ಮೈಸೂರು: ಕರ್ನಾಟಕಕ್ಕೆ ಹೆಚ್ಚುವರಿ ಅಕ್ಕಿ ನೀಡಲು ನಿರಾಕರಿಸಿರುವ ಒಕ್ಕೂಟ ಸರ್ಕಾರದ ನಡೆ ಖಂಡಿಸಿ ಮಂಗಳವಾರ ಭಾರತ ಕಮ್ಯುನಿಸ್ಟ್ ಪP (ಮಾರ್ಕ್ಸ್‌ವಾದಿ) ಮೈಸೂರು ಜಿ ಸಂಘಟನಾ ಸಮಿತಿಯಿಂದ ಟೌನ್ ಹಾಲ್ ಮುಂಭಾಗದ ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆ ನಡೆಯಿತು.
ರಾಜ್ಯ ಸರ್ಕಾರ ಜುಲೈ ತಿಂಗಳಿಂದ ೧೦ ಕೆಜಿ ಅಕ್ಕಿ ಅಥವಾ ಆಹಾರಧಾನ್ಯ ನೀಡುವಲ್ಲಿ ಸಂಕುಚಿತ ರಾಜಕೀಯ ಮಾಡುತ್ತಿರುವುದು ಸ್ವಾಗತಾರ್ಹವಾಗಿದೆ. ಆದರೆ, ಒಕ್ಕೂಟ ಸರ್ಕಾರ ರಾಜ್ಯಕ್ಕೆ ಹೆಚ್ಚುವರಿ ಆಹಾರ ಧಾನ್ಯ ನೀಡುವಲ್ಲಿ ಸಂಕುಚಿತ ರಾಜಕೀಯ ಮಾಡುತ್ತಿದೆ. ಒಕ್ಕೂಟ ಸರ್ಕಾರ ಬಡವರ ವಿರೋಧಿಯಾಗಿರುವುದು ಅಕ್ಷಮ್ಯ. ಒಪ್ಪಂದದ ಪ್ರಕಾರ ಒಕ್ಕೂಟ ಸರ್ಕಾರ ಭಾರತ ಆಹಾರ ನಿಗಮದ ಮೂಲಕ ಆಹಾರ ಧಾನ್ಯಗಳನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕೇಂದ್ರದ ಆಹಾರ ನಿಗಮದಲ್ಲಿ ೭ ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಆಹಾರ ಧಾನ್ಯವಿದೆ. ಬಡವರ ಹಸಿವು ನೀಗಿಸಲು ಹಣ ಕೊಡುತ್ತೇವೆ ಅಕ್ಕಿ ಕೊಡುವಂತೆ ಕೇಳಿದರೂ ಮೋದಿ ಸರ್ಕಾರ ಅಕ್ಕಿ ಕೊಡಲು ತಯಾರಿಲ್ಲ. ಖಾಸಗಿಯವರಿಗೆ ಅಕ್ಕಿ ಕೊಡಲು ತಯಾರಾಗಿರುವುದು ಖಾಸಗಿ ಕಂಪನಿಗಳ ಪರ ತನ್ನ ಒಲವನ್ನು ತೋರಿಸುತ್ತದೆ ಎಂದು ಟೀಕಿಸಿದರು.
ರಾಜ್ಯದ ಬಹುತೇಕ ಬಿಜೆಪಿ ಸಂಸದರು ಜನರಿಗೆ ಆಹಾರ ಧಾನ್ಯದ ಬದಲು ನಗದು ವರ್ಗಾವಣೆ ಮಾಡುವಂತೆ ಸೂಚಿಸುವ ಬಿಜೆಪಿ ಧೋರಣೆಯೂ ಬಡವರ ಪರವಾಗಿರದೇ ಲೂಟಿಕೋರ ಕಾರ್ಪೋರೇಟ್ ಕಂಪನಿಗಳ ಪರವಾದ ನೀತಿಯಾಗಿದೆ. ಸಂಕುಚಿತ ಜನ ವಿರೋಧಿ ರಾಜಕಾರಣವನ್ನು ಕೂಡಲೇ ಕೈ ಬಿಟ್ಟು ಒಪ್ಪಂದದಂತೆ ಅಕ್ಕಿ ಕೊಡುವಂತೆ ಪ್ರತಿಭಟನೆಯಲ್ಲಿ ಆಗ್ರಹಿಸಿದರು.
ಜಿ ಕಾರ್ಯದರ್ಶಿ ಜಗದೀಶ್ ಸೂರ್‍ಯ, ಜಿ ಸಮಿತಿ ಸದಸ್ಯರಾದ ಲ.ಜಗನ್ನಾಥ್, ಕೆ.ಬಸವರಾಜ, ಜಯರಾಂ, ಸದಸ್ಯರಾದ ಬಾಲಾಜಿ ರಾವ್, ಬಲರಾಂ, ಬಸವಯ್ಯ, ಈಶ್ವರ್, ಶಾಕುಂತಲ, ಸೀನಪ್ಪ, ಸುಬ್ರಹ್ಮಣ್ಯ, ಚಂದ್ರಶೇಖರ್, ಎಂ.ಎಫ್.ಕಲಿಂ, ರಾಜ್ಯ ರೈತ ಸಂಘದ ಮಂಜುಕಿರಣ, ಕೃಷ್ಟೇಗೌಡ, ದರ್ಶನ್, ಶಿವಕುಮಾರ್ ಸಂಬಯ್ಯ, ವರುಣಾ ನಾಗರಾಜ್ ಮುಂತಾದವರಿದ್ದರು.