ಭಾರತೀನಗರ: ಕೃಷಿ ಸಚಿವ ಹಾಗೂ ಮಂಡ್ಯ ಜಿಲ್ಲಾಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಭಾರತೀನಗರಕ್ಕೆ ಆಗಮಿಸುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹಾರ-ತೂರಾಯಿ ಹಿಡಿದು ಅಭಿನಂದಿಸಿ ಗೌರವಿಸಿದರು.
ನಂತರ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಹಲಗೂರು ವೃತ್ತದಲ್ಲಿರುವ ವಿಶ್ವೇಶ್ವರಯ್ಯ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಮಸ್ಕರಿಸಿದರು.
ನಂತರ ಎನ್.ಚಲುವರಾಯಸ್ವಾಮಿ ಅವರು ಮಾತನಾಡಿ, ನಿಮ್ಮ ಅಭಿಮಾನ ಪ್ರೀತಿಗೆ ನಾನು ಸದಾ ಚಿರಋಣಿಯಾಗಿರುತ್ತೇನೆ. ಮಂಡ್ಯಜಿಲ್ಲೆಯನ್ನು ಅಭಿವೃದ್ದಿಗೊಳಿಸಲು ಶ್ರಮಿಸುತ್ತೇನೆ. ಕೊಟ್ಟ ಮಾತಿನಂತೆ ಸರ್ಕಾರ ಆಡಳಿತ ನಡೆಸಿ ಜನರ ಮನಸ್ಸಿಗೆ ಕಾಂಗ್ರೆಸ್ ಪಕ್ಷ ಹತ್ತಿರವಾಗಲಿದೆ ಎಂದರು.
ಯಾವುದೇ ಗೊಂದಲಗಳು ಬೇಡ, ಸರ್ಕಾರ ನೀಡಿರುವ ೫ ಗ್ಯಾರಂಟಿಗಳನ್ನು ಈಡೇರಿಸಲಿದೆ. ಮುಂದೆ ಬರುವ ಲೋಕಸಭಾ ಚುನಾವಣೆಗೂ ನಿಮ್ಮಗಳ ಆಶೀರ್ವಾದ ಅವಶ್ಯಕವಾಗಿದೆ ಎಂದರು.
ನಂತರ ಕಾರ್ಯಕರ್ತರು ಮಳವಳ್ಳಿ ಕಾಯಕ್ರಮವೊಂದಕ್ಕೆ ಬೀಳ್ಕೊಟ್ಟರು.
ಇದೇ ವೇಳೆ ಕಾಂಗ್ರೆಸ್ ಹಿರಿಯ ಮುಖಂಡರಾದ ಬಿ.ಎಂ.ನAಜೇಗೌಡ, ಹಾಗಲಹಳ್ಳಿ ಬಸವರಾಜೇಗೌಡ, ಹೊನ್ನಲಗೆರೆ ವೆಂಕಟೇಶ್, ಎ.ಎಸ್.ರಾಜೀವ್, ಮೆಣಸಗೆರೆ ಮಧು, ಪ್ರಕಾಶ್, ದೇವೇಗೌಡನದೊಡ್ಡಿ ಗಿರೀಶ್, ಅಣ್ಣೂರು ಸಿದ್ದಪ್ಪ, ಕಾರ್ಕಹಳ್ಳಿ ಸ್ವರೂಪ್‌ಚಂದ್ರ, ಕೆ.ಎಂ.ದೊಡ್ಡಿ ಸಜನ್, ಕೆ.ಟಿ.ಶ್ರೀನಿವಾಸ್, ಹಾಗಲಹಳ್ಳಿ ಪುಟ್ಟಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.