ತುಮಕೂರು: ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶ ಹಿನ್ನೆಲೆ ಮಧ್ಯಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆ ಇದ್ದರೂ ಬಿಜೆಪಿ ಗೆದ್ದಿದೆ, ರಾಜಸ್ಥಾನದಲ್ಲಿ ಆಡಳಿತ ವಿರೋಧಿ ಅಲೆಯಿಂದ ಸೋತಿದೆ, ಕಾಂಗ್ರೆಸ್ ಪಕ್ಷದಲ್ಲಿ ಗೊಂದಲದಿಂದ ರಾಜಸ್ಥಾನದಲ್ಲಿ ಸೋಲಿಕೆ ಕಾರಣ ಎಂದು ಸಚಿವ ಕೆ.ಎನ್ ರಾಜಣ್ಣ ಹೇಳಿದರು.
ಮೇಲ್ನೋಟಕ್ಕೆ ಅವರು ಒಂದಾಗಿದಂತೆ ಕಂಡರೂ ತಳಮಟ್ಟದಲ್ಲಿ ಒಂದಾಗಿರಲಿಲ್ಲ ಗೆಲ್ಹೋಟ್- ಪೈಲೋಟ್ ನಡುವಿನ ಗೊಂದಲ ತುಂಬಾ ಹಿಂದಿನದು ಪಕ್ಷದ ವರಿಷ್ಠರು ಅವರನ್ನು ಒಂದಾಗಿಸಿದರೂ ಅದು ಫಲಕೊಡಲಿಲ್ಲ. ಮಧ್ಯಪ್ರದೇಶದಲ್ಲಿ ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂದ್ಯಾ ಅವರ ಪ್ರಭಾವದಿಂದ ಬಿಜೆಪಿ ಹೆಚ್ಚಿನ ಸ್ಥಾನಗಳಿಸಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಮುಂದಿರೋದು ಸಂತೋಷ ತಂದಿದೆ, ಕೆಸಿಆರ್ ಕುಟುಂಬ ರಾಜಕಾರಣ ಮಾಡಿದ್ದರಿಂದ ಆ ಪಕ್ಷ ಸೋಲಬೇಕಾಯಿತು ತೆಲಂಗಾಣದಲ್ಲಿ ಸಿಎಂ ಸಿದ್ದರಾಮಯ್ಯ ಮೂರ್ನಾಲ್ಕು ಬಾರಿ ಪ್ರಚಾರ ಮಾಡಿದ್ದಾರೆ ಎಂದು ಹೇಳಿದರು.