ಎಡತೊರೆ ಮಹೇಶ್
ಹೆಚ್ ಡಿ ಕೋಟೆ: ಪಟ್ಟಣದ ಕಬಿನಿ ಕೇರ್ ಕೇಂದ್ರದಲ್ಲಿ ಸಾಮಾಜಿಕ ಹೋರಾಟಗಾರ ಬೌದ್ದ ಅನುಯಾಯಿ ಹೈರಿಗೆ ಶಿವರಾಜ್ ರವರಿಗೆ ಕಳೆದ ವಾರ ದೆಹಲಿಯ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ವತಿಯಿಂದ ಬುದ್ಧರ ಹೆಸರಲ್ಲಿ ಪ್ರಶಸ್ತಿ ನೀಡಿ ಗೌರವಿಸಿದ ಹಿನ್ನೆಲೆಯಲ್ಲಿ ಅವರ ಹಿತೈಷಿಗಳು ಸೇರಿ ಇಂದು ಅವರನ್ನ ಅಭಿನಂದಿಸಿದರು.
ಈ ಅಭಿನಂದನಾ ಸಮಾರಂಭ ಕುರಿತು ಉಮೇಶ್. ಬಿ.ನೂರಲಕುಪ್ಪೆ ಮಾತಾನಾಡಿ, ಹೈರಿಗೆ ಶಿವರಾಜ್ ಅವರು ಕಳೆದ ನಾಲ್ಕು ದಶಕಗಳಿಂದ ಶೈಕ್ಷಣಿಕ ಸಾಮಾಜಿಕ ರಾಜಕೀಯ ಕ್ಷೇತ್ರಗಳಲ್ಲಿ ಸಮುದಾಯದ ಅಭಿವೃದ್ಧಿಗಾಗಿ ಹಗಲಿರುಳು ಎನ್ನದೆ ಸೇವೆ ಮಾಡಿದ್ದಾರೆ. ಈ ನಾಲ್ಕು ದಶಕಗಳ ಅವಧಿಯಲ್ಲಿ ಯಾವುದೇ ಫಲಾಪೇಕ್ಷೆ ಪಡೆಯದೆ ನಿಸ್ವಾರ್ಥ ಸೇವೆ ಮಾಡಿ ಶೋಷಿತ ಸಮುದಾಯಗಳ ಏಳಿಗೆಗೆ ನಿರಂತರವಾಗಿ ದಣಿವರಿಯದೇ ದುಡಿದಿರುವ ಅತ್ಯಂತ ಪ್ರಾಮಾಣಿಕ ವ್ಯಕ್ತಿಯಾಗುದ್ದು. ಪ್ರತಿ ಹಳ್ಳಿಯಲ್ಲಿಯೂ ತನ್ನದೆ ಆದ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ ಎಂದರು.
ಕಳೆದ ಎರಡು ದಶಕಗಳಿಂದ ಬಹುಜನ ಚಳುವಳಿಯಲ್ಲಿ ಗುರುತಿಸುಕೊಂಡು ಜನ ಚಳವಳಿ ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ವಿಶೇಷವಾಗಿ ಹೈರಿಗೆ ಶಿವರಾಜ್ ರವರನ್ನ ಇತರೆ ಸಮುದಾಯದವರೂ ಕೂಡ ಹೆಚ್ಚಾಗಿ ಗೌರವಿಸುವಂತ ಮುಖಂಡತ್ವ ಬೆಳೆಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ವತಿಯಿಂದ ದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಇವರ ಸಾಮಾಜಿಕ ಮತ್ತು ದಮ್ಮ ಕಾರ್ಯವನ್ನು ಗುರುತಿಸಿ ಬುದ್ದರ ಹೆಸರಿನಲ್ಲಿ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಹಿತೈಸಿಗಳು ಅಭಿನಂದನೆ ಸಲ್ಲಿಸಲಾಗುತ್ತಿದೆ ಎಂದು ಶ್ಲಾಘಿಸಿದರು.
ಇದೆ ವೇಳೆ ಡಾ.ಕೃಷ್ಣಮೂರ್ತಿ ಚಮರಂ ಮಾತಾಡಿ ನಾವು ಬಹುಜನ ಚಳುವಳಿಯಿಂದಲೂ ಗಮನಿಸುತ್ತಿದ್ದೆವೆ. ಯಾವ ಸಮುದಾಯಕ್ಕೂ ಯಾವ ವರ್ಗಕ್ಕೂ ನೋವಾಗದಂತೆ ಎಲ್ಲರ ಹಿತ ಕಾಪಾಡುವಂತ ವ್ಯಕ್ತಿತ್ವ ಹೊಂದಿರುವ ಶಿವರಾಜ್ ರವರು ಇನ್ನೂ ಹೆಚ್ಚಿನ ಕಾಲ ಶೋಷಿತ ಸಮುದಾಯಗಳ ಪರವಾದ ಧ್ವನಿಯಾಗಬೇಕಾಗಿದೆ, ಅವರು ಮುಂದೆಯೂ ಉತ್ಸುಕರಾಗಿ ಎಲ್ಲಾ ಸಮಾಜದ ಒಗ್ಗೂಡುವಿಕೆಗಾಗಿ ಕೆಲಸ ಮಾಡಲಿ ಎಂದು ಆಶಿಸಿದರು.
ಇದೆ ಸಂದರ್ಭದಲ್ಲಿ ಡಾ. ಯಶ್ವಂತ್, ಕಾರ್ಮಿಕ ಮುಖಂಡ ಅಕ್ಬರ್ ಪಾಷ, ಪೋಲಿಸ್ ಇಲಾಖೆಯ ಎನ್.ಜಿ.ಪುರುಷೋತ್ತಮ್, ಉಪನ್ಯಾಸಕ ದೇವರಾಜ್ ಮಲಾರ, ಹಿರಿಯ ಮುಖಂಡರಾದ ಸುರೇಂದ್ರ ಸಿಂಗ್. ಮಾಸ್ತಯ್ಯ. ಚಲುವರಾಜ್, ಚಿಕ್ಕಣ್ಣ. ಪಿಡಿಒ ಪ್ರಕಾಶ್. ಕಾರ್ಯದರ್ಶಿ ಶಿವರಾಜ್ ಸೇರಿದಂತೆ ಮತ್ತಿತರರು ಹಾಜರಿದ್ದರು.