ಮಂಡ್ಯ: ಕಾಂಗ್ರೆಸ್ ನವರು ದೊಡ್ಡ ಕಳ್ಳರು ಎಂದು ಕಾಂಗ್ರೆಸ್ ವಿರುದ್ಧ ಶಾಸಕ ಹೆಚ್.ಟಿ.ಮಂಜು ವಾಗ್ದಾಳಿ ನಡೆಸಿದರು.
ಮಂಡ್ಯದಲ್ಲಿ ಹೆಚ್ ಡಿ ಕುಮಾರಸ್ವಾಮಿ ಕರೆಂಟ್ ಕಳ್ಳ ಕಾಂಗ್ರೆಸ್ ಟೀಕೆಗೆ ಪ್ರತಿಕ್ರಿಯಿಸಿ, ಇವರು ಏನೇನು ಕಳ್ಳತನ ಮಾಡ್ತಿದ್ದಾರೆ? ಬಿಲ್ಡಿಂಗ್ ಕಳ್ಳರು, ಭೂಮಿ ಕಳ್ಳರು ದೊಡ್ಡ ಕಳ್ಳರು ಇವರು. ಕುಮಾರಸ್ವಾಮಿ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಎಂದು ಹರಿಹಾಯ್ದರು.
ಗುತ್ತಿಗೆದಾರನ ನೆಗ್ಲಿಜೆನ್ಸಿ ಇಂದ ಹೀಗಾಗಿದೆ. ಪದೆ ಪದೆ ಪ್ರವೋಕ್ ಮಾಡೋದು ಸರಿಯಲ್ಲ. ಇವರ ವಿಕೃತ ಮನಸ್ಸು ಹೇಗಿದೆ? ರಾಜಕೀಯ ತೀಟೆಗಾಗಿ ಇವರು ಮಾಡ್ತಿದ್ದಾರೆ. ಇವರು ಏನು ಕಳ್ಳತನ ಮಾಡ್ತಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಕುಮಾರಣ್ಣ ಅವರ ಬಗ್ಗೆ ಮಾತನಾಡೋ ನೈತಿಕತೆ ಕಾಂಗ್ರೆಸ್ ಗೆ ಇಲ್ಲ. ನಮ್ಮ ಕೆಲಸ ಮಾಡುವುದನ್ನ ಮಾಡ್ತಿದ್ದೇವೆ. ಉಸ್ತುವಾರಿ ಸಚಿವರು ಕೆಲಸ ಮಾಡೋದರಲ್ಲಿ ವಿಫಲರಾಗಿದ್ದಾರೆ ಎಂದು ಕಿಡಿಕಾರಿದರು.