂತರವಾಗಿ ನಿರ್ವಹಿಸಿಕೊಂಡು ಲಕ್ಷಾಂತರ ವಿದ್ಯಾರ್ಥಿಗಳು, ಯುವಕರು ,ಮಹಿಳೆಯರು ಹಾಗೂ ಸಾರ್ವಜನಿಕರಲ್ಲಿ ಪಾರಾಯಣ ಮತ್ತು ಪಠಣ ಮತ್ತು ಅರ್ಥೈಸುವಿಕೆಯ ಬೃಹತ್ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. 2024ರ ಜಿಲ್ಲಾಮಟ್ಟದ ಶ್ರೀ ಭಗವದ್ಗೀತಾ ಅಭಿಯಾನ ಸಮಾರಂಭವು ಸಾವಿರಾರು ವಿದ್ಯಾರ್ಥಿಗಳ ಪಾರಾಯಣದೊಂದಿಗೆ ನಾಳೆ ಜರುಗಲಿದೆ.

RELATED ARTICLES
- Advertisment -
Google search engine

Most Popular