Thursday, April 10, 2025
Google search engine

Homeರಾಜ್ಯಹೊಸ ವರ್ಷಾಚರಣೆ ಶಾಂತಿಯುತವಾಗಿ ಆಚರಿಸಿದ ರಾಜ್ಯದ ಯುವಕರಿಗೆ ಅಭಿನಂದನೆ : ಸಚಿವ ಡಾ.ಜಿ.ಪರಮೇಶ್ವರ್

ಹೊಸ ವರ್ಷಾಚರಣೆ ಶಾಂತಿಯುತವಾಗಿ ಆಚರಿಸಿದ ರಾಜ್ಯದ ಯುವಕರಿಗೆ ಅಭಿನಂದನೆ : ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು : ನಿನ್ನೆ ಮಧ್ಯರಾತ್ರಿ 12 ಗಂಟೆಗೆ ಎಲ್ಲೆಡೆ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ, 2025 ಹೊಸ ವರ್ಷವನ್ನು ಸ್ವಾಗತಿಸಿ ರಾಜ್ಯದ ಯುವಜನರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಯುವಕ ಮತ್ತು ಯುವತಿಯರು ಮದ್ಯದ ಅಮಲಿನಲ್ಲಿ ತೇಲಾಡಿ, ಹೊಸ ವರ್ಷವನ್ನು ಸ್ವಾಗತಿಸಿದರು. ಈ ಒಂದು ಸಂಭ್ರಮಾಚರಣೆ ವೇಳೆ ಎಲ್ಲಿಯೂ ಅಹಿತಕರ ಘಟನೆ ನಡೆದಿಲ್ಲ. ಈ ವಿಚಾರವಾಗಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ರಾಜ್ಯದ ಯುವಜನತೆಗೆ ಅಭಿನಂದನೆ ತಿಳಿಸಿದರು.

ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಿನ್ನೆ ರಾತ್ರಿ ಹೊಸ ವರ್ಷದ ಆಚರಣೆಯಲ್ಲಿ ಜನ ಭಾಗವಹಿಸಿದ್ದರು. ಸಂಭ್ರಮಾಚರಣೆಯ ವೇಳೆ ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಪೊಲೀಸರು ಕ್ರಮ ಕೈಗೊಂಡಿದ್ದರು. ನಾನು ಎಲ್ಲಿಯೂ ಭೇಟಿ ನೀಡಿಲ್ಲ ಎಲ್ಲರೂ ಶಾಂತಿಯಿಂದ ಹೊಸ ವರ್ಷ ಆಚರಣೆ ಮಾಡಿದ್ದಾರೆ. ರಾಜ್ಯದ ಯುವಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಜಿ.ಪರಮೇಶ್ವರ್ ತಿಳಿಸಿದರು.

ಡಿಕೆ ಸುರೇಶ್ ಸಹೋದರಿ ಎಂದು ಐಶ್ವರ್ಯ ಗೌಡ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿದ ಅವರು, ಈ ಸಂಬಂಧ ಡಿಕೆ ಸುರೇಶ್ ಅವರು ದೂರು ನೀಡಿದ್ದಾರೆ.ಪೊಲೀಸರು ವಿಚಾರಣೆ ಮಾಡುತ್ತಾರೆ.ಸರ್ಕಾರ ಇದರಲ್ಲಿ ಭಾಗಿಯಾಗಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದರು.

ಇನ್ನು ಬೀದರ್ ನಲ್ಲಿ ಗುತ್ತಿಗೆದಾರ ಸಚಿನ್ ಪಂಚಾಳ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಕಲ್ಬುರ್ಗಿಯಲ್ಲಿ ಬಿಜೆಪಿ ನಾಯಕರು ಬಿಜೆಪಿ ನಾಯಕರ ಪ್ರತಿಭಟನೆ ವಿಚಾರವಾಗಿ, ಪ್ರಿಯಾಂಕ ಖರ್ಗೆ ಅವರೇ ತಮ್ಮ ಪಾತ್ರ ಇಲ್ಲ ಎಂದು ಹೇಳಿದ್ದಾರೆ. ತನಿಖೆ ನಡೆಯುತ್ತಿದೆ ವರದಿ ಏನು ಬರುತ್ತದೆ ನೋಡೋಣ. ತನಿಖಾ ವರದಿ ಏನು ಬರುತ್ತೋ ಅದರಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದರು.

RELATED ARTICLES
- Advertisment -
Google search engine

Most Popular