
ಮೈಸೂರು: ಮುಂದಿನ ದಿನಗಳಲ್ಲಿ ಮೈಸೂರು ಜಿಲ್ಲಾಡಳಿತ ಮೈಸೂರು ದಸರಾ ಸಂದರ್ಭದಲ್ಲಿ ಪಂಡಿತ್ ರಾಜೀವ್ ತಾರಾನಾಥ್ ರವರ ಸಂಗೀತ ಸೇವೆಯನ್ನು ಸ್ಮರಿಸುವ ನಿಟ್ಟಿನಲ್ಲಿ ಹಿಂದುಸ್ತಾನಿ ಶಾಸ್ತ್ರೀಯ ಮತ್ತು ವಾದ್ಯ ಪರಿಕರಗಳ ಸಂಗೀತ ಪ್ರದರ್ಶನಗಳನ್ನು ಆಯೋಜಿಸಲಿ ಎಂದು ಹಿರಿಯ ಸಮಾಜ ಸೇವಕ ಕೆ ರಘುರಾಮ್ ವಾಜಪೇಯಿ ಮನವಿ ಮಾಡಿದರು
ನಗರದ ಚಾಮರಾಜಪುರಂನಲ್ಲಿರುವ ಕೆ ಎಂ ಪಿ ಕೆ ಟ್ರಸ್ಟ್ ಆವರಣದಲ್ಲಿ ಸಂಗೀತ ಮಾಂತ್ರಿಕ ಪಂಡಿತ್ ರಾಜೀವ್ ತಾರಾನಾಥ್ ರವರ ಸಂತಾಪ ಸಭೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಮೈಸೂರು ಕಲಾವಿದರ ತವರೂರು, ಮೈಸೂರು ಮಹಾರಾಜರ ಕೊಡುಗೆಯಿಂದಾಗಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಗಳು ಶಾಶ್ವತವಾಗಿ ನೆಲೆಯೂರಿತು ಪಂಡಿತ್ ತಾರಾನಾಥ್ ರವರ ಸುಪುತ್ರ ಪಂಡಿತ್ ರಾಜೀವ್ ತಾರಾನಾಥ್ ರವರು ಮೈಸೂರಿನ ಸಂಗೀತ ಪರಂಪರೆಗೆ ಅಪಾರ ಕೊಡುಗೆ ನೀಡಿದ್ದಾರೆ, ದೇಶ ವಿದೇಶದಲ್ಲೂ ಇಂದು ಅವರನ್ನು ಸ್ಮರಿಸುತ್ತಿರುವುದು ಕರ್ನಾಟಕದ ಕೀರ್ತಿ ಹೆಚ್ಚಿಸಿದ್ದಾರೆ , ಪ್ರಖ್ಯಾತ ಕಲಾವಿದರಾದ ಅಕ್ಬರ್ ಅಲಿಖಾನ್, ಅನ್ನಪೂರ್ಣ ದೇವಿ, ಪಂಡಿತ್ ರವಿಶಂಕರ್ ಅವರೊಂದಿಗೆ ಹೆಚ್ಚಿನ ಒಡನಾಟದ ಗುರುಪುರಂಪರೆ ಹೊಂದಿದ್ದರು ಎಂದರು.
ನಂತರ ಮಾತನಾಡಿದ ಪ್ರಸಾದ್ ಸ್ಕೂಲ್ ಆಫ್ ರಿದಮ್ ತಾಳವಾದ್ಯ ಪ್ರತಿಷ್ಠಾನದ ಸಂಸ್ಥಾಪಕರಾದ ಡಾ. ರಾಘವೇಂದ್ರ ಪ್ರಸಾದ್ ಮಾತನಾಡಿ ಪ.ರಾಜೀವ್ ತಾರಾನಾಥ್ ರವರ ಮುಗ್ಧ ಸ್ವಭಾವ ಸಣ್ಣ ಮಕ್ಕಳಿಗೂ ಸಹ ಅರಿವಾಗುವ ರೀತಿಯಲ್ಲಿ, ಅವರು ಸಂಗೀತದ ಶಿಕ್ಷಣ ನೀಡುತ್ತಿದ್ದರು, ಹಿಂದುಸ್ಥಾನಿ ಅಲ್ಲದೆ ಕರ್ನಾಟಿಕ್ ಶಾಸ್ತ್ರೀಯ ಸಂಗೀತದ ಅರಿವು ಅವರಿಗಿತ್ತು ಎಂದು ಬಣ್ಣಿಸಿದರು.
ಹಿರಿಯ ತಬಲ ವಾದಕರಾದ ರಮೇಶ್ ದನ್ನೂರ್ ಅಂತರಾಷ್ಟ್ರೀಯ ಮಟ್ಟದ ಕಲಾವಿದರಾಗಿದ್ದ ರಾಜೀವ್ ತಾರಾನಾಥ್ ಅವರ ನಿಧನದಿಂದ ಹಿಂದುಸ್ಥಾನಿ ಸಂಗೀತಕ್ಕೆ ದೊಡ್ಡ ನಷ್ಟವಾಗಿದೆ, ತರನಾಥ್ ಅವರು ಮೈಸೂರಿನಲ್ಲಿ ವಾಸವಾಗಿದ್ದರಿಂದ ಮೈಸೂರಿಗೆ ಹಿರಿಮೆ ಇತ್ತು, ಈಗ ಆ ಹಿರಿಮೆ ಹೋಗಿದೆ, ಅವರ ಜೊತೆ ಸುಮಾರು ಹತ್ತು ವರ್ಷಗಳ ಒಡನಾಟ ಇತ್ತು ಎಂದು ಸ್ಮರಿಸಿದರು,
ಇದೇ ಸಂದರ್ಭದಲ್ಲಿ ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪೇಯಿ, ಪ್ರಸಾದ್ ಸ್ಕೂಲ್ ಆಫ್ ರಿದಮ್ ತಾಲವಾದ್ಯ ಪ್ರತಿಷ್ಠಾನದ ಸಂಸ್ಥಾಪಕರಾದ ಡಾ ರಾಘವೇಂದ್ರ ಪ್ರಸಾದ್, ಹಿರಿಯ ತಬಲ ವಾದಕರಾದ ರಮೇಶ್ ದನ್ನೂರು, ಹಿಂದುಸ್ತಾನಿ ಗಾಯಕ ಪ್ರಭುರಾವ್
ಮಾಜಿನಗರ ಪಾಲಿಕೆ ಸದಸ್ಯರಾದ ಎಂ ಡಿ ಪಾರ್ಥಸಾರಥಿ, ಮಂಚೇಗೌಡನ ಕೊಪ್ಪಲ್ ರವಿ, ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಜೆಡಿಎಸ್ ನಗರ ಕಾರ್ಯದಕ್ಷ ಪ್ರಕಾಶ್ ಪ್ರಿಯದರ್ಶನ್, ಕೆ ಎಂ ಪಿ ಕೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ನಿರೂಪಕ ಅಜಯ್ ಶಾಸ್ತ್ರಿ, ಜಿ ರಾಘವೇಂದ್ರ, ಕಲಾವಿದರ ಸಂಘದ ಕಾರ್ಯದರ್ಶಿ ಗುರುದತ್, ಸೂಚಿಂದ್ರ, ಮಿರ್ಲೆ ಪನೀಶ್, ಸಚಿನ್, ಹಾಗೂ ಇನ್ನಿತರರು ಸಂತಾಪ ಸಭೆಯಲ್ಲಿ ಭಾಗಿಯಾಗಿದ್ದರು.