- ವರದಿ:ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ರೈತರಿಗೆ ಹೈನುಗಾರಿಕೆ ಲಾಭದಾಯಕವಾಗಿದ್ದು, ಹಸುಗಳಿಗೆ ಕಾಲಕ್ಕೆ ತಕ್ಕಂತೆ ರೋಗ ನಿರೋಧಕದ ಲಸಿಕೆ, ಚುಚ್ಚುಮದ್ದು ಕಡ್ಡಾಯವಾಗಿ ಹಾಕಿಸಬೇಕು ಎಂದು ಮೈಮುಲ್ ನಿರ್ದೇಶಕ ಎ.ಟಿ.ಸೋಮಶೇಖರ್ ಹೇಳಿದರು.
ಸಾಲಿಗ್ರಾಮ ತಾಲೂಕಿನ ಭೇರ್ಯ ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಇಲಾಖೆ ಹಾಗೂ ಭೇರ್ಯ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಹಮ್ಮಿಕೊಂಡಿದ್ದ ಅಧಿಕ ಹಾಲು ಕರೆಯುವ ಸ್ಪರ್ಧೆ ಮತ್ತು ಮಿಶ್ರತಳಿ ಕರುಗಳ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಾನುವಾರುಗಳು ಸೂಕ್ಷ್ಮವಾದ ಜೀವಿಗಳು ಆದರೆ ಮನುಷ್ಯನಿಗೆ ಬರುವ ಖಾಯಿಲೆ ತರನೇ ಜಾನುವಾರುಗಳಿಗೆ ಬರುತ್ತವೆ ಇವೆಲ್ಲ ಹತೋಟಿಗೆ ತರಲು ಬಹಳಷ್ಟು ಪಶುಪಾಲನಾ ಇಲಾಖೆ ಶ್ರಮಿಸುತ್ತಿದೆ. ಜಿಲ್ಲೆ ಮತ್ತು ತಾಲ್ಲೂಕಿನಲ್ಲಿ ಪಶು ವೈದ್ಯರು ಬಹಳಷ್ಟು ರೈತರ ಜೊತೆ ಒಡನಾಡಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ರೈತರ ಹಾಲಿನ ಉತ್ಪಾದನೆಗೆ ಉತ್ತಮ ದರ ಕೊಡುವಲ್ಲಿ ಮೈಸೂರು ಜಿಲ್ಲಾ ಹಾಲು ಒಕ್ಕೂಟ ಮುಂಚೂಣಿಯಲ್ಲಿದೆ, ನಿರುದ್ಯೋಗ ಸಮಸ್ಯೆ ತಪ್ಪಿಸಲು ಹೈನುಗಾರಿಕೆ ಕೈಹಿಡಿಯಲಿದೆ, ಹೈನುಗಾರಿಕೆ ದೊಡ್ಡ ಉದ್ಯಮವಾಗಿ ಎಲ್ಲರನ್ನು ಉತ್ತಮವಾಗಿ ಬೆಳಸಿದೆ, ಪ್ರಸ್ತುತ ಹಸುಗಳು ಬೆಲೆ ಗಗನಕ್ಕೇರಿದೆ, ತಮ್ಮ ಮನೆಯಲ್ಲಿ ಹುಟ್ಟಿದ ಕರು ಸಾಕಿದರೆ ಮನೆಯ ಸಂಕಷ್ಟವನ್ನು ದೂರು ಮಾಡುತ್ತದೆ ಆದ್ದರಿಂದ ಹೈನುಗಾರಿಕೆ ನಂಬಿ ಸಾಕಷ್ಟು ರೈತರು, ಉತ್ಪಾದಕರು ಜೀವನ ಸಾಗಿಸುತ್ತಿದ್ದಾರೆ ಎಂದರು.
ಪಶುಪಾಲನಾ ಮತ್ತು ಪಶುವೈದ್ಯ ಇಲಾಖೆಯ ಉಪ ನಿರ್ದೇಶಕ ನಾಗರಾಜ್ ಮಾತನಾಡಿ ರೈತರು ತಮ್ಮ ಜಾನುವಾರುಗಳ ಬಗ್ಗೆ ಹೆಚ್ಚಿನ ನಿಗಾ ವಹಿಸ ಬೇಕು, ಹವಮಾನ ವೈಪರೀತ್ಯಗಳಿಂದ ವೈರಸ್ ರೋಗಗಳು ಹೆಚ್ಚಾಗಿ ಹರಡುವ ಸಾದ್ಯತೆ ಹೆಚ್ಚಾಗಿದ್ದು ಪಶುಪಾಲನಾ ಇಲಾಖೆಯ ಪಶುವೈದ್ಯರು ನಿಮ್ಮ ಮನೆ ಬಾಗಿಲಿಗೆ ಬಂದು ಚಿಕಿತ್ಸೆ, ಸಲಹೆಯನ್ನು ಚಾಚು ತಪ್ಪದೆ ಪಾಲಿಸಿ ಎಂದರು.
ರಾಜ್ಯದಲ್ಲಿ ಚರ್ಮಗಂಟು ರೋಗವನ್ನು ಹತೋಟಿಗೆ ತರಲು ಪಶುವೈದ್ಯ ಇಲಾಖೆ ಸಾಕಷ್ಟು ಶ್ರಮಿಸಿದೆ, ಆದ್ದರಿಂದ ರೈತರು, ಹಾಲು ಉತ್ಪಾದಕರು ಕಾಲ ಕಾಲಕ್ಕೆ ಅನುಗುಣವಾಗಿ ತಪ್ಪದೇ ರೋಗ ನಿರೋಧಕ ಲಸಿಕೆಯನ್ನು ಹಾಕಿಸಿ ಎಂದು ಮನವಿ ಮಾಡಿದರು.
ನಂತರ ಪಶುಪಾಲನಾ ಮತ್ತು ಪಶುವೈದ್ಯ ಇಲಾಖೆಯ ತಾಲ್ಲೂಕು ಸಹಾಯಕ ನಿರ್ದೇಶಕ ಡಾ.ಮಂಜುನಾಥ್ ಮಾತನಾಡಿ ಹಾಲು ಕರೆಯುವ ಸ್ಪರ್ಧೆ ಹಾಗು ಮಿಶ್ರ ತಳಿಗಳ ಪ್ರದರ್ಶನದ ಮೂಲಕ ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆಗೆ ಉತ್ತೇಜನ ನೀಡಲಾಗುತ್ತದೆ ಎಂದರು.
ಪಶುವೈದ್ಯರು ಮತ್ತು ಸಿಬ್ಬಂದಿಗಳು ಶೀಘ್ರದಲ್ಲೇ ನಿಮ್ಮ ಮನೆ ಬಾಗಿಲಿಗೆ ಬಂದು ಜಾನುವಾರುಗಳ ಸಮೀಕ್ಷೆ ಮಾಡಲಿದ್ದಾರೆ, ರೈತರು, ಜನರು ಚಾಚು ತಪ್ಪದೆ ಸಹಕರಿಸಿ ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಅಧಿಕ ಹಾಲು ಕರೆಯುವ ಸ್ಪರ್ಧೆ ಹಾಗೂ ಉತ್ತಮ ಮಿಶ್ರ ತಳಿಗಳ ಕರುಗಳನ್ನು ಆಯ್ಕೆ ಮಾಡಿ ಬಹುಮಾನ ವಿತರಣೆ ಮಾಡಲಾಯಿತು.
ಹಾಲು ಕರೆಯುವ ಸ್ಪರ್ಧೆ :
ಅತಿಹೆಚ್ಚು ಹಾಲು ಕರೆದ ಸ್ಪರ್ಧೆಯಲ್ಲಿ ಮೊದಲನೇ ಸ್ಥಾನ ಸಂಬ್ರವಳ್ಳಿ ನಾಗರಾಜ, ೧೮ .೮೬ ಲೀಟರ್ , ದ್ವಿತೀಯ ಸ್ಥಾನ ಸವಿತನಾಗರಾಜು,, ೧೭.ಲೀ., ಮೂರನೇ ಸ್ಥಾನ ಸೋಮಶೇಖರ್, ೧೫ ಲೀ, ನಾಲ್ಕುನೇ ಸ್ಥಾನ ನಂಜುಂಡ ತಿಮ್ಮಚಾರಿ ೧೨.೫ ಲೀ, ಐದನೆ ಸ್ಥಾನ ಹೂ ರಾಜು, ೧೦.೫ ಲೀ, ಆರನೇ ಸ್ಥಾನ ಮಂಜುನಾಥ್, ೯ ಲೀಟರ್
೬ ತಿಂಗಳ ಮೇಲಿನ ಕರುಗಳು : ಚಂದ್ರಶೇಖರ್ ಬೋರೇಗೌಡನಕೊಪ್ಪಲು, ಎರಡನೇ ಕರು ಬಹುಮಾನ ನೂರುಪಾಷ, ತೃತೀಯ ನಾಗರಾಜು,
ಆರು ತಿಂಗಳೊಳಗಿನ ಕರುಗಳು : ಹೂ ರಾಜು, ತಾಯಮ್ಮ, ಚಂದ್ರಶೇಖರ್, ಕುಮಾರ್, ಮಂಜುಳಾ,
ನಾಟಿ ದೇಶಿ ಕರುಗಳು : ಬಟಿಗನಹಳ್ಳಿ ಗ್ರಾಮದ ಚಂದ್ರಶೇಖರ್, ಬಿ.ಹೆಚ್.ಮಹದೇವ, ನವೀನ,
ಕಾರ್ಯಕ್ರಮದಲ್ಲಿ ಡಾ.ಹರೀಶ್, ಡಾ. ರಾಮು, ಡಾ.ವಿನಯ್, ಡಾ.ಚಂದನ್, ಡಾ.ಸುರೇಂದ್ರ, ಡಾ.ಸಂಜಯ್, ಡಾ.ಪ್ರಹ್ಲಾದ್, ಡಾ.ಸಂತೋಷ್, ಭೇರ್ಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮಖ್ಸೂದ್ ಖಾನ್, ಉಪಾಧ್ಯಕ್ಷ ಪುಟ್ಟಸ್ವಾಮೀಗೌಡ ನಿರ್ದೇಶಕರಾದ ಗೆಂಡೆಕುಮಾರ್, ರಾಮನಾಯಕ, ಬಿ.ಪಿ. ರಾಮಕೃಷ್ಣ, ಗಣೇಶ್, ಮಹದೇವಪ್ಪ, ಡೈರಿ ಸಿಇಓ ಬಿ.ಪಿ.ಲೋಕೇಶ್, ಸಹಾಯಕ ಪ್ರಸನ್ನ, ಕೌಶಿಕ್ ಸೇರಿದಂತೆ ಪಶುಪಾಲನಾ ಮತ್ತು ಪಶುವೈದ್ಯ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು.